Thursday, 12th December 2024

ಎಸ್ಎಂಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗೋ ವ್ಯಾಲಿ 

ತುಮಕೂರು: ನಗರದ ಎಚ್.ಎಂ.ಎಸ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿಅಹಮದ್ ಅವರ ನೇತೃತ್ವದಲ್ಲಿ ನಡೆದ ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯ ವಾಗಿ ಭಾಗವಹಿಸಿ ಕೆಲವು ಔಷಧಿಯುಕ್ತ ಹಾಗೂ ಸಾಮಾನ್ಯ ಬಳಕೆಯಲ್ಲಿ ಉಪಯೋಗಕ್ಕೆ ಬರುವ ಸಸ್ಯಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಮುನ್ನುಡಿ ಬರೆದರು.
ಔಷದಿ ಸಸ್ಯಗಳ ಬೆಳೆಸಲು ಚಾಲನೆ ನೀಡಿದ ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿ ಅಹಮದ್ ಮಾತನಾಡಿ, ಮನುಷ್ಯ ಇಂದು ರೋಗ ರುಜಿನಗಳಿಲ್ಲದ ಬದುಕಬೇಕೆಂದರೆ ಆತ ಪ್ರಕೃತಿಯ ಮೊರೆ ಹೋಗಬೇಕಾಗುತ್ತದೆ.ವಾಯು ಮಾಲಿನ್ಯ ನಮ್ಮೆಲ್ಲರನ್ನು ಕಾಡುತ್ತಿದೆ.ಇದು ತೊಲಗಬೇಕೆಂದರೆ ನಾವುಗಳು ಹೆಚ್ಚು ಹೆಚ್ಚ ಗಿಡ ಮರಗಳನ್ನು ಬೆಳೆಸಬೇಕಾಗಿದೆ.ಅದರಲ್ಲಿಯೂ ಔಷಧಿ ಸಸ್ಯಗಳನ್ನು ಬೆಟ್ಟ, ಗುಡ್ಡ, ಕಾಡು ಮೇಡುಗಳಲ್ಲಿ ಬೆಳೆಸಿ, ಪರಿಸರದಲ್ಲಿನ ವಾಯು ಮಾಲಿನ್ಯ ವನ್ನು ತಡೆಯಲು ಮುಂದಾಗೋಣ. ಈ ನಿಟ್ಟಿನಲ್ಲಿ ಗೋಗ್ರಿನ್, ಗ್ರಿನ್ ವ್ಯಾಲಿ ಅಭಿಯಾನ ಅತ್ಯಂತ ಮಹತ್ವದ್ದು ಎಂದರು.
ಎಚ್.ಎಂ.ಎಸ್.ಐ.ಟಿ ಪ್ರಾಂಶುಪಾಲೆ ಡಾ.ಕವಿತಾ ಮಾತನಾಡಿ, ಗಿಡಗಳು,ಮರಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಮಾನವನಿಗೆ ಸಮೃಧ್ಧಿ ಜೀವನವನ್ನು ಒದಗಿಸುತ್ತವೆ. ಮಾನವರು ಸಹ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಕೆಲಸ ಗಳನ್ನು ಮಾಡಬೇಕೆಂದು ಪ್ರಕೃತಿಯ ಸಂದೇಶವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡೀನ್ ಅಕಾಡೆಮಿಕ್ ಡಾ. ಮಂಜುನಾಥಗೌಡ , ಬೋಧಕ ಹಾಗೂ ಇತರೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.