ಜಮ್ಮು ನಗರದ ಪ್ರವೇಶದ್ವಾರ ಖುಂಜ್ವಾನಿಯಲ್ಲಿ ಭಕ್ತರು ಪ್ರಾಚೀನ ಕಾಶ್ಮೀರದ ಮುಖ್ಯ ದೇವತೆಗೆ ಪುಷ್ಪವೃಷ್ಟಿ ನೆರವೇರಿಸಿ, ಭಜನೆಗಳನ್ನು ಹಾಡುವ ಮೂಲಕ ಸ್ವಾಗತಿಸಿದರು.
ಪಂಚಲೋಹಗಳಿಂದ ಮಾಡಿದ ವಿಗ್ರಹವನ್ನು ನಂತರ ಕಾಶ್ಮೀರಿ ಪಂಡಿತ್ ಸಭಾಕ್ಕೆ ತರಲಾಯಿತು. ಅಲ್ಲಿ ನೂರಾರು ಕಾಶ್ಮೀರಿ ಪಂಡಿತರು ದೇವಿಯನ್ನು ಸ್ವಾಗತಿಸಿದರು.
‘ನಾವು ಶೃಂಗೇರಿಯಿಂದ ಶಾರದಾ ದೇವಿ ವಿಗ್ರಹವನ್ನು ತಂದಿದ್ದೇವೆ. ತೀತ್ವಾಲ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಶಾರದಾ ಮಾತಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಮಾರ್ಚ್ 22 ರಂದು ದೇವಸ್ಥಾನ ಉದ್ಘಾಟಿಸಲಾಗು ವುದು.
ಕಳೆದ ತಿಂಗಳು ಶೃಂಗೇರಿಯಿಂದ ಪ್ರಾರಂಭವಾದ ವಿಗ್ರಹದ ಪಯಣ ಬೆಂಗಳೂರು, ಮುಂಬೈ, ಅಹಮದಾಬಾದ್, ಜೈಪುರ, ದೆಹಲಿ ಮತ್ತು ಅಮೃತಸರ ಸೇರಿದಂತೆ ವಿವಿಧ ನಗರಗಳ ಮೂಲಕ ಜಮ್ಮು ತಲುಪಿತು.