Friday, 20th September 2024

ಚುನಾವಣಾ ಭದ್ರತೆಗೆ ಗುಜರಾತ್, ಅಸ್ಸಾಂ ಪೊಲೀಸ್: ಆಯೋಗಕ್ಕೆ ದೂರು

ನವದೆಹಲಿ: ತ್ರಿಪುರಾದಲ್ಲಿ ಚುನಾವಣಾ ಭದ್ರತೆಗಾಗಿ ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸುವ ಬದಲು ಗುಜರಾತ್ ಮತ್ತು ಅಸ್ಸಾಂ ಪೊಲೀಸರನ್ನು ನಿಯೋಜಿಸಿರುವ ಸರ್ಕಾರದ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಸಿಪಿಎಂ ಸದಸ್ಯ ನೀಲೋತ್ಪಲ ಬಸು ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿದ್ದು, ಈ ನಿಯೋಜನೆ ಅಸಹಜ ಎಂದು ಪ್ರತಿಪಾದಿಸಿ ದ್ದಾರೆ. ಕೆಲ ಪ್ರದೇಶಗಳಲ್ಲಿ ಗಡಿಭದ್ರತಾ ಪಡೆ ಸಿಬ್ಬಂದಿಯ ಬದಲು ಗುಜರಾತ್ ಹಾಗೂ ಅಸ್ಸಾಂ ಪೊಲೀಸರನ್ನು ನಿಯೋಜಿಸ ಲಾಗಿದೆ ಎಂದು ವಿವರಿಸಿದ್ದಾರೆ.

ಕೇವಲ ಕೇಂದ್ರೀಯ ಅರೆ ಮಿಲಿಟರಿ ಪಡೆಯನ್ನಷ್ಟೇ ನಿಯೋಜಿಸಬೇಕು ಎಂದು ಆಗ್ರಹಿಸಿ ರುವ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತ್ರಿಪುರಾ ಚುನಾವಣೆ ಗಾಗಿ “ವರ್ಚುವಲ್ ಪ್ರಚಾರ”ದಲ್ಲಿ ತೊಡಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರ ನಿಯೋಜನೆ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.