ನವದೆಹಲಿ: ತೆರಿಗೆ ಹೆಚ್ಚಳ ಮಾಡುವ ಮೂಲಕ ತಂಬಾಕು ಮುಕ್ತ ದೇಶ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆರ್ಥಿಕ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಸಿಗರೇಟ್ ಮೇಲಿನ ಶೇ. 16ರಷ್ಟು ತೆರಿಗೆ ಹೆಚ್ಚಳ ಸೂಕ್ತವಾಗಿದೆ. ಆದರೆ, ‘ಶಾಪಗ್ರಸ್ತ’ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಂಬಾಕು ಉತ್ಪನ್ನ ಕೊಳ್ಳಲು ಸಾಧ್ಯವಾಗದ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಆರೋಗ್ಯವಂತ ದೇಶ ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಸಿಗರೇಟಿನ ಮೇಲೆ ರಾಷ್ಟ್ರೀಯ ಪ್ರಕೃತಿ ವಿಕೋಪ ಸುಂಕವಾಗಿ ಶೇ. 16ರಷ್ಟು ತೆರಿಗೆ ವಿಧಿಸಿರುವುದು ‘ಶಾಪಗ್ರಸ್ತ’ ಉತ್ಪನ್ನಗಳ ಮಾರಾಟ ನಿಗ್ರಹಿಸಲು ತೆಗೆದುಕೊಂಡಿರುವ ಮಹತ್ವದ ನಿರ್ಧಾರವಾಗಿದೆ. ಪ್ರತಿ ವರ್ಷ ಸಿಗರೇಟಿನಿಂದ ದೇಶದಲ್ಲಿ 13 ಲಕ್ಷ ಜನರು ಬಲಿಯಾಗುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ಆರ್ಥಿಕ ತಜ್ಞ ಗೋಪಾಲ ಕೃಷ್ಣ ಅಗರವಾಲ್ ಹೇಳಿದ್ದಾರೆ.