ಇರಾನ್: ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆ ದಾಖಲಾಗಿದೆ. ಭೂಕಂಪವು ವಾಯುವ್ಯ ಇರಾನ್ ಗೆ ಅಪ್ಪಳಿಸಿದೆ. ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 440 ಜನರು ಗಾಯಗೊಂಡಿದ್ದಾರೆ.
ಇರಾನ್-ಟರ್ಕಿ ಗಡಿಯ ಸಮೀಪವಿರುವ ಖೋಯ್ ನಗರದಲ್ಲಿ ಶನಿವಾರ ರಾತ್ರಿ 9:44 ಕ್ಕೆ(ಸ್ಥಳೀಯ ಕಾಲಮಾನ) ಭೂಕಂಪ ಸಂಭವಿಸಿದೆ.
ಕಂಪನಗಳು ಸಾಕಷ್ಟು ಪ್ರಬಲವಾಗಿವೆ ಎಂದು ವರದಿಯಾಗಿದೆ ಮತ್ತು ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಯಿತು. ನೆರೆಯ ಪೂರ್ವ ಅಜೆರ್‌ಬೈಜಾನ್ ನ ಪ್ರಾಂತೀಯ ರಾಜಧಾನಿಯಾದ ತಬ್ರಿಜ್ ಸೇರಿದಂತೆ ಹಲವಾರು ನಗರ ಗಳಲ್ಲಿಯೂ ಭೂಮಿ ಕಂಪಿಸಿದೆ.
ಭೂಕಂಪವು 10 ಕಿಮೀ ಆಳದಲ್ಲಿ ಖೋಯ್‌ನಿಂದ 14 ಕಿಮೀ ದಕ್ಷಿಣ-ನೈಋತ್ಯಕ್ಕೆ ಅಪ್ಪಳಿಸಿದೆ.