Thursday, 19th September 2024

7 ಲಕ್ಷ ರೂ. ಆದಾಯ: ತೆರಿಗೆ ವಿನಾಯಿತಿ ಮಿತಿ ಏರಿಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಹಣಕಾಸು ವರ್ಷದ ಬಜೆಟ್ ಮಂಡನೆ ವೇಳೆ ತೆರಿಗೆದಾರರ ನಿರೀಕ್ಷೆಯಂತೆ ಕೇಂದ್ರ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಿದೆ.

ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಈ ಹಿಂದೆ 5 ಲಕ್ಷ ರೂಪಾಯಿವರೆಗೆ ಆದಾಯವನ್ನು ಹೊಂದಿರುವವರು ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿರಲಿಲ್ಲ. 7 ಲಕ್ಷ ರೂಪಾ ಯಿವರೆಗೆ ಆದಾಯ ಹೊಂದಿರು ವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ.

ಕಳೆದ ವರ್ಷವೂ ಬಜೆಟ್ ವೇಳೆ ಕೇಂದ್ರ ಸರ್ಕಾರವು ತೆರಿಗೆ ಸ್ಲ್ಯಾಬ್ ಅನ್ನು ಪರಿಷ್ಕರಣೆ ಮಾಡುವ ನಿರೀಕ್ಷೆಯಿತ್ತು. ಈ ವರ್ಷವೂ ಈ ಹಣದುಬ್ಬದರ ನಡುವೆ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ ಬೇಡಿಕೆಯಿತ್ತು.

ಹೊಸ ಆದಾಯ ತೆರಿಗೆ ಸ್ಲ್ಯಾಬ್ 

ವಾರ್ಷಿಕ ಆದಾಯ- ತೆರಿಗೆ ದರ

0-3 ಲಕ್ಷ ರೂಪಾಯಿ – NIL

3-6 ಲಕ್ಷ ರೂಪಾಯಿ – 5%

6-9 ಲಕ್ಷ ರೂಪಾಯಿ – 10%

9-12 ಲಕ್ಷ ರೂಪಾಯಿ -15%

12-15 ಲಕ್ಷ ರೂಪಾಯಿ – 20%

15 ಲಕ್ಷ ರೂಪಾಯಿಗೂ ಅಧಿಕ – 30%

Read E-Paper click here