ಅಭಿಮತ
ಪ್ರೊ.ಆರ್.ಜಿ.ಹೆಗಡೆ
ರಾಹುಲ್ ಗಾಂಧಿ ತಮ್ಮ ಸುದೀರ್ಘ ಪಾದಯಾತ್ರೆ ಮುಗಿಸಿದ್ದಾರೆ. ಮೂರೂವರೆ ಸಾವಿರ ಕಿಲೋಮೀಟರ್ ಉದ್ದದ ಪಯಣ ಪ್ರಯಾಣವನ್ನು ರಾಹುಲ್ ನಡೆದಿದ್ದಾರೆ. ಇಂತಹ ನಡಿಗೆ ಸುಲಭವಲ್ಲ. ಅದಕ್ಕೆ ಅಪಾರ ದೈಹಿಕ, ಮಾನಸಿಕ ಶಕ್ತಿ ಬೇಕಾಗುತ್ತದೆ. ಅಂತಹ ಅಗಾಧ ಛಲ, ದೈಹಿಕ ಮತ್ತು ಮಾನಸಿಕ ಗಟ್ಟಿತನ ತಮಗಿದೆ ಎನ್ನುವುದನ್ನು ರಾಹುಲ್ ತೋರಿಸಿದ್ದಾರೆ. ಅದನ್ನು ನಾವು ಒಪ್ಪಬೇಕು. ರಾಹುಲ್‌ಗೊಂದು ಅಭಿನಂದನೆ.
ಪಾದಯಾತ್ರೆಯ ಹಿಂದೆ ಬಹುಶಃ ಎರಡು ಉದ್ದೇಶ ಗಳಿದ್ದವು. ಒಂದನೆಯದು. ಕಾಂಗ್ರೆಸ್‌ನ್ನು ಪುನರುಜ್ಜೀವನ ಗೊಳಿಸುವುದು. ಕಾಂಗ್ರೆಸ್‌ನ ಸ್ಥಿತಿ ನಾಶವಾ ಗಿದೆ ಎಂದೇನೂ ಅಲ್ಲ. ಕಾಂಗ್ರೆಸ್ ನಾಶವಾಗುವುದಿಲ್ಲ. ಅಲ್ಲಿ ಇಲ್ಲಿ ಉಳಿದಿದೆ. ಆದರೆ, ಸೈದ್ಧಾಂತಿಕ ಗೊಂದಲ ಪಕ್ಷವನ್ನು ಕಾಡುತ್ತಿದೆ. ಸಾಮಾಜಿಕ (ಹಿಂದುತ್ವ), ಆರ್ಥಿಕ, ವಿದೇ ಶಾಂಗ ನೀತಿಗಳಲ್ಲಿ ತನ್ನ ನಿಲುವು ಸದ್ಯದಲ್ಲಿ ಅದಕ್ಕೆ ಸ್ಪಷ್ಟವಿದ್ದಂತಿಲ್ಲ. ಸ್ಪಷ್ಟಪಡಿಸಿ ಹೇಳಬಲ್ಲ ನಾಯಕರು ಕಡಿಮೆ. ಹಾಗಾಗಿ ಕೇಳು ಗರು ಕಡಿಮೆ. ಹೊಸ ಕಾರ್ಯಕರ್ತರು, ನಾಯಕರು ಹುಟ್ಟಿಕೊಳ್ಳುತ್ತಿಲ್ಲ.
ಬಹುಶಃ ಪಕ್ಷದೊಳಗೆ ಆಳವಾದ ಭಿನ್ನಮತವಿದೆ. ಗಾಂಧಿ ಕುಟುಂಬದ ಕುರಿತು ವಿರೋಧ, ನಿರಾಸೆ ಇದೆ. ಪಕ್ಷ ದೊಳಗೆ ಉತ್ಸಾಹ, ಮೋಟಿವೇಶನ್‌ನ ಕೊರತೆ ಇರು ವಂತಿದೆ. ಈಗ ಅದು ಉಳಿದಿರುವುದು, ಪ್ರಾದೇಶಿಕ ನಾಯಕರ ಶಕ್ತಿಯ ಮೇಲೆ. ಏಟ್ಸನ ಕವಿತೆಯ ಸಾಲುಗಳು ‘ಥಿಂಗ್ಸ್ ಫಾಲ್ ಅಪಾರ್ಟ್, ಸೆಂಟರ್ ಕೆನಾಟ್ ಹೋಲ್ಡ’ ಕಾಂಗ್ರೆಸ್‌ನ ಪರಿಸ್ಥಿತಿಯನ್ನು ಬಹಳ ಚನ್ನಾಗಿ ಹೇಳುತ್ತವೆ. ಇಂತಹ ಪಕ್ಷಕ್ಕೆ ಮರಳಿ ಮಾಸ್ ಬೇಸ್ ಒದಗಿಸಿ, ಚೈತನ್ಯ ತುಂಬಿ ಪುನರುತ್ಥಾನ ಸಾಧಿಸುವುದು ಮೊದಲ ಉದ್ದೇಶವಾಗಿದ್ದಿರಬೇಕು.
ಎರಡನೆಯದು ತಮ್ಮನ್ನು ಪಕ್ಷದ ಪ್ರಶ್ನಾತೀತ ನಾಯಕ ಎಂದು ಪ್ರೊಜೆಕ್ಟ ಮಾಡಿಕೊಳ್ಳುವುದು. ಇತರ ನಾಯ ಕರುಗಳಿಗಿಂತ ಹೆಚ್ಚಿನ ವೈಯಕ್ತಿಕ ಕರಿಷ್ಮಾ ಬೆಳೆಸಿಕೊಳ್ಳುವುದು. ತನ್ಮೂಲಕ ಭಿನ್ನಮತವನ್ನು ಹತ್ತಿಕ್ಕುವುದು. ಗಾಂಧಿ ಕುಟುಂಬದ ನಾಯಕತ್ವದ ಮರು ಸ್ಥಾಪನೆ. ಉದ್ದೇಶಗಳು ಸರಿಯಾಗಿದ್ದವು ಎನ್ನುವುದರಲ್ಲಿ ಅನುಮಾನ ಇಲ್ಲ. ಬೇರುಮಟ್ಟದಿಂದ ಪಕ್ಷ ಕಟ್ಟಿ ಕೊಂಡು ಬರಲ ಇಂತಹ ತಂತ್ರ ಬೇರೊಂದಿಲ್ಲ. ಹೊರಗಿನ ಬಿಜೆಪಿ ಮತ್ತು ಒಳಗಿನ ವೈರಿಗಳನ್ನು ಒಂದೇ ಏಟಿಗೆ ಉದುರಿಸುವ ಗುರಿ ಬಹುಶಃ ಪಾದ ಯಾತ್ರೆಗೆ ಇತ್ತು. ಗುರಿಗಳು ಎಷ್ಟರ ಮಟ್ಟಿಗೆ ಸಿದ್ಧಿಸಿದವು ಎನ್ನುವುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.
ಎರಡನೆಯ ಉದ್ದೇಶ ಸಾಧನೆಯಲ್ಲಿ ರಾಹುಲ್ ಅದ್ಭುತ ಯಶಸ್ಸು ಕಂಡಿದ್ದಾರೆ. ಈಗ ರಾಹುಲ್ ದೇಶಾದ್ಯಂತ ಜನಮನದಲ್ಲಿ ಬೀಡುಬಿಟ್ಟಿರುವುದು ಹೌದು. ಅವರ ಕುರಿತು ದೊಡ್ಡ ಪ್ರಮಾಣದಲ್ಲಿ ಸಿಂಪಥಿ ಸೃಷ್ಟಿಯಾಗಿರುವುದು ನಿಜ. ಪಕ್ಷದ ರಾಷ್ಟ್ರೀಯ ಲಾಂಛನ ರಾಹುಲ್. ಅಂತಹ ವ್ಯಾಪಕ
ವೈಯಕ್ತಿಕ ‘ಜನಪ್ರಿಯತೆ’ ರಾಷ್ಟ್ರೀಯವಾಗಿ ಪಕ್ಷದ ಒಳಗಿನ ಯಾವ ನಾಯಕರಿಗೂ ಇಲ್ಲ.
ಖಂಡಿತಕ್ಕೂ ಸರಳ, ಸದುದ್ದೇಶದ, ಭಾವನಾತ್ಮಕ ವ್ಯಕ್ತಿ ರಾಹುಲ್. ಪಯಣದುದ್ದಕ್ಕೂ ಜನರೊಂದಿಗೆ ಮುಕ್ತವಾಗಿ ಬೆರೆತಿದ್ದಾರೆ. ಬಡವರ, ಸಾಮಾನ್ಯರ ಹೆಗಲ ಮೇಲೆ ಕೈ ಹಾಕಿ ಸಂಗಡ ನಡೆದಿದ್ದಾರೆ. ತಬ್ಬಿಕೊಂಡಿದ್ದಾರೆ. ಕೈ ಕುಲುಕಿದ್ದಾರೆ. ಅವರು ತಂದ ಕಬ್ಬು ಇತ್ಯಾದಿ ತಿಂದಿದ್ದಾರೆ. ಎದ್ದು ಕಂಡಿರುವ
ವಿಷಯವೆಂದರೆ ರಾಹುಲ್ ಜಾತಿ -ಪಾತಿ ಗೊತ್ತಿಲ್ಲದ, ಕಟ್ಟು ಪಾಡುಗಳಿಲ್ಲದ ಉದಾರ ಮನಸ್ಸಿನವರು. ಮಾನವೀಯ ವ್ಯಕ್ತಿ. ತಪ್ಪು ಮಾಡಬಲ್ಲ, ನಗಬಲ್ಲ, ನಗಿಸಿಕೊಳ್ಳಬಲ್ಲ, ಹಾಸ್ಯಕ್ಕೆ ತುತ್ತಾಗಬಲ್ಲ, ಜನ ನಕ್ಕರೂ ಅದನ್ನೆಲ್ಲ ತಲೆಗೆ ಹಾಕಿಕೊಳ್ಳದ, ಇಮೇಜ್ ಕುರಿತು ಕಾನ್ಶಿಯಸ್ ಆಗಿರದ, ಸಾದಾ ಸೀದಾ ನಡವಳಿಕೆಯವರು. ವೈಯಕ್ತಿಕತೆಗಳನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲು ಹಿಂಜರಿಯದವರು.
ತಾನು ಸೂಪರ್‌ಮ್ಯಾನ್ ಎನ್ನುವ ಪೋಸ್ ಕೊಡಲು ಇಚ್ಛಿಸದವರು.ಕೃತಕ ಇಮೇಜ್ ಬಿಲ್ಡ್ ಅಪ್ ಬಯಸದವರು. ಅಂತಹ ಪ್ರಯತ್ನಗಳನ್ನೆಲ್ಲ ಕ್ಷಣಾರ್ಧ ದಲ್ಲಿ ಮುರಿದು ಕೆಡವಿಬಿಡಬಲ್ಲ ಸಜ್ಜನ. ಪಾರದರ್ಶಕ ವ್ಯಕ್ತಿತ್ವದವರು. ಗೆಳೆಯನಾಗಬಲ್ಲ, ಆಳವಾಗಿ ಪ್ರೀತಿಸಬಲ್ಲ, ಕುತಂತ್ರ ಬುದ್ಧಿ ಇರದಂತೆ ಅನಿಸುವ ವ್ಯಕ್ತಿ ರಾಹುಲ್. ಅಸ್ತಿತ್ವವಾದಿ ಕಾರಣಗಳಿಂದಾಗಿ ದುಷ್ಟ ಜಗತ್ತಿನಲ್ಲಿ ಸಿಕ್ಕಿ ಬಿದ್ದು ಅಸಹಾಯಕನಾಗಿ, ದಾರಿ ಕಾಣದೆ ತಡವರಿಸುತ್ತಿರುವ ಮತ್ತು ಆ ಕಾರಣದಿಂದಾಗಿಯೇ ತಾನೂ ತಪ್ಪುಮಾಡಿ ಬಿಡಬಲ್ಲಂತಹ ವ್ಯಕ್ತಿ. ದೇಶದ ಬಹುತೇಕ ಜನರಿಗೆ ರಾಹುಲ್ ಕಂಡಿರುವುದು ಹೀಗೆ. ಲವೆಬಲ್. ಲೈವ್ಲಿ.
ಯಾತ್ರೆಯ ನಂತರ ಪಕ್ಷ ದೊಡ್ಡ ಪ್ರಮಾಣದಲ್ಲಿ ಎದ್ದು ನಿಂತಂತೇನೂ ಇಲ್ಲ. ಮರು ಹುಟ್ಟು ಪಡೆದಿರುವಂತೇನೂ ಇಲ್ಲ. ಹಾಗೆ ಆಗಿದ್ದರೆ ಅಂತಹ ಲಕ್ಷಣಗಳು ಗೋಚರಿಸುತ್ತಿದ್ದವು. ಯಾತ್ರೆಯ ಸಂದರ್ಭದಲ್ಲಿ ಹೊಸ ರಕ್ತ ಪಕ್ಷದೊಳಗಡೆ ಹರಿದು ಬರುತ್ತಿತ್ತು. ವಿವಿಧ ಧರ್ಮಗಳಿಗೆ, ವರ್ಗಗಳಿಗೆ ಸ್ಥರಗಳಿಗೆ ಸೇರಿದ ಹೊಸ ನಾಯಕರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಕ್ಷ ಸೇರುತ್ತಿದ್ದರು. ಯುವಕರು ಆಕರ್ಷಿತರಾಗುತ್ತಿದ್ದರು. ಗ್ಲಾಮರ್, ಕರಿಸ್ಮಾ
ಇರುವವರು, ಬುಽಜೀವಿಗಳು ದೊಡ್ಡ ಅಲೆ ಸ್ರಷ್ಟಿಸಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದರು. ಹೊಸ ವಿಚಾರಗಳು ಒಳಹರಿಯುತ್ತಿದ್ದವು. ಪಕ್ಷ ಹೊಸ ಭಾಷೆ
ಮಾತನಾಡುವುದನ್ನು ಕಲಿಯುತ್ತಿತ್ತು. ಪಕ್ಷದಲ್ಲಿ, ಬಿಜೆಪಿಯಲ್ಲಿ, ದೇಶದಲ್ಲಿ ಕಂಪನಗಳು ಹುಟ್ಟಿಕೊಳ್ಳುತ್ತಿದ್ದವು.
ಯಾತ್ರೆ ಕಾಶ್ಮೀರ ತಲುಪುವರೆಗೆ ಇದೆಲ್ಲ ಆಗಿಹೋಗುತ್ತಿತ್ತು. ಪಕ್ಷ ಬೆಳೆಯುತ್ತಿದ್ದರೆ, ಜನಪ್ರಿಯವಾಗುತ್ತಿದ್ದರೆ ಮೇಲೆ ಹೇಳಿದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಆದ್ವಾನಿಯವರ ರಥಯಾತ್ರೆಯಲ್ಲಿ ಇಂತವೆಲ್ಲ ನಡೆದಿದ್ದು ನಮಗೆ ಗೊತ್ತಿದೆ. ಇಲ್ಲಿ ಹಾಗೆ ಆದಂತಿಲ್ಲ. ರಾಹುಲ್ ಕುರಿತು ಪ್ರೀತಿಯ ಅಲೆ ಹುಟ್ಟಿಕೊಂಡಿ ರುವುದು ನಿಜ. ಅದರೆ ಅದರ ರಾಜಕೀಯ ಫಲ ಕಾಂಗ್ರೆಸ್‌ಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ದೊರೆತಂತೆ ಇಲ್ಲ. ಏಕೆ ಹೀಗೆ? ವೈಯಕ್ತಿಕವಾಗಿ ರಾಹುಲ್‌ರನ್ನು ಪ್ರೀತಿಸುವ ಜನ ಅವರ ಜತೆ ರಾಜಕೀಯವಾಗಿ ಹೆಜ್ಜೆಹಾಕದಂತಿರುವುದು ಯಾಕೆ? ರಾಹುಲ್ ಕುರಿತ ಪ್ರೀತಿ ಮತ್ತು ಅವರ ರಾಜಕೀಯ ನಾಯಕತ್ವದ ಕುರಿತ ಅನುಮಾನ ಇಂತಹ ಇಬ್ಬಂದಿತನದ ಮನಸ್ಥಿತಿಯಲ್ಲಿ ಜನ ಇರುವಂತೆ ಅನಿಸುವುದು ಯಾಕೆ? ಮುಖ್ಯ ಕಾರಣ ರಾಹುಲ್ ರಾಜಕೀಯದಲ್ಲಿರುಮದು ಅರೆ ಮನಸ್ಸಿನಿಂದಲೇ ಎಂಬ ಭಾವನೆ ಜನರಿಗಿದ್ದಂತಿದೆ.
ಸಾಕಷ್ಟು ಸಕ್ರಿಯವಾಗಿ ಆತ ರಾಜಕೀಯದಲ್ಲಿ ಇಲ್ಲ ಎಂಬ ಭಾವನೆಯೂ ಇದ್ದಂತಿದೆ. ಜನ ನಂಬುವುದು ಮಾತನ್ನಲ್ಲ. ಕೃತಿಯನ್ನು. ರಾಹುಲ್ ಮಾತುಗಳು ಕ್ರತಿಯಾಗಿ ಪರಿವರ್ತನೆ ಯಾಗುವುದಿಲ್ಲ. ಕ್ರಿಯೆಯಲ್ಲಿ ಅವರು ತಮ್ಮನ್ನು ತೊಡಗಿಸಿ ಕೊಳ್ಳುವುದೇ ಇಲ್ಲ. ನೂರಕ್ಕೆ ನೂರರಷ್ಟು, ಗಟ್ಟಿಯಾಗಿ ರಾಜಕೀಯ ನಾಯಕನಾಗಿ ಮುಂದೆ ನಿಂತು ಹೋರಾಡು ವುದಿಲ್ಲ. ಅಂತಹ ಸಂದರ್ಭ ಬಂದಾಗ ಯಾಕೋ ಹಿಂದೆ ಸರಿದುಬಿಡುತ್ತಾರೆ ಎಂಬ
ಭಾವನೆ ಯೂ ಜನರಲ್ಲಿ ಇದ್ದಂತಿದೆ.
ಇಬ್ಬಂದಿತನದಲ್ಲಿರುವಂತಿದೆ. ಯಾವುದೋ, ಯಾರದೋ ಬಲವಂತಕ್ಕೆ ಒಳಗಾಗಿ ರಾಜಕೀಯದಲ್ಲಿ ಇದ್ದಂತಿದೆ. ಇಂತಹ ಭಾವನೆ ಜನರಲ್ಲಿ ಇದ್ದಂತಿದೆ. ಯಾತ್ರೆಯುದ್ಧಕ್ಕೂ ರಾಹುಲ್ ಮಾತುಗಳಿಂದ, ಶರೀರ ಭಾಷೆಯಿಂದ ಅಂತಹ ಗೊಂದಲದ ಸಂಕೇತಗಳೇ ಕಂಡಂತೆ ಜನರಿಗೆ ಅನಿಸಿದಂತಿದೆ. ರಾಹುಲ್ ಹೆಚ್ಚು ಸಮಯ ಕಳೆದಿದ್ದು ಆತ್ಮಾವಲೋಕನದ ಮಾತುಗಳಲ್ಲಿ. ಮೋದಿ ಮತ್ತು ಬಿಜೆಪಿ ಕುರಿತು ಅವರು ಆಡಿದ್ದೂ ಅನಿವಾರ್ಯವಾಗಿ ಎಂಬಂತೆ ಅನಿಸಿದಂತಿದೆ. ಹಿಂದುತ್ವವಾದ, ಆರ್ಥಿಕ ನೀತಿ ಮತ್ತು ಇತರ ಚರ್ಚಾಸ್ಪದ ವಿಷಯಗಳ ಕುರಿತು ಏನು ಹೇಳುತ್ತಾರೆ ಎನ್ನುವ ಕುತೂಹಲವನ್ನು ಹೆಚ್ಚಾಗಿ ರಾಹುಲ್ ತಣಿಸಲೇ ಇಲ್ಲ.
ಕಾಂಗ್ರೆಸ್‌ನ ಉದಾರ ನಿಲುವನ್ನು ಬಲವಾಗಿ ಮುಂದಿಟ್ಟು ಬಿಜೆಪಿಯ ವಿರುದ್ಧ ಒಂದು ವಾಗ್ವಾದವನ್ನು ಸೃಷ್ಟಿಸಲೇ ಇಲ್ಲ. ಬಿಜೆಪಿಯ ಹಿಂದುತ್ವವನ್ನು ಮಾರ್ಜಿನಲೈಸ್ ಮಾಡಿ ಓಬಿಸಿ ಮತ್ತು ದಲಿತ ವರ್ಗವನ್ನು ಬಿಜೆಪಿಯ ಮಧ್ಯಮವರ್ಗದ ರಾಜಕೀಯದ ವಿರುದ್ಧ ತಿರುಗಿಸಲೇ ಇಲ್ಲ. ಹಾಗಾಗಿ ಮೋದಿ ಯವರ ಮೇಲೆ ರಾಹುಲ್ ನಡೆಸಿದ ದಾಳಿ ಹಗುರವಾಗಿ ಗಾಳಿಯಲ್ಲಿ ತೇಲಿ ಹೋಯಿತು. ನಿರ್ದಿಷ್ಟವಾಗಿ ಮೋದಿಯವರ ವ್ಯಕ್ತಿತ್ವ ಮತ್ತು ಸರಕಾರಗಳ ವೈಫಲ್ಯಗಳ ಕುರಿತು ರಾಹುಲ್ ಹೇಳಿದಂತೆ ಇಲ್ಲ.
ಹಾಗೆಯೇ ರಾಹುಲ್ ಬಾಡಿ ಲ್ಯಾಂಗ್ವೇಜ್ ರಾಜಕೀಯೇತರ ಸಂಕೇತಗಳನ್ನೇ ಹೆಚ್ಚು ಬಿತ್ತರಿಸಿಬಿಟ್ಟಿತು. ಇದು ಬಹುತೇಕ ಜನರ ಭಾವನೆ. ರಾಹುಲ್‌ರನ್ನು ವೈಯಕ್ತಿಕವಾಗಿ ಅಪಾರವಾಗಿ ಪ್ರೀತಿಸುವ ಜನ ಅವರನ್ನು ರಾಜಕೀಯ ನಾಯಕನನ್ನಾಗಿ ಕಾಣದ ಕಾರಣ ಇದು ಇರಬಹುದು. ಬಹುಶಃ ಬಿಜೆಪಿಯನ್ನು ಖಂಡತುಂಡ ವಿರೋಧಿಸುವ ಜನ ಕೂಡ ರಾಜಕೀಯವಾಗಿ ರಾಹುಲ್ ಕುರಿತು ತುಸು ಬೇಸರದಲ್ಲಿ ಇದ್ದಂತೆಯೇ ಇದೆ. ಹಾಗಾಗಿ ಬಹುಶಃ ಯಾತ್ರೆಗೆ ಬಲವಾದ ರಾಜಕೀಯ ಶಕ್ತಿ, ಆಯಾಮ, ಸ್ವರೂಪ ಬರಲೇ ಇಲ್ಲ. ಅದು ರಾಹುಲ್ ಆತ್ಮಸಾಕ್ಷಾತ್ಕಾರದ ಯಾತ್ರೆಯಂತೆ ಅನಿಸಿಹೋಯಿತು.
ಬಹುಶಃ ರಾಹುಲ್ ಸ್ವತಃ ತಾವೇ ಅಧ್ಯಕ್ಷರಾಗಿ ಕಣಕ್ಕಿಳಿದಿದ್ದರೆ ಆದ್ವಾಣಿಯವರ ರಥಯಾತ್ರೆ ನೀಡಿದಂತ ಪರಿಣಾಮ ಈ ಯಾತ್ರೆ ನೀಡುತ್ತಿತ್ತೇನೊ! ಜನ ಯಾತ್ರೆಯನ್ನು ರಾಜಕೀಯವಾಗಿ ಹೆಚ್ಚು ಬೆಂಬಲಿಸುತ್ತಿದ್ದರೇನೋ! ಯಾತ್ರೆ ಮುಗಿಯುವ ತನಕ ಬಿಜೆಪಿ ವಿರೋಧಿ ಶಕ್ತಿಗಳೆಲ್ಲ ಒಂದುಗೂಡಿ ರಾಹುಲ್
ಹಿಂದೆ ನಿಂತುಬಿಡುತ್ತಿದ್ದವೇನೋ! ರಾಹುಲ್ ಯಾತ್ರೆ ರಾಜಕೀಯವಾಗಿ ಎಷ್ಟು ಯಶಸ್ವಿಯಾಯಿತು ಎನ್ನುವುದು ಪ್ರಶ್ನೆಯಾಗಿಯೇ ಉಳಿದುಹೋಗಿದೆ.
Read E-Paper click here