Sunday, 15th December 2024

ಅದಾನಿ ಗ್ರೂಪ್ ಲಿಂಕ್‌ನ ಸಂಸ್ಥೆಗೆ ಬೋರಿಸ್ ಸಹೋದರ ರಾಜೀನಾಮೆ

ಲಂಡನ್‌: ಅದಾನಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಯುಕೆ ಮೂಲದ ಹೂಡಿಕೆ ಸಂಸ್ಥೆಯಲ್ಲಿ ಡೈರೆಕ್ಟರ್ ಸ್ಥಾನ ದಲ್ಲಿದ್ದ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಲಂಡನ್ ಮೂಲದ ಎಲಾರಾ ಕ್ಯಾಪಿಟಲ್ ಸಂಸ್ಥೆಯ ನಿರ್ವಾಹಕರಾಗಿ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್‌ರ 51 ವರ್ಷದ ಕಿರಿಯ ಸಹೋ ದರ ಲಾರ್ಡ್ ಜೋ ಜಾನ್ಸನ್ ನೇಮಕಗೊಂಡಿದ್ದರು. ಅದಾನಿ ಗ್ರೂಪ್ ಎಫ್‌ಪಿಒ ಅನ್ನು ಹಿಂಪಡೆಯುವ ಘೋಷಣೆ ಮಾಡಿದ ದಿನವೇ ಲಾರ್ಡ್ ಜೋ ಜಾನ್ಸನ್ ರಾಜೀನಾಮೆ ನೀಡಿದ್ದಾರೆ.

ನಾನು ನನ್ನ ವೈಯಕ್ತಿಕ ಅನುಭವದ ಕೊರತೆಯಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಲಾರ್ಡ್ ಜೋ ಜಾನ್ಸನ್ ತಿಳಿಸಿದ್ದಾರೆ.