Monday, 16th September 2024

ಮಸೀದಿ ಬಳಿ ಬಾಂಬ್ ಸ್ಫೋಟ: 17 ಮಂದಿ ಸಾವು

ಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ, 17 ಮಂದಿ ಮೃತಪಟ್ಟಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಲೇಡಿ ರೀಡಿಂಗ್ ಹಾಸ್ಪಿಟಲ್ (LRC) ವಕ್ತಾರ ಮೊಹಮ್ಮದ್ ಅಸಿಮ್ ಅವರ ಪ್ರಕಾರ, ಗಾಯಗೊಂಡವರನ್ನ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸ ಲಾಗಿದೆ ಎಂದು ಪಾಕಿಸ್ತಾನದ ಪತ್ರಿಕೆ ವರದಿ ಮಾಡಿದೆ.

ಅಧಿಕಾರಿಗಳು ಈ ಪ್ರದೇಶವನ್ನ ಸಂಪೂರ್ಣವಾಗಿ ಸೀಲ್ ಮಾಡಿದ್ದು, ಆಂಬ್ಯುಲೆನ್ಸ್ಗಳಿಗೆ ಮಾತ್ರ ಪ್ರದೇಶ ಪ್ರವೇಶಿಸಲು ಅನುಮತಿಸಲಾಗುತ್ತಿದೆ ಎಂದು ಅಸೀಮ್ ಹೇಳಿದರು.