ಪಾಟ್ನಾ: ಬಿಹಾರ ಸರ್ಕಾರವು ಸರನ್ ಜಿಲ್ಲೆಯಲ್ಲಿ ಫೆ.8ರ ರಾತ್ರಿ 11 ಗಂಟೆಯವರೆಗೆ 23 ಸಾಮಾಜಿಕ ನೆಟ್ವರ್ಕಿಂಗ್ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳನ್ನು ತಾತ್ಕಾಲಿಕ ವಾಗಿ ನಿಷೇಧಿಸಿದೆ.
ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಫೆ.5 ರಂದು ಬಿಹಾರದ ಛಾಪ್ರಾ ಜಿಲ್ಲೆಯ ಮಾಂಝಿಯಲ್ಲಿ ಯುವಕನೊಬ್ಬನನ್ನು ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸ ಲಾಗಿದ್ದು, ಇದು ಗ್ರಾಮದ ಮುಖ್ಯಸ್ಥರ ಮನೆ ಮತ್ತು ಕೋಳಿ ಫಾರಂಗೆ ಜನಸಮೂಹ ಬೆಂಕಿ ಹಚ್ಚಲು ಕಾರಣವಾಯಿತು ಮತ್ತು ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಕಾಲ ಗಲಾಟೆ ನಡೆದಿದೆ.
ಘಟನೆ ವರದಿಯಾದ ನಂತರ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇಲ್ಲಿನ ಉದ್ವಿಗ್ನ ವಾತಾವರಣ ಕಂಡು ಬಿಹಾರ ಸರ್ಕಾರವು ಸಾಮಾಜಿಕ ಜಾಲತಾಣಗಳ ಸೇವೆಯನ್ನು ತಾತ್ಕಾಲಿಕವಾಗಿ ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ರಾಜ್ಯ ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಫೇಸ್ಬುಕ್, ಟ್ವಿಟರ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸೇರಿದಂತೆ 20 ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಗಳ ಸೇವೆಯನ್ನು ನಿಷೇಧಿಸಲಾಗಿದೆ.