ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಕೇವಲ ಮತಬೇಟೆಗಾಗಿ ರಣಬೇಟೆಗಾರನಾಗಿ ಸಾತ್ವಿಕ ಬ್ರಾಹ್ಮಣರ ವಿರುದ್ಧ ಅಪ್ರಸ್ತುತ ವಿಷಯವನ್ನು ಅಸಂಬದ್ಧವಾಗಿ ಪ್ರತಿಪಾದಿಸಿ ತಮ್ಮ ಜ್ಞಾನ ವನ್ನು ಪ್ರದರ್ಶಿಸಿ ‘ಕರ್ಮ ಎಲ್ಲಿದ್ಯಪ್ಪಾ’ ಎಂದು ಹುಡುಕಿಕೊಂಡು ಹೋಗುವುದು ಬುದ್ಧಿವಂತರ ಲಕ್ಷಣವಲ್ಲ. ಭಯೋತ್ಪಾದಕರ ಧರ್ಮ ಮತ್ತು ಜಾತಿ ಯನ್ನು ಅದೇ ಗಂಡೆದೆಯಿಂದ.
ಇತಿಹಾಸದಿಂದಲೇ ಹೇಳಬೇಕೆಂದರೆ ಉತ್ತರಭಾರತದಲ್ಲಿ ಬೆರಳೆಣಿಯಷ್ಟು ಬ್ರಾಹ್ಮಣ ರಾಜರು ಸಾಮ್ರಾಜ್ಯ ಕಟ್ಟಿ ರಾಜ್ಯಭಾರ ನಡೆಸಿದ್ದಾರೆ. ಆದರೆ ಹೆಚ್ಚಾಗಿ ಬ್ರಾಹ್ಮಣ ವರ್ಗದ ಪಂಡಿತರು, ಮೇಧಾವಿಗಳು, ವಿದ್ವಾಂಸರುಗಳು ರಾಜಾಸ್ಥಾನಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿ ಆಯಾ ಸಾಮ್ರಾಜ್ಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಇಸ್ಲಾಂ ಆಕ್ರಮಣ ತಡೆದು ಸನಾತನ ಧರ್ಮದ ಉಳಿವಿಗಾಗಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ವಿದ್ಯಾರ ಣ್ಯರು, ಮುಂದೆ ಶ್ರೀಕೃಷ್ಣದೇವ ರಾಯನನ್ನು ಸ್ವಂತ ಮಗನಂತೆ ಬೆಳೆಸಿ ಆತನ ಸುವರ್ಣಯುಗಕ್ಕೆ ಶ್ರಮಿಸಿದ ತಿಮ್ಮರಸರು ಮಾಡಿದ್ದು ಇದನ್ನೇ.
ಕನ್ನಡಿಗರ ಸ್ವಾಭಿಮಾನದ ದ್ಯೋತಕವಾಗಿ ಉದಯಿಸಿದ ಕದಂಬ ವಂಶದ ಮಯೂರಶರ್ಮ ಬ್ರಾಹ್ಮಣನಾದರೂ ಕನ್ನಡಿಗರಿಗಾಗಿ ಜನಿವಾರವನ್ನು ತ್ಯಜಿಸಿ ಹೋರಾಟಕ್ಕಿಳಿದು ಕನ್ನಡ ಸಾಮ್ರಾಜ್ಯ ಸ್ಥಾಪಿಸಿದ ಅಗ್ರಜ. ಇಂಥ ಬ್ರಾಹ್ಮಣ ಪಂಡಿತರಿಗೆ ರಾಜ ಮರ್ಯಾದೆ ನೀಡಿ ಅವರನ್ನು ಆಧರಿಸುತ್ತಿದ್ದ ರಾಜರುಗಳು ಕ್ಷತ್ರಿಯ, ವೈಶ್ಯ, ಶೂದ್ರರಾದರೂ ಅವರುಗಳು ಹೊರಡಿಸುತ್ತಿದ್ದ ಶಾಸನಗಳಲ್ಲಿ ಒಂದು ಎಚ್ಚರಿಕೆಯ ಸಾಲನ್ನು ಸೇರಿಸುತ್ತಿದ್ದರು. ಸ್ವತಃ ರಾಜನೇ ದಾನಧರ್ಮ ಗಳನ್ನು ನೀಡಿದರೂ ಅದಕ್ಕೆ ತಾನೇ ಆಗಲಿ ಮುಂದೆ ಬರುವ ಇನ್ನಾವನೇ ಅರಸನಿರಲಿ ಅದಕ್ಕೆ ಬದ್ಧನಾಗಿರಬೇಕೆಂಬ ಎಚ್ಚರಿಕೆಯಲ್ಲಿ ‘ಈ ಮಾತಿಗೆ ತಪ್ಪಿದೊಡೆ ಬ್ರಹ್ಮಹತ್ಯೆ ಗೋಹತ್ಯಾದಿ ಮಹಾಪಾಪಂಗಳಿಗೆ ಗುರಿಯಾಗುತ್ತಾರೆ…’ ಎಂದು ಬರೆಸುತ್ತಿದ್ದರು. ಇದರ ಉದ್ದೇಶವಿಷ್ಟೇ.
ಮಹಾಜ್ಞಾನಿ ಬ್ರಹ್ಮನ ಒಂದು ತಲೆಯನ್ನು ಕಡಿದ ಭೈರವನಿಂದ ಆರಂಭಗೊಂಡ ‘ಬ್ರಹ್ಮಹತ್ಯೆ’ ದೋಷವು ಅತ್ಯಂತ ಮಹಾಪಾಪ ಎಂದು ಪರಿಗಣಿ
ಸಲಾಗಿದೆ. ಈ ದೋಷವನ್ನು ಹೊಂದಿರುವ ವ್ಯಕ್ತಿ ಈ ಜನ್ಮದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲೂ ದೋಷವನ್ನು ಅನುಭವಿಸುತ್ತಾನೆ. ಬ್ರಾಹ್ಮಣ ರನ್ನು ಕಾರಣವಿಲ್ಲದೆ ಸಂಹಾರ ಮಾಡುವುದು ಅಥವಾ ಪ್ರಜ್ಞಾಪೂರ್ವಕದಿಂದಲೇ ಹತ್ಯೆ ಮಾಡುವುದು, ತಾಯಿಯಿಂದ ಮಗುವನ್ನು, ಹಸುವಿನಿಂದ
ಕರುವನ್ನು ದೂರ ಮಾಡುವುದು ಕೂಡ ಬ್ರಹ್ಮ ಹತ್ಯೆಗೆ ಸಮಾನ. ಇಲ್ಲಿ ಬ್ರಹ್ಮಹತ್ಯೆ ಎಂಬುದು ಒಂದು ಸಾಂಕೇತಿಕವಾಗಿ ಪವಿತ್ರ ಮತ್ತು ಎಲ್ಲ ಸಾತ್ವಿಕ ಜೀವಿಗಳನ್ನು ಮತ್ತು ಸುದುದ್ದೇಶ ಕ್ರಿಯೆಗಳನ್ನು ಹಾಳುಮಾಡುವುದೂ ‘ಬ್ರಹ್ಮಹತ್ಯೆ’ ಎಂದೇ ಪರಿಗಣಿಸಲಾಗಿದೆ.
ಅನ್ಯೋನ್ಯವಾಗಿರುವ ಗಂಡಹೆಂಡತಿ ಮಧ್ಯೆ ಸಮಸ್ಯೆ ತಂದು ದೂರ ಮಾಡುವುದು ಕೂಡ ಬ್ರಹ್ಮಹತ್ಯೆಗೆ ಸಮಾನ. ಈ ರೀತಿ ಬ್ರಹ್ಮಹತ್ಯೆಗೆ ಒಳಗಾದವರು ಮುಂದಿನ ಜನ್ಮದಲ್ಲೂ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಧಾರ್ಮಿಕ ಚಿಂತನೆ ಹೇಳುತ್ತದೆ. ಬ್ರಾಹ್ಮಣನನ್ನು ಕೊಲ್ಲುವುದರಿಂದ ಈ ದೋಷ ಉಂಟಾಗುವುದು ಎಂದು ಧರ್ಮ ಶಾಸ ಹೇಳುತ್ತದೆ. ಕೆಲ ಗ್ರಂಥಗಳ ಪ್ರಕಾರ ನರಹತ್ಯೆ ಹಾಗೂ ಇತರ ಹಲವು ಪಾಪಕರ್ಮಗಳಿಂದಾಗಿ ಬ್ರಹ್ಮಹತ್ಯಾ ದೋಷ ಉಂಟಾಗುವುದೆಂದು ಉಖಿಸಲಾಗಿದೆ.
ಈ ದೋಷಕ್ಕೊಳಗಾದವನು ಬದುಕಿನಲ್ಲಿ ಮಾನಸಿಕ ಖಿನ್ನತೆ, ಅಸ್ವಸ್ಥತೆ, ಭಯ, ಆತ್ಮವಿಶ್ವಾಸದ ಕೊರತೆ, ವೈಫಲ್ಯಗಳು, ಚಡಪಡಿಕೆ, ಉದ್ವೇಗ, ಆರ್ಥಿಕ ಸಮಸ್ಯೆ, ವೈವಾಹಿಕ ಸಂಬಂಧದಲ್ಲಿ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ರಾವಣನನ್ನು ಕೊಂದ ರಾಮನೂ, ವೃತ್ರಾಸುರನನ್ನು ಕೊಂದ ಇಂದ್ರನೂ, ಗುರು ದ್ರೋಣಾಚಾರ್ಯರನ್ನು ಕೊಂದ ಪಾಂಡವರೂ ಬ್ರಹ್ಮಹತ್ಯೆಯ ಪಾಪಕ್ಕೊಳಗಾಗುತ್ತಾರೆ. ಹೀಗೆ ಬ್ರಹ್ಮಹತ್ಯೆ ದೋಷಕ್ಕೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕಥೆಗಳಿವೆ. ಇಡೀ ಭಾರತವನ್ನು ಆಳಿದ ರಾಜರುಗಳೇ ಬ್ರಾಹ್ಮಣ್ಯವನ್ನು ಗೌರವದಿಂದ ಆಧರಿಸಿಕೊಂಡು ಬಂದಿರುವಾಗ ಇಂದಿನ ಹುಲುಮಾನವರು ಬ್ರಾಹ್ಮಣ್ಯವನ್ನು ಅವಮಾನಿಸಿದರೆ ಅದು ಪಾಪವೋ ಮೌಢ್ಯವೋ ಅವರವರಿಗೇ ಅನುಭೂತಿಯಾಗುತ್ತದೆಯಷ್ಟೇ !
ಹಾಗಂತ ಈಗಿನ ಸಮಾಜದಲ್ಲಿ ಬ್ರಾಹ್ಮಣರನ್ನು ಹಿಂದಿನಂತೆ ದೇವರಂತೆ ಆರಾಧಿಸಬೇಕಿಲ್ಲ. ಆದರೆ ಸಾತ್ವಿಕನಾಗಿ ದೇವರು ಮೆಚ್ಚುವಂತೆ ಬಾಳುವ, ದೇವರ ಸಾಮಿಪ್ಯದಲ್ಲಿರುವಂತೆ ನಡೆದುಕೊಳ್ಳುವ ಯಾವ ಜಾತಿಧರ್ಮದವನೇ ಆಗಲಿ ಆತ ಆದರಣೀಯ. ಹಾಗೆಯೇ ಯಾವುದೋ ಕಾಲದಲ್ಲಿ ಯಾವನೋ ಒಬ್ಬ ಬ್ರಾಹ್ಮಣ ಅಪಚಾರವೆಸಗಿದರೆ ಆತನ ಜಾತಿಯನ್ನು ಇಟ್ಟುಕೊಂಡು ಈಗಿನವರನ್ನು ಜರಿಯುವುದು ಅವಿವೇಕತನ. ಇಷ್ಟಕ್ಕೂ ‘ಪ್ರಪಂಚದ ಜಾತ್ಯತೀತದ ಹೆಡ್ಡಾಫೀಸು ಜೆಡಿಎಸ್’ ಎಂದು ಬೀಗುವ ಕುಮಾರಸ್ವಾಮಿ, ಹೀಗೆ ಜಾತಿ ಹಿಡಿದು ದ್ವೇಷಕಾರುವುದು ಪಕ್ಷದ ವೈಚಿತ್ರ್ಯ! ತಮ್ಮಕುಟುಂಬದ ಶ್ರೇಯಸ್ಸಿಗೆ ಸದಾ ಹೋಮಹವನ ಪೂಜೆಗಳನ್ನು ಮಾಡುತ್ತ, ಅದಕ್ಕಾಗಿ ಶೃಂಗೇರಿಯನ್ನೇ ‘ಪವರ್ಹೌಸ್’ ಎಂದು ಪರಿಗಣಿಸಿ ರುವ, ಪಾಪಕರ್ಮ ಫಲಾಫಲಗಳನ್ನು ನಂಬಿರುವ ಕುಮಾರಸ್ವಾಮಿಯವರು ಮೇಲೆ ಹೇಳಲಾದ ಪುರಾಣಗಳನ್ನು ಓದಿ ಆತ್ಮಾವಲೋಕನ ಮಾಡಿಕೊಳ್ಳಬಹುದು.
‘ಕರ್ಮ ರಿಟನ್ಸ್’ ಎನ್ನುವ ಆಧುನಿಕ ಮಾತೊಂದಿದೆ. ಅದರಂತೆ ಕೇವಲ ಮತಬೇಟೆಗಾಗಿ ರಣಬೇಟೆಗಾರನಾಗಿ ಸಾತ್ವಿಕ ಬ್ರಾಹ್ಮಣರ ವಿರುದ್ಧ ಅವೈಜ್ಞಾನಿಕವಾಗಿ ಅಪ್ರಸ್ತುತ ಅಸಂಭದ್ಧವಾಗಿ ತಮ್ಮ eನವನ್ನು ಪ್ರದರ್ಶಿಸಿ ‘ಕರ್ಮ ಎಲ್ಲಿದ್ಯಪ್ಪಾ’ ಎಂದು ಹುಡುಕಿಕೊಂಡು ಹೋಗುವುದು ಬುದ್ಧಿವಂತರ ಲಕ್ಷಣವಲ್ಲ. ಮನಸ್ಸಿನಲ್ಲಿರುವ ಬ್ರಾಹ್ಮಣರ ವಿರುದ್ಧದ ಮತ್ಸರವನ್ನು ಹೊರಹಾಕಿ ನಂತರ ಹಳೇ ಮಾಡಲ್, ಹೊಸ ಮಾಡಲ್ ಬ್ರಾಹ್ಮಣರು ಎಂದೆಲ್ಲ ತಿಪ್ಪೆ ಸಾರಿಸುವುದು ಪ್ರಜಾಪ್ರಭುತ್ವಕ್ಕೆ ಹಾನಿಕರ. ಇಂದು ಬ್ರಾಹ್ಮಣರಲ್ಲೂ ನೀಚರು, ವಂಚಕರಿರಬಹುದು. ಅದು ಎಲ್ಲ ಜಾತಿಯಲ್ಲೂ ಇದೆ.
ಆದರೆ ಪ್ರಸ್ತುತದಲ್ಲಿ ಪೇಶ್ವ ಬ್ರಾಹ್ಮಣರು, ಮರಾಠ ಬ್ರಾಹ್ಮಣರು ಎಂದೆಲ್ಲ ಸಂಶೋಧನೆಗಿಳಿಯುವುದಕ್ಕಿಂತ ಹಿಂಸೆಯ ಲ್ಯಾಂಡ್ಮಾರ್ಕು ಇಸ್ಲಾಂ
ಮತಾಂಧತೆ, ಭಯೋತ್ಪಾದನೆಯ ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ-ನಾಡೋಜ ಪ್ರಶಸ್ತಿ ಪಡೆಯಬಹುದು.
ಬಿಜೆಪಿ ಪ್ರಹ್ಲಾದ್ ಜೋಶಿ ಎಂಬ ಬ್ರಾಹ್ಮಣನನ್ನು ಮುಖ್ಯಮಂತ್ರಿ ಮಾಡುತ್ತದೆ ಎಂಬ ಹೇಳಿಕೆ ನೀಡಿದ ಕೂಡಲೇ ಲಿಂಗಾಯಿತರು ಅಸಮಾಧಾನ ಗೊಂಡು ಕಾಂಗ್ರೆಸ್ ಅನ್ನು ಬೆಂಬಲಿಸಿದಲ್ಲಿ, ತನ್ನ ಪಕ್ಷಕ್ಕೆ ಲಾಭವಾಗಬಹುದು ಎಂಬುದು ಮಂಡಿಪೇಟೆಯಲ್ಲಿ ತರಕಾರಿಗಳನ್ನು ಇಳಿಸುವಾಗ ಕೆಳಗೆ ಚೆಲ್ಲುವ ತರಕಾರಿಗಳನ್ನು ಆಯ್ದು ತಂದು ಗುಡ್ಡೆ ವ್ಯಾಪಾರ ಮಾಡಿದಂತಷ್ಟೇ. ಕುಮಾರಸ್ವಾಮಿಗೆ ನಿಜಕ್ಕೂ ಬಿಜೆಪಿಯನ್ನು ಕೆಣಕುವ ಉದ್ದೇಶವಿದ್ದರೆ ಬಸನಗೌಡ ಪಾಟೀಲ್ ಯತ್ನಾಳರನ್ನೋ, ಅನಂತಕುಮಾರ್ ಹೆಗಡೆಯನ್ನೋ ಅಥವಾ ಸಿ.ಟಿ.ರವಿಯನ್ನೋ ಮುಖ್ಯಮಂತ್ರಿಯನ್ನಾಗಿ ಘೋಷಿಸಿ ಎಂದು ಸವಾಲು ಹಾಕಲಿ. ಅದರಿಂದಾದರೂ ಕಿತ್ತುಹೋದ ಜಾತ್ಯತೀತ ಡೋಂಗಿಗಳು, ಸೋಗಲಾಡಿಗಳ ಅಂಡಿಗೆ ಕೊಂಚ ಬೆಂಕಿ ತಗುಲಿಸದಂತಾದರೂ ಆಗುತ್ತದೆ.
ಕುಮಾರಸ್ವಾಮಿ ಹೇಳಿದಂತೆ ಪೇಶ್ವೆಯವರಾಗಲಿ, ಗಾಂಧಿಯನ್ನು ಕೊಂದ ಒಬ್ಬ ಗೋಡ್ಸೆಯ ಜಾತಿಯ ಬ್ರಾಹ್ಮಣ ಎಂಬ ಕಾರಣಕ್ಕಾಗಲೀ
ಕೇವಲ ಜಾತಿಕಾರಣವಿಟ್ಟು ಪ್ರಹ್ಲಾದ್ ಜೋಶಿಯವರನ್ನು ದೂಷಿಸಬಹುದಾದರೆ ಶತಮಾನಗಳಿಂದ ಹಿಂದೂಗಳ ಮಾರಣಹೋಮ ನಡೆಸಿದ
ಮತಾಂಧ ಇಸ್ಲಾಂ ದರೋಡೆಕೋರರ ಮತ್ತು ದಶಕಗಳಿಂದ ಕಾಶ್ಮೀರದಲ್ಲಿ ಮತ್ತು ದೇಶಾದ್ಯಂತ ಅಮಾಯಕ ಹಿಂದೂಗಳನ್ನು ಕೊಲ್ಲುತ್ತಾ ಬಂದಿ
ರುವ ಭಯೋತ್ಪಾದಕರ ಧರ್ಮ ಮತ್ತು ಜಾತಿ ಯನ್ನು ಅದೇ ಗಂಡೆದೆಯಿಂದ ಖಂಡಿಸಿ ಅವರನ್ನೂ ದೂಷಿಸುವ ಎದೆಗಾರಿಕೆ ತೋರುವುದು
ಯಾವಾಗ? ಪುರಾತನ ಪೇಶ್ವೆಯವರಿಗೆ, ಗೋಡ್ಸೆಯ ಅಪರಾಧಗಳಿಗೆ ಜಾತಿಯನ್ನು ಹೆಸರಿಸಬಹುದಾದರೆ ಮಂಡ್ಯದ ಮೇಲುಕೋಟೆಯ ಸಾವಿರಾರು ಹಿಂದೂಗಳನ್ನು ಕೊಂದ ಟಿಪ್ಪುವಿನ ಪೈಶಾಚಿಕತನಕ್ಕೆ ಧರ್ಮ-ಜಾತಿ ಇಲ್ಲವೇ? ಒಂದೊಮ್ಮೆ ಕುಮಾರಸ್ವಾಮಿ ಇಂಥ ‘ಶುದ್ಧ ಜ್ಞಾನ’ ಸಿದ್ಧಿಸಿಕೊಂಡರೆ ಮೊದಲಿಗೆ ಪಕ್ಕದ ಇರುವ ಸಿ.ಎಂ.ಇಬ್ರಾಹಿಂ ಸಾಹೇಬರ ಬುಡಕ್ಕೆ ಈರುಳ್ಳಿ ಪಟಾಕಿಯಿಟ್ಟು ಎಗರಿಸಬೇಕಾಗುತ್ತದೆ.
ಕುಮಾರಣ್ಣನವರೇ, ಗಾಂಧಿಯನ್ನು ಗೋಡ್ಸೆ ಕೊಂದ ಎಂಬುದು ಹಳೇ ರೆಕಾರ್ಡು ಪ್ಲೇಟು. ಆದರೆ ಗೋಡ್ಸೆ, ಗಾಂಧಿಯನ್ನು ಏಕೆ ಕೊಂದ ಎಂಬ ರೋಚಕವನ್ನು ಎಳೆಎಳೆಯಾಗಿ ಬಿಡಿಸಿ ಭಾಷಣ ಮಾಡಿ ಇತಿಹಾಸದ ಸತ್ಯವನ್ನು ತೆರೆದಿಟ್ಟು ನೋಡಿ, ನೀವು ಎಲ್ಲಾ ಹೋಗಿಬಿಡುತ್ತೀರಿ. ನರಕದಂತೆ ಬದಲಾಗಿರುವ ತಾಲಿಬಾನಿಗಳ ಅಫ್ಘಾನಿಸ್ತಾನ, ಪಾಕಿಸ್ತಾನ, ಟರ್ಕಿ ದೇಶಗಳಲ್ಲಿ ರೌರೌವ ನರಕ ಸೃಷ್ಟಿಯಾಗಿರುವುದು ಪುಳಿಚಾರು ಬ್ರಾಹ್ಮಣ ರಿಂದಲ್ಲ ಎಂಬ ಸಾಮಾನ್ಯ ಸತ್ಯವನ್ನು ಮನಗಂಡು ಟವಲಿನಿಂದ ನಿಧಾನವಾಗಿ ಮುಖವನ್ನು ಒರೆಸಿಕೊಳ್ಳಿ.
ಜನ ಪ್ರತಿಯೊಬ್ಬ ರಾಜಕಾರಣಿಯ ‘ಸಿನಿಮಾ’ವನ್ನೂ ನೋಡುತ್ತಿದ್ದಾರೆ. ಹೊಗಿಬಂದು ಮೂಗಿಯನ್ನು ಕಾಡಿದಂತೆ ಎಂದಿಗೂ ಹಿಂತಿರುಗಿ ಬೀಳದ ಬ್ರಾಹ್ಮಣರನ್ನೇ ಸದಾ ದೂಷಿಸಿದರೆ ನಿಮ್ಮಂಥವರನ್ನು ಒಬ್ಬ ‘ಕಾಮಿಡಿ ಕಿಲಾಡಿ’ ಎಂದಷ್ಟೇ ನೋಡಿ ಜನ ಕಾಲೆಳೆದು ಮನರಂಜನೆ
ಅನುಭವಿಸುತ್ತಾರಷ್ಟೇ! ಇಂಥದನ್ನು ಬಿಟ್ಟು ಕೋಟ್ಯಂತರ ಹೆಣ ಉರುಳಿಸಿದ ಇಸ್ಲಾಂ ಭಯೋತ್ಪಾದನೆ ಮತ್ತು ಅಂಥ ಜಾತಿಗಳ ವಿರುದ್ಧ ಖಂಡ
ನೀಯ ಹೇಳಿಕೆಗಳನ್ನು ಕೊಟ್ಟು ನೋಡಿ ನಿಮ್ಮ ತೆನೆಹೊತ್ತ ಮಹಿಳೆಯ ಮುಖದಲ್ಲಿ ಕಳೆ ಮೂಡುತ್ತದೆ. ಇಂದಿನ ಬ್ರಾಹ್ಮಣರು ದಿಢೀರ್ ಅವಕಾಶಗಳನ್ನು ಕೇಳುವುದಿಲ್ಲ. ಮಿಸಲಿಗಾಗಿ ಬಾಯಿಬಿಡುವುದಿಲ್ಲ.
ಅಸಂಖ್ಯಾತ ಬ್ರಾಹ್ಮಣ ಕುಟುಂಬಗಳು ದಲಿತರಿಗಿಂತ ಬಡವರಾಗಿದ್ದರೂ ಅವರಿಗಾಗಿ ಬ್ರಾಹ್ಮಣ ಮಠಾಽಶರು ಬೀದಿಗಿಳಿಯುವುದಿಲ್ಲ. ಬ್ರಾಹ್ಮಣರು ಎಷ್ಟೇ ಕಡುಬಡತನವಿದ್ದರೂ ಸಾಲಮಾಡಿಯಾದರೂ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿಸುತ್ತಾರೆಯೇ ಹೊರತು ಮಕ್ಕಳನ್ನು ಹುಟ್ಟಿಸಿ ಅನಕ್ಷರಸ್ಥರನ್ನಾಗಿಸಿ ಸರಗಳ್ಳತನ, ಪಿಕ್ ಪಾಕೆಟ್, ದರೊಡೆ, ಹತ್ಯೆಗಳನ್ನು ಮಾಡುವ ಪಾಪಿ ಗಳನ್ನಾಗಿಸುವುದಿಲ್ಲ. ಸಂವಿಧಾನವನ್ನು ಧಿಕ್ಕರಿಸಿ
ರಸ್ತೆಗಿಳಿಯುವುದಿಲ್ಲ. ಶಾಸಕನ ಮನೆಗೆ ಪೊಲೀಸ್ ಠಾಣೆಗೇ ಬೆಂಕಿ ಹಚ್ಚುವಂತೆ ಮಕ್ಕಳನ್ನು ಬೆಳೆಸುವುದಿಲ್ಲ.
ಬದುಕಿರುವವರಿಗಾಗಿ ಅರ್ಚನೆ ಹೋಮ ಹವನಗಳನ್ನು ಮಾಡಿ ಪಾಪ ಕಳೆಯುತ್ತಾರೆ, ಸತ್ತ ವರಿಗಾಗಿ ಪಿಂಡ ತರ್ಪಣ ಅರ್ಪಿಸಲು ನೆರವಾಗಿ
ಅವರ ಆತ್ಮಕ್ಕೆ ಶಾಂತಿ ನೀಡುವಂಥ ಕೆಲಸಮಾಡಿಸುತ್ತಾರೆಯೇ ಹೊರತು ಸ್ವಾರ್ಥಕ್ಕಾಗಿ ಸಮಯ ಸಾಧಕತನಕ್ಕಾಗಿ ಎಂಥ ಹೊಸಲನ್ನೂ ತಿಂದು
ತೇಗುವ ಅನಾಚಾರ ಕೆಲಸವನ್ನು ಮಾಡುವುದಿಲ್ಲ. ಕುಮಾರಸ್ವಾಮಿಗಳೇ ನೀವು ಮಾಜಿ ಮುಖ್ಯಮಂತ್ರಿಗಳು, ಶಾಸಕರಾಗಿದ್ದೀರಿ. ನಿಮಗೊಂದು
ಸಲಹೆ ಕೊಡ್ತೀನಿ, ಇಡೀ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಇದುವರೆಗೂ ದಾಖಲಾಗಿರುವ ಅಪರಾಧಿಗಳ ಜಾತಿ ಮತ್ತು ಧರ್ಮ ಯಾವುದೆಂಬ
ಅಂಕಿಅಂಶ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ರಾಜ್ಯದ ಪೊಲೀಸ್ ವರಿಷ್ಠಾರಧಿಕಾರಿಗೇ ಒಂದು ಅರ್ಜಿ ಸಲ್ಲಿಸಿ. ಅದರ ವರದಿಯನ್ನು ಚುನಾವಣಾ ಭಾಷಣದಲ್ಲಿ ವಿವರಿಸಿ.
ಅದರಿಂದ ಯಾವಯಾವ ಜಾತಿ ಧರ್ಮಗಳ ಅಪರಾಧಗಳ ಪಾಲು ಎಷ್ಟೆಷ್ಟಿದೆ ಎಂಬುದು ಸಮಾಜಕ್ಕೆ ತಿಳಿಯುವಂತಾಗಲಿ. ಅದರಲ್ಲೂ ಬ್ರಾಹ್ಮಣ ಅಪರಾಧಿಗಳ ಪಾಲನ್ನು ಇತರರೊಂದಿಗೆ ಹೋಲಿಸಿ ನೋಡಿ. ಆಗಲಾದರೂ ನಿಮ್ಮೊಳಗಿರಬಹುದಾದ ಪವಿತ್ರ ಜಾತ್ಯತೀತ’ದ ವಿಶ್ವರೂಪವನ್ನು ಕಾಣಬಹುದು. ಸುಮಾರು ಎರಡುಸಾವಿರ ಗುಡಿಗಳಿದ್ದ ವಿಜಯನಗರ ಸಾಮ್ರಾಜ್ಯದಲ್ಲಿ ಪೂಜಾಕಾರ್ಯಗಳನ್ನು ನೆರವೇರಿಸಿ ಆ ಮೂಲಕ ಸಾಮ್ರಾಜ್ಯದ ಏಳಿಗೆ ಕಾಪಾಡಲೋಸಗ ಶ್ರೀಕೃಷ್ಣದೇವರಾಯನು ವಾರಣಾಸಿಯ ಕಾಶಿಯಿಂದ ಆರುಸಾವಿರ (ಹಂಪಿಯಲ್ಲಿ ಇಂದಿಗೂ ‘ಆರುವೇಲು
ಬ್ರಾಹ್ಮಣುಲು’ ಎಂದೇ ಖ್ಯಾತಿಯ ಮನೆತನಗಳಿವೆ) ಸ್ಮಾರ್ಥ ಬ್ರಾಹ್ಮಣರನ್ನು ಸಾಮ್ರಾಜ್ಯಕ್ಕೆ ಕರೆಸಿಕೊಂಡು ಅವರಿಗೆ ರಾಜಾಶ್ರಯ ಕಲ್ಪಿಸುತ್ತಾನೆ.
ನೆನಪಿರಲಿ, ಕೃಷ್ಣದೇವರಾಯ ಒಬ್ಬ ಹಿಂದುಳಿದ ವರ್ಗದ ಕ್ಷತ್ರೀಯ. ಆತನ ಸಾಮ್ರಾಜ್ಯದ ಕುಲದೈವ ಪಂಪಾವಿರೂಪಾಕ್ಷ. ಆತನ ಮನೆದೇವರು ತಿರುಪತಿ ತಿಮ್ಮಪ್ಪ. ಆತನ ಧರ್ಮಗುರು ಶೈವರಾದ ವಿದ್ಯಾರಣ್ಯರು, ಆತನ ರಾಜಗುರು ವೈಷ್ಣವರಾದ ವ್ಯಾಸರಾಯರು. ಇದು! ರಾಜ್ಯವನ್ನಾಳುವ ಒಬ್ಬ ರಾಜನಿಗಿರಬೇಕಾದ ಜ್ಞಾನ ಪಾಂಡಿತ್ಯ ಪ್ರಬುದ್ಧತೆ ಮತು ವೈಚಾರಿಕತೆ. ಇಂದಿನ ದೌರ್ಭಾಗ್ಯ ನೋಡಿ, ಪಾಕಿಸ್ತಾನದಲ್ಲಿ ಕಳೆದ ವಾರವಷ್ಟೇ ಮುಸಲ್ಮಾನರುಗಳೇ ತಮ್ಮ ಮಸೀದಿಗಳಿಗೆ ಬಾಂಬ್ ಇಟ್ಟು ಸೋಟಿಸಿ ನೂರಾರು ಜನರನ್ನು ಕೊಂದಿದ್ದಾರೆ.
ಆದರೆ ನಮ್ಮಲ್ಲಿ ಜಾತಿಜಾತಿ ಎಂದು ನಿತ್ಯ ಜೀವಂತ ಸಾಯುತ್ತಿದ್ದಾರೆ. ಇಂಥವು ಬ್ರಾಹ್ಮಣರನ್ನು ಕಂಡಾಗ ಬೊಗಳುತ್ತವೆ. ಆದರೆ ಉಗ್ರವಾದ
ಭಯೋತ್ಪಾದನೆ ಕಂಡಾಗ ತಮ್ಮ ಬಾಲವನ್ನು ಎರಡು ತೊಡೆಗಳ ಮಧ್ಯದಲ್ಲಿ ತೂರಿಸಿಕೊಂಡು ಸುಮ್ಮನಾಗುತ್ತವೆ.