Thursday, 21st November 2024

ಇದೇನು ಬಿಬಿಸಿಯೋ ? ಅಸಾವುದ್ದೀನ್‌ ಓವೈಸಿಯೋ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ದೆಹಲಿ-ಮುಂಬಯಿಯ ಬಿಬಿಸಿ ಕಚೇರಿಯಲ್ಲಿ ಸರ್ವೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ, ಮೋದಿ ವಿರುದ್ಧದ ಡಾಕ್ಯುಮೆಂಟರಿಗೆ ಸಂಬಂಧಿಸಿ ದಂತೆ ಇಲ್ಲಿನ ಗುಲಾಮರ ಪಾತ್ರ-ಪ್ರಚೋದನೆ ಇರುವ ಜಾಡನ್ನು ಶೋಧಿಸುತ್ತಿರುವಂತಿದೆ.

ಒಂದು ಕಾಲದಲ್ಲಿ ಬಿಬಿಸಿ ಎಂಬುದು ವಿಶ್ವದ ವಿದ್ಯುನ್ಮಾದ ಸುದ್ದಿವಾಹಿನಿಗಳ ತಂದೆಯಂತಿತ್ತು. ಆಂಗ್ಲರ ಈ ವಾಹಿನಿಯಲ್ಲಿ ಕೇವಲ ಒಂದು ಸಾಲಿನ ಸುದ್ದಿಯಾದರೂ ಅದು ಆಸ್ಕರ್ ಪ್ರಶಸ್ತಿ ಪಡೆದಷ್ಟೇ ಖುಷಿ ಪಡುತ್ತಿದ್ದರು. ಆದರೆ ಎಲ್ಲ ದೇಶಗಳಲ್ಲೂ ಸುದ್ದಿವಾಹಿನಿಗಳು ಹುಟ್ಟಿಕೊಂಡ ಮೇಲೆ ಬಿಬಿಸಿ ಎಂಬುದು ‘ಕಾಣೆಮೀನು’ ಪತ್ರಕರ್ತನಂತೆ ಹಳಸಿ ಹೋಯಿತು.

ಶತಮಾನದ ಇತಿಹಾಸವಿರುವ ಈ ಬಿಬಿಸಿಗೆ ಎಂಥ ದುರ್ಬುದ್ಧಿ ಬಂದಿದೆಯೆಂದರೆ ಇಂದು ವಿಶ್ವವೇ ಮೋದಿಯವರನ್ನು ಆಧರಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಕಳಂಕ ತರುವಂಥ ಮನೆಹಾಳು ಕೆಲಸಕ್ಕೆ ‘ಕೈ’ ಹಾಕಿದೆ. ೨೦೦೨ರಲ್ಲಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರೈಲಿನಲ್ಲಿ ಕರಸೇವಕರನ್ನು ಜೀವಂತ ಸುಟ್ಟು, ಪೈಶಾಚಿಕ ಕೃತ್ಯ ಎಸಗಿದ ಮತಾಂಧರ ವಿರುದ್ಧದ ಹಿಂಸಾಚಾರದಲ್ಲಿ ಮೋದಿಯವರು ಕಳಂಕರಹಿತರೆಂಬುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಅಂದು ಅಮೆರಿಕ ಸರಕಾರ ಮೋದಿಯವರಿಗೆ ವಿಸಾ ನೀಡದೇ ಹೋಗಿದ್ದು, ಆ ನಂತರವೂ ಮೋದಿಯವರು ಮುಖ್ಯಮಂತ್ರಿಯಾದದ್ದು, ಆ ನಂತರ ಇಡೀ ದೇಶದ ಜನಾದೇಶ ಪಡೆದು ಪ್ರಧಾನಮಂತ್ರಿಯಾದದ್ದು, ಆನಂತರ ಅದೇ ಅಮೆರಿಕ ಅಧ್ಯಕ್ಷರೆಲ್ಲ ಮೋದಿಯವರನ್ನು ಹೊಗಳಿ ಕೊಂಡಾಡಿ ತಬ್ಬಿಕೊಂಡದ್ದು, ಈಗ ಎರಡನೇ ಅವಽಗೂ ಪ್ರಧಾನಮಂತ್ರಿಯಾಗಿ ಭಾರತವನ್ನು ವಿಶ್ವದ ಗುರುವಾಗಿ ನಿಲ್ಲಿಸುವ ಹಂತದಲ್ಲಿರುವುದಲ್ಲದೇ ವಿಶ್ವಸಂಸ್ಥೆಯಲ್ಲಿ ಭಾರತ ಎಷ್ಟು ಪ್ರಬಲ ಮತ್ತು ಪ್ರಭಾವಶಾಲಿ ಯಾಗಿರುವುದು ಇಡೀ ಜಗತ್ತಿಗೇ ಗೊತ್ತಿದೆ.

ಆದರೆ ನಮ್ಮ ದೇಶದ ಲದ್ದಿಜೀವಿಗಳು- ವಿಚಾರವ್ಯಾಧಿಗಳಂತೆ, ಒಂದು ಜಾತಿಗೆ ಸೀಮಿತ ರಾದ ‘ವರ್ಲ್ಡ್ ಪೇಮಸ್’ ನಾಯಕರು ಮೋದಿಗೇ
ಬೊಗಳು ವವರಂತೆ, ಹಿರಿಯ ನ್ಯಾಯವಾದಿ ರಾಮ್‌ಜೇಠ್ಮಲಾನಿ ಕಚೇರಿಯಲ್ಲಿ ಒಬ್ಬ ಕ್ಲರ್ಕ್ ಆಗಲು ಯೋಗ್ಯತೆಯಿಲ್ಲದೆ ಪ್ರಧಾನಮಂತ್ರಿಯಾಗುವ ಕನಸು ಕಾಣುತ್ತಿರುವ ಜೋಕರ್‌ಗಳಂತೆ, ಅಸಾವುದ್ದೀನ್ ಓವೈಸಿಯಂತೆ ಯೋಚಿಸಿರುವ ಬಿಬಿಸಿ, ಮೋದಿಯವರಿಗೆ ಕಳಂಕ ತರುವ ಹುನ್ನಾರದಲ್ಲಿ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಎಂಬ ಸರಣಿ ಸಾಕ್ಷ್ಯಚಿತ್ರ ತಯಾರಿಸಿದೆ. ಇದನ್ನು ಭಾರತದಲ್ಲಿ ‘ಕಾಂತಾರ’ ಚಿತ್ರದಂತೆ ಜನ ನೋಡುತ್ತಾರೆ, ನೋಡಿ ಮೋದಿಯವರನ್ನು ಇನ್ನಿಲ್ಲದಂತೆ ದ್ವೇಷಿಸುತ್ತಾರೆಂದು ‘ಜೆಡಿಎಸ್‌ನ ಮುಸ್ಲಿಂ ಮುಖ್ಯಮಂತ್ರಿ’ಯಂಥ ಕನಸನ್ನು ಬಿಬಿಸಿ ಬಳಗ ಕಾಣುತ್ತಿದೆ. ಇಂದು ಇಡೀ ಆಂಗ್ಲರ ದೇಶವನ್ನು ರಿಷಿ ಸುನಕ್ ಎಂಬ ಒಬ್ಬ ಹಿಂದೂ ಪ್ರಧಾನಿ ಆಳುತ್ತಿದ್ದಾರೆ.

ಇದು ಭಾರತದಲ್ಲಿ ಆರ್ಯ-ದ್ರಾವಿಡ-ಬ್ರಾಹ್ಮಣ್ಯ ಎಂಬ ಕಾಯಿಲೆ ಯಿಂದ ರೋದಿಸುತ್ತಿರುವ ಮಾನಸಿಕ ವಿಕಲ‘ಚೇತನ’ರಂಥ ಎಲಿಮೆಂಟುಗಳಂತೆ, ಇಲ್ಲಿನ ಪ್ರಕಾಶ್‌ರೈನಂಥ ‘ನಾನು ಗೌರಿ- ಅರ್ಬನ್ ನಕ್ಸಲ್’ನಂಥ ಪ್ರತಿರೋಧ ಗಿರಾಕಿಗಳಂತೆ, ಇಲ್ಲಿನ ನಗದು ರಹಿತ ಪ್ರಶಸ್ತಿ ವಾಪಸ್ ಅಸಹಿಷ್ಣು ಅವಿವೇಕಿಗಳಂತೆ, ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದ ಬರಗೆಟ್ಟ ಸಾಹಿತಿ ಗಳಂತೆ ಮತ್ತು ಬಿಬಿಸಿಯೂ ಒಳಗೊಂಡಂತೆ ಅಲ್ಲಿಯೂ ಹಿಂದೂ ಪ್ರಧಾನಿ ದೇಶವಾಳುತ್ತಿರುವುದು ಸಹಿಸಲಸಾಧ್ಯವಾದಂತಿದೆ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವೆಂದರೆ ಬಿಬಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ತಂತ್ರ ರೂಪಿಸಿ ದಂತಿದೆ.
ಹೇಗೆಂದರೆ, ಮೋದಿ ವಿರುದ್ಧ ಮನೆಹಾಳು ‘ಸಿಡಿ’ ಮಾಡಿರುವ ಬಿಬಿಸಿ, ಮೊದಲನೆಯದಾಗಿ ಇಂಥ ಅಪ್ರಸ್ತುತ ಸಿಡಿಯನ್ನು ರಿಷಿ ಸುನಕ್ ಸರಕಾರ
ಖಂಡಿಸುವಂತೆ ಮಾಡಿದರೆ ಹಿಂದೂ ನಾಯಕರು ‘ಒಂದು’ ಎಂದು ಆಂಗ್ಲರಲ್ಲಿ ಅಸಹನೆ ಏರ್ಪಡಿಸುವುದು. ಎರಡನೆಯದಾಗಿ ಪರೋಕ್ಷವಾಗಿ ಎರಡು
ದೇಶಗಳ ಹಿಂದೂ ನಾಯಕರ ಮಧ್ಯೆ ತಂದಿಡು ವುದು ಈ ಬಿಬಿಸಿಯ ಬಿಸಿಬಿಸಿ ತಂತ್ರದಂತಿದೆ.

ಹೀಗಾಗಿ ಮೊನ್ನೆ ತಮ್ಮ ದೇಶದ ಬಿಬಿಸಿ ಮೋದಿಯವರ ವಿರುದ್ಧದ ‘ಸಿಡಿ’ ಮಾಡಿದಾಗ, ಪಾಪ, ರಿಷಿ ಸುನಕ್ ಅದನ್ನು ಖಂಡಿಸದೆ, ಜಾಣತನದ
ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ. ಇದರಿಂದ ಭಾರತೀಯರು ರಿಷಿ ಸುನಕ್ ಅವರನ್ನು ದ್ವೇಷಿಸಬೇಕು, ಅನಾದರು ರಿಷಿಸುನಕ್ ಬಿಬಿಸಿ ವಿರುದ್ಧ ಹೇಳಿಕೆ ಕೊಟ್ಟರೆ ಅಲ್ಲಿನ ಆಂಗ್ಲರಿಗೆ ರಿಷಿ ಒಬ್ಬ ‘ಸ್ವದೇಶ- ಸ್ವಧರ್ಮ ಪಕ್ಷಪಾತಿ’ ಎಂದು ಬಿಂಬಿಸಬೇಕು. ಹೀಗೆ ಇಲ್ಲಿನ ಹೊಲಸು ಬಾಯಿ ನರಿ ಪ್ರಸಾದ ಮತ್ತು ಹೆಣ್ಣೆಸರಿನ ಅವಿವೇಕಿ ನಾಯಕರಂತೆ ಯೋಚಿಸಿರುವ ಬಿಬಿಸಿ ಇಂದು ವಿಶ್ವಮಟ್ಟದಲ್ಲಿ ಅಸಹ್ಯಕರ ‘ಟ್ಯಾಬಲಾಯ್ಡ್’ ಪತ್ರಿಕೆಯಂತೆ ವರ್ತಿಸಿದೆ.

ಇಂಥವರ ದೌರ್ಭಾಗ್ಯ ವೇನು ಗೊತ್ತೆ? ಮೋದಿ ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಬಿಬಿಸಿ ಕುತಂತ್ರದ ಹೊತ್ತಿನ ಮೊನ್ನೆ ಮೊನ್ನೆ -.೧೦ರಂದು, ಮಹಾರಾಷ್ಟ್ರದ ಪ್ರಬಲ ಮುಸ್ಲಿಂ ಸಮುದಾಯವಾದ ದಾವೂದಿ ಬೋಹ್ರಾ ಜನಾಂಗದವರು ತಮ್ಮ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿಯವರ ಕೈಯಲ್ಲೇ ಉದ್ಘಾಟಿಸಿದ್ದಾರೆ.

ಬಿಬಿಸಿಯ ಕಿತ್ತುಹೋದ ಡಾಕ್ಯುಮೆಂಟರಿಯನ್ನು ತಿಪ್ಪೆಗೆಸೆದಂತೆ ಭಾರತದ ಈ ಸಂಭಾವಿತ ಮುಸಲ್ಮಾನ ಸಮುದಾಯ, ನೇರ ಪ್ರಧಾನಿ ಮೋದಿ ಯವರನ್ನು ಭೇಟಿ ಮಾಡಿ ತಮ್ಮ ಕ್ಯಾಂಪಸ್ಸನ್ನು ಉದ್ಘಾಟಿಸುವಂತೆ ಆಹ್ವಾನಿಸಿದ್ದು ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಂತ್ರದ ದ್ಯೋತಕದಂತಿತ್ತು. ಬೋಹ್ರಾ ಸಮುದಾಯವು ಮನಸ್ಸು ಮಾಡಿದ್ದರೆ ನೆರೆರಾಷ್ಟ್ರಗಳ ಮುಸ್ಲಿಂ ನಾಯಕರನ್ನೋ ಅಥವಾ ಇಲ್ಲಿನ ವಿಶ್ವಪ್ರಸಿದ್ಧ ಮುಸ್ಲಿಂ ನಾಯಕ ಸಿ.ಎಂ. ಇಬ್ರಾಹಿಂ ಅವರನ್ನೋ ಅಥವಾ ಇದೇ ಜನ್ಮದಲ್ಲಿ ಅವಕಾಶವಿದ್ದರೂ ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದ ಸನ್ಮಾನ್ಯ ಹೆಚ್.ಡಿ. ದೇವೇಗೌಡರನ್ನೋ ಉದ್ಘಾಟನೆಗೆ ಆಹ್ವಾನಿಸಬಹುದಿತ್ತು.

ಆದರೆ, ಪ್ರಜ್ಞಾವಂತ ಬೋಹ್ರಾ ಮುಸಲ್ಮಾನರಿಗೆ ಯಾವುದು ಆನೆ ಯಾವುದು ಕತ್ತೆ ಎಂಬುದರ ಸ್ಪಷ್ಟ ತಿಳಿವಳಿಕೆ ಇದ್ದದ್ದರಿಂದಲೇ ಮೋದಿಯವರನ್ನು ಕರೆಸಿ ತಮ್ಮ ಶೈಕ್ಷಣಿಕ ಸಂಸ್ಥೆಯನ್ನು ಉದ್ಘಾಟಿಸಿ ಪವಿತ್ರ ಜಾತ್ಯತೀತ ಸೋದರತ್ವ ತೋರಿದ್ದಾರೆ. ಮೋದಿ ಯವರು ಆ ಒಂದು ಕಟ್ಟಡವನ್ನು ಉದ್ಘಾಟಿಸಿದ್ದು ಒಂದು ಕಾರ್ಯಕ್ರಮವಷ್ಟೇ. ಆದರೆ ಅಂದು ಹಿರಿಯ ಕಿರಿಯರಾದಿ ಮೌಲ್ವಿಗಳು, ಹೆಣ್ಣುಮಕ್ಕಳು, ವಿದ್ಯಾರ್ಥಿಗಳು ಮೋದಿಯವರನ್ನು ತಮ್ಮ ಕ್ಯಾಂಪಸ್ ಒಳಗೆ ಬರಮಾಡಿಕೊಂಡದ್ದು, ಮೋದಿಯವರು ಎಂದಿ ನಂತೆ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಿಗೂ ಕೈಜೋಡಿಸಿ ನಮಸ್ಕರಿಸಿದ್ದು, ಅದಕ್ಕೆ ಪ್ರತಿಯಾಗಿ, ನಮಸ್ಕರಿಸುವ ಪದ್ಧತಿ ಇಲ್ಲದಿದ್ದರೂ ಆ ಸಮಸ್ತ ಮುಸಲ್ಮಾನ ಬಂಧುಗಳು ಕೈ ಜೋಡಿಸಿ ನಮಸ್ಕರಿ ಸಿದ್ದು, ಮೋದಿಯವರ ಕೈಗಳನ್ನು ಮುಟ್ಟುತ್ತ ಪುಳಕಗೊಂಡು ಅವರನ್ನು ಆರಾಧಿಸಿದ ಪ್ರತಿ ಯೊಬ್ಬ ಮುಸಲ್ಮಾನರ ಮುಖದಲ್ಲಿ ಮೂಡಿದ್ದ ಧನ್ಯತಾ ಭಾವ, ಸಾರ್ಥಕತೆ ಹೊಳಪು ಇವೆಲ್ಲವೂ ನಮ್ಮ ದೇಶದ ಸೋದರತೆಯ ದರ್ಶನದಂತಿತ್ತು.

ನಂತರ ಮೋದಿಯವರು -ನಿಮ್ಮೆಲ್ಲರ ನಡುವೆ ಉಪಸ್ಥಿತರಿರುವುದು ನನ್ನ ಮನೆಯ ಕುಟುಂಬದೊಂದಿಗೆ ಇರುವಂತೆ ಅನಿಸಿದೆ. ನೀವು ಪದೇ ಪದೇ
ನಮ್ಮನ್ನು ’ಗೌರವಾನ್ವಿತ ಮುಖ್ಯಮಂತ್ರಿ’ ಮತ್ತು ’ಗೌರವಾನ್ವಿತ ಪ್ರಧಾನ ಮಂತ್ರಿ’ ಎಂದು ಸಂಬೋಧಿಸಿದ್ದೀರಿ. ಆದರೆ ನಾನು ನಿಮ್ಮ ಕುಟುಂಬದ ಸದಸ್ಯ ; ನಾನು ಇಲ್ಲಿ ಪ್ರಧಾನಿಯೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ. ಬಹುಶಃ ನನ್ನಂತೆ ಕೆಲವೇ ಜನರಿಗೆ ಅದೃಷ್ಟ ಸಿಕ್ಕಿದೆ. ನಾನು ಈ
ಕುಟುಂಬದೊಂದಿಗೆ ನಾಲ್ಕು ತಲೆಮಾರು ಗಳಿಂದ  ಸಂಬಂಧ ಹೊಂದಿದ್ದೇನೆ ಮತ್ತು ಎಲ್ಲ ನಾಲ್ಕು ತಲೆಮಾರುಗಳು ನನ್ನ ಮನೆಗೆ ಭೇಟಿ ನೀಡಿವೆ-
ಎಂದು ಸುದೀರ್ಘ ಭಾಷಣ ಮಾಡಿದ್ದಾರೆ.

ಅಲ್ಲಿ ಮೋದಿಯವರು ಕಳೆದ ಸನ್ನಿವೇಶಗಳನ್ನು ಇದೇ ಬಿಬಿಸಿ ಹೆಮ್ಮೆಯಿಂದ ಪ್ರಸಾರ ಮಾಡಿದ್ದರೆ ಅದಕ್ಕೇ ಒಂದು ಗೌರವ ದಕ್ಕುತಿತ್ತು. ಹಾಗೆಯೇ ಇಂಥ ಸುದ್ದಿಗಳನ್ನು ನಮ್ಮಲ್ಲಿನ ಸುದ್ದಿವಾಹಿನಿಗಳು ಒಂದೆರಡು ದಿನ ನಿರಂತರವಾಗಿ ತೋರಿಸಿದ್ದರೆ ಮುಸಲ್ಮಾನರಿಗೆ ಮಂಕುಬೂದಿ ಎರಚಿ ಮೋದಿ
ಮತ್ತು ಬಿಜೆಪಿ ಮುಸಲ್ಮಾನ ವಿರೋಧಿಗಳೆಂದು ಬಿಂಬಿಸುತ್ತಿರುವ ಬರಗೆಟ್ಟ ಪಕ್ಷಗಳಿಗೆ ಉಳಿಗಾಲವಿಲ್ಲ ದಂತ್ತಾಗುತಿತ್ತು. ಅಸಲಿಗೆ ನಮ್ಮ ದೇಶದ
ಮುಸಲ್ಮಾನರಿಗೆ ತೋರಿಸಲೇ ಬೇಕಾದ ದೃಶ್ಯಗಳವು.

ಮುಸಲ್ಮಾನರನ್ನು ಕೇವಲ ವೋಟ್‌ಬ್ಯಾಂಕ್ ಮಾಡಿಕೊಂಡು ಅವರನ್ನು ಸ್ವಾರ್ಥಕ್ಕಾಗಿ ಬಳಸಿ ಕೊಳ್ಳುತ್ತಿರುವ ಪಿತೃಪಕ್ಷಗಳ ವಂಚಕರು ಮುಗ್ಧ
ಮುಸಲ್ಮಾನರಿಂದ ಹಿಡಿದು ಭಯೋತ್ಪಾದಕ ಧರ್ಮಾಂಧ ಮುಸಲ್ಮಾನರವರೆಗೂ ತಿದ್ದಿ ಬುದ್ಧಿ ಹೇಳದೆ, ಅವರು ದಾರಿತಪ್ಪಿದರೂ ಖಂಡಿಸದೆ,
ಪ್ರಚೋದಿಸಿಕೊಂಡೇ ಬಂದ ಅವಕಾಶವಾದಿ ರಾಜಕಾರಣಿಗಳು ಮುಸಲ್ಮಾನರನ್ನು ಒಂದೊಳ್ಳೆಯ ರೀತಿಯಲ್ಲಿ ಓಲೈಸದೇ, ಹಿಂದುತ್ವವನ್ನು
ವಿರೋಽಸುವುದೇ ಅಲ್ಪಸಂಖ್ಯಾತರನ್ನು ಓಲೈಸಿದಂತೆ ಎಂಬ ಅಡ್ಡಕಸುಬಿ ಅವಿವೇಕವನ್ನು ಬೆಳೆಸಿಕೊಂಡಿವೆ. ಹೀಗಾಗಿ ಕೇಸರಿ ಬಣ್ಣ, ತಿಲಕ,
ಸಂಪ್ರದಾಯಗಳನ್ನು ವಿರೋಽಸುವುದು, ನಾನು ಹಿಂದುತ್ವ ವಿರೋಧಿ ಸೆಕ್ಯುಲರಿಸಂ ಪರ, ಭಯೋತ್ಪಾದಕರೂ ನಮ್ಮ ಬ್ರದರ್ಸ್’ ಎಂಬಿ ತ್ಯಾದಿ
ಹೇಳಿ ನೀಡಿದರೆ ಸಾಕು ಮುಸ್ಲಿಂ ವೋಟು ಗಳು ಉದುರಿಬಿಡುತ್ತದೆ ಎಂದು ಭಾವಿಸಿದ್ದಾರೆ.

ಟಿಪ್ಪುವಿನಂಥ ಮತಾಂಧನನ್ನು ಮುಂದಿಟ್ಟುಕೊಂಡು ಹಿಂದೂಗಳಿಗೆ ತಪ್ಪು ಸಂದೇಶ ಕೊಡುತ್ತ, ಮುಸಲ್ಮಾನರ ಔತಣಕೂಟಕ್ಕೆ ಹೋಗಿ ಅವರ
ಸಾಂಪ್ರದಾಯಿಕ ಟೋಪಿ ಧರಿಸಿ ಬಿರಿಯಾನಿ ಮೆದ್ದು ಬರುವುದು, ದರ್ಗಾಗಳಿಗೆ ತೆರಳಿ ನಿಲ್ಲಲಾಗಿದ್ದರೂ ಬಗ್ಗಿ ಬೋಗಸ್ ಪ್ರಾರ್ಥನೆ ಮಾಡುವುದು, ಪಾಳುಬಿದ್ದ ಕಟ್ಟಡಕ್ಕೆ ದೃಷ್ಟಿಗೊಂಬೆ ನಿಲ್ಲಿಸಿದಂತೆ ವಿಧೂಷಕನಂತಿರುವ ನಾಯಕನನ್ನು ಅಧ್ಯಕ್ಷನನ್ನಾಗಿಸಿ ಗೆಣಸು ಕೀಳಲು ಬಿಟ್ಟು ಕುಟುಂಬ ದೊಳಗಿನಿಂದ ಆದೇಶ ಹೊರಡಿಸಿಕೊಳ್ಳುತ್ತಾರೆ. ಇಂಥ ಪುಟಗೋಸಿಗಳನ್ನು ಇನ್ನಾದರೂ ದೇಶದ ಮುಸಲ್ಮಾನರು ಬೆನ್ನಿನ ಕೆಳಗೆ ಒದ್ದು ದೂರ ವಿಡಬೇಕಿದೆ.

ಮಹಾರಾಷ್ಟ್ರದ ಬೊಹ್ರಾ ಮುಸಲ್ಮಾನರಂತೆ ಮೋದಿಯವರ ‘ಸಬ್ಕಾ ಸಾಥ್’ ಮಾತಿನಲ್ಲಿ ನಂಬಿಕೆ-ಗೌರವವಿದ್ದರೆ ದೇಶಾದ್ಯಂತ ಮುಸಲ್ಮಾ
ನರು, ಮೋದಿಯವರನ್ನು ಆಹ್ವಾನಿಸಿ ಭಾವೈಕ್ಯ ಸಮಾವೇಶಗಳನ್ನು ಏರ್ಪಡಿಸಿ ನೋಡಲಿ. ಆಗ ಇಲ್ಲಿನ ಸ್ವಾರ್ಥ ನಾಯಕರ ಅನರ್ಥ ಜಾತ್ಯತೀತ
ವಾದಕ್ಕೂ ಮೋದಿಯವರ ಸ್ವಚ್ಛ ಜಾತ್ಯತೀತ ವಾದಕ್ಕೂ ಇರುವ ವ್ಯತ್ಯಾಸದ ಅರಿವಾಗುವುದರಲ್ಲಿ ಸಂಶಯವೇ ಇಲ್ಲ. ಅಂಥ ಕೆಲಸವನ್ನು ಪ್ರಜ್ಞಾವಂತ ಮುಸ್ಲಿಂ ಹಿರಿಯರು ಖಂಡಿತಾ ಮಾಡಬಹುದು. ಏಕೆಂದರೆ ಕಳೆದ ಒಂಬತ್ತು ವರ್ಷಗಳ ಅವಧಿಯ  ಮೋದಿ ಸರಕಾರದಲ್ಲಿ ಯಾವ ಜಾತಿಧರ್ಮಕ್ಕೂ ಸೀಮಿತವಾಗುವಂತೆ ‘ದೌರ್ಭಾಗ್ಯ’ಗಳನ್ನು ಘೋಷಿಸಿಲ್ಲ. ಅಸಲಿಗೆ ಅಸಂಬದ್ಧವಾಗಿ ಮುಸಲ್ಮಾನರನ್ನು ಓಲೈಸುವ ರಾಜಕಾರಣವನ್ನಂತೂ ಮಾಡಿಯೇ ಇಲ್ಲ. ಆದರೂ ಬೋಹ್ರಾ ಮುಸಲ್ಮಾನರಿಗೆ ಗೊತ್ತಿದೆ ಮೋದಿ ಎಂದರೆ ಏನೆಂದು. ಇದು ದೇಶದ ಸಮಸ್ತ ಮುಸಲ್ಮಾನರಿಗೆ ಅನುಭೂತಿಯಾಗುವ ಕಾಲ ಸನಿಹದಲ್ಲಿದೆ.

ಸದ್ಯಕ್ಕೆ ಭಾರತದಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ‘ಸಮೀಕ್ಷೆ’ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ, ಮೋದಿ ವಿರುದ್ಧದ ಡಾಕ್ಯುಮೆಂಟರಿಗೆ
ಸಂಬಂಧಿಸಿದಂತೆ ಇಲ್ಲಿನ ಮನೆದ್ರೋಹಿಗಳ ಪ್ರಚೋದನೆ-ಪಾತ್ರ ಇರುವ ಜಾಡನ್ನು ಶೋಧಿಸುವಂತಿದೆ. ೨೦೨೪ರ ಚುನಾವಣೆಯ
ಹೊತ್ತಿಗೆ ಮೋದಿಯವರ ಇಮೇಜನ್ನು ಕೆಡಿಸುವ ಹುನ್ನಾರದಲ್ಲಿರುವ ಇಲ್ಲಿನ ಮನೆಹಾಳರೇ ಈ ಡಾಕ್ಯುಮೆಂಟರಿಯ ಸೂತ್ರಧಾರಿಗಳೆಂಬ ಅನು
ಮಾನವಿದೆ. ಅದಕ್ಕಾಗಿ ಬಿಬಿಸಿ ಸಿಬ್ಬಂದಿಯ ಮೊಬೈಲ್-ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿರುವುದು ವರದಿ
ಯಾಗಿದೆ. ಇದನ್ನು ಕಂಡ ಮತ್ತದೇ ಗುಲಾಮರು -ಮನೆದ್ರೋಹಿಗಳು ‘ಪತ್ರಿಕಾ ಸ್ವಾತಂತ್ರ್ಯದ ಹರಣ’ ಎಂದು ಬರ್ನಾಲ್ ಹುಡುಕುತ್ತಿವೆ !
ಇವರಿಗೆ ಇತಿಹಾಸದಲ್ಲಿ ಸನಾತನ ಹಿರಿಮೆಯನ್ನು ನಾಶ ಮಾಡಿದ ಇಸ್ಲಾಂ ದರೋಡೆಕೋರರು, ಕಾಶ್ಮೀರ್ ಫೈಲ್ಸ್ ನಂಥ ವಿಚಾರಗಳು ಮಾತ್ರ
ಅಪ್ರಸ್ತುತ. ಆದರೆ ಸಾವರ್ಕರ್, ಗೊಡ್ಸೆ ವಿಚಾರಗಳು ಮಾತ್ರ ನಿತ್ಯ ಚಿಂತಾಜನಕ.