Thursday, 12th December 2024

ಭೂ ವಂಚನೆ ಪ್ರಕರಣ: ಮಲಯಾಳಂ ನಟ ಬಂಧನ

 ಕೊಚ್ಚಿ: ಭೂ ವಂಚನೆ ಪ್ರಕರಣದಲ್ಲಿ ಮಲಯಾಳಂ ನಟ ಬಾಬುರಾಜ್ ಅವರನ್ನು ಬಂಧಿಸಲಾಗಿದೆ. ಕೇರಳ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಆದಿಮಾಲಿ ಪೊಲೀಸ್ ಠಾಣೆಯಲ್ಲಿ ಬಾಬುರಾಜ್ ಶರಣಾಗಿದ್ದಾರೆ.

ಕಂದಾಯ ಇಲಾಖೆಯ ಕ್ರಮ ಎದುರಿಸುತ್ತಿದ್ದ ಇಡುಕ್ಕಿಯ ಕಲ್ಲಾರ್‌ನಲ್ಲಿರುವ ತಮ್ಮ ರೆಸಾರ್ಟ್ ನ್ನು ಬಾಬುರಾಜ್ ಗುತ್ತಿಗೆಗೆ ನೀಡಿದ್ದರು. ಹೈಕೋರ್ಟ್ ನಿರ್ದೇಶನದನ್ವಯ ಅವರನ್ನು ಬಂಧಿಸಲಾಗಿತ್ತು. ಇಡುಕ್ಕಿಯ ಸ್ಥಳೀಯ ನ್ಯಾಯಾಲಯದಲ್ಲಿ ಅವರನ್ನು ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾದರು ಎನ್ನಲಾಗಿದೆ.