Sunday, 15th December 2024

ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಅಭಿಯಾನ

ಗುಬ್ಬಿ: ತಾಲೂಕಿನ  ಮಾರಾಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ  ವತಿಯಿಂದ ಸ್ವಚ್ಛ ಅಭಿಯಾನ ಶನಿವಾರ ಕಾರ್ಯಕ್ರಮ ಆಯೋಜಿಸ ಲಾಯಿತು.

 ಜಿಲ್ಲಾ ಪಂಚಾಯತ್ ಸಿ ಇ ಓ ಡಾ. ವಿದ್ಯಾ ಕುಮಾರಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಬಹು ಮುಖ್ಯ ಜನಸಾಮಾನ್ಯರು ಅನೇಕ ಕಾಯಿಲೆಗಳಿಂದ ತೊಂದರೆಗೊಳಗಾಗುವು ದನ್ನು  ಕಾಣುತ್ತೇವೆ  ಉತ್ತಮ ಆರೋಗ್ಯಕ್ಕೆ  ಸುತ್ತಮುತ್ತಲಿನ ಪರಿಸರ ಬಹಳ ಮುಖ್ಯವಾಗಿ ರುತ್ತದೆ  ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಂಡಾಗ ಸ್ವಚ್ಛ ಸುಂದರ ಗ್ರಾಮವನ್ನಾಗಿ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ ಪಂ ಇಓ ವಿ.ಪರಮೇಶ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ತನುಜಾ , ಮಾನವ ಹಕ್ಕುಗಳು ಮತ್ತು ಗ್ರಾಹಕರ ಸಂರಕ್ಷಣ ತಾಲೋಕ್ ಅಧ್ಯಕ್ಷ ರಾದ ಮಾರಾಶೆಟ್ಟಿಹಳ್ಳಿ ಬಸವರಾಜ್, ಗ್ರಾ ಪಂ ಸದಸ್ಯರು  ಮತ್ತು ಗ್ರಾಮಸ್ಥರು ಹಾಜರಿ ದ್ದರು.