ವಿತ್ತ- ವಿಶ್ಲೇಷಣೆ
ಶಿವಪ್ರಸಾದ್ ಎ.
ಐಎಎಸ್ ಹಂತದವರೆಗೆ ಸ್ವಯಂಚಾಲಿತ ವೃತ್ತಿಜೀವನದ ಪ್ರಗತಿ ನೀಡುವುದರಿಂದ ಅರ್ಹತೆಯನ್ನು ಆಧರಿಸಿ ನೀಡಲಾಗುವ ವೃತ್ತಿ ಪ್ರಗತಿಯ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಹೂತುಹಾಕಿದಂತಾಗುತ್ತದೆ. ಅಂತೆಯೇ ಅಧಿಕಾರಿಗಳಿಗೆ ಬಡ್ತಿ ನೀಡುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕಾದ ದಕ್ಷತೆ ಮತ್ತು ಹೊಣೆಗಾರಿಕೆಯ ಅಂಶಗಳನ್ನು ದುರ್ಬಲಗೊಳಿಸುತ್ತದೆ.
ಆರನೇ ವೇತನ ಆಯೋಗದ ಶಿಫಾರಸನ್ನು ಅನುಸರಿಸಿ ಸರಕಾರವು ಮಂಜೂರು ಮಾಡಿದ ‘ನಾನ್-ಫಂಕ್ಷನಲ್ ಫೈನಾನ್ಷಿಯಲ್ ಅಪ್‌ಗ್ರೇಡ್’ (ಎನ್‌ಎಫ್ಯು) ಯೋಜನೆಯು ಅತ್ಯಂತ ನಾಚಿಕೆಗೇಡಿನ ಯೋಜನೆ ಮಾತ್ರವಲ್ಲ, ಅದು ರಾಜಕಾರಣಿ-ಅಧಿಕಾರಿಗಳ ಕೂಟವು ತೆರಿಗೆದಾರರಿಗೆ ಮಾಡಿದ ಅತಿದೊಡ್ಡ ಮೋಸವಾಗಿದೆ. ಉನ್ನತ ಶ್ರೇಣಿಗಳಲ್ಲಿ ಬಡ್ತಿಗಾಗಿ ಖಾಲಿಹುದ್ದೆಗಳು ಸೀಮಿತವಾಗಿರುವ ಕಾರಣ ದಿಂದಾಗಿ ವಿವಿಧ ಸಂಘಟಿತ ‘ಎ’ ಸೇವೆಗಳಲ್ಲಿ (ಕೇಂದ್ರ ಸೇವೆಗಳು) ಮುಂಬಡ್ತಿಯಿಲ್ಲದೆ ಏರ್ಪಡುವ ನಿಶ್ಚಲತೆಯನ್ನು ಪರಿಹರಿಸಲು ಮೂಲ ಭೂತವಾಗಿ ಈ ಪ್ರಸ್ತಾಪವು ಪ್ರಯತ್ನಿಸುತ್ತದೆ.
ಕೇಂದ್ರದಲ್ಲಿ ಖಅಎ (ಖಛ್ಞಿಜಿಟ್ಟ ಅbಞಜ್ಞಿಜಿoಠ್ಟಿZಠಿಜಿqಛಿ ಎZbಛಿ) ಮತ್ತು ಏಅಎ (ಏಜಿಜeಛ್ಟಿ ಅbಞಜ್ಞಿಜಿoಠ್ಟಿZಠಿಜಿqಛಿ ಎZbಛಿ) ಶ್ರೇಣಿಗಳಿಗೆ ನೇಮಕಗೊಂಡು ಆ ಮಟ್ಟದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸದೆ ಹೋದರೂ ಮುಂಬಡ್ತಿ ಪಡೆಯದ ಅಧಿಕಾರಿಗಳಿಗೂ ಬಡ್ತಿ ಪಡೆದವರಷ್ಟೇ ಹೆಚ್ಚಿನ ವೇತನ ಶ್ರೇಣಿಯನ್ನು ಅನುದಾನದ ಮೂಲಕ ನೀಡುವುದೇ ಎನ್‌ಎಫ್ ಯು ಎಂಬ ಮೋಸದ ಯೋಜನೆ. ಹೀಗೆ ವೇತನದಲ್ಲಿ ಮಾತ್ರ ಬಡ್ತಿಯನ್ನು ನೀಡುತ್ತಿರುವ ಯೋಜನೆಯು ಸಾಂಸ್ಥಿಕ ಅಗತ್ಯಗಳು, ಖಾಲಿ ಹುದ್ದೆಗಳ ಲಭ್ಯತೆ ಮತ್ತು ಜವಾಬ್ದಾರಿಯ ಮಟ್ಟ ಅಥವಾ ಹುದ್ದೆಯ ನಿಯಂತ್ರಣದ ವ್ಯಾಪ್ತಿಗೆ ಒಳಪಟ್ಟಿ ರುವುದಿಲ್ಲ.
ಇದರರ್ಥ, ಒಂದು ನಿರ್ದಿಷ್ಟ ಕಾಲಾವಧಿಯ ಸೇವೆ ಪೂರೈಸಿದ ಮೇಲೆ ಆ ಶ್ರೇಣಿಯ ಅಧಿಕಾರಿಗಳು ಮೇಲಿನ ಉನ್ನತ ಅಧಿಕಾರದ ಶ್ರೇಣಿಗೆ ಬಡ್ತಿ ಪಡೆಯದಿದ್ದರೂ, ಬಡ್ತಿ ಪಡೆದವರಷ್ಟೇ ವೇತನವನ್ನು ಪಡೆಯುತ್ತಾರೆ ಎಂಬುದು. ಕೇಂದ್ರದಲ್ಲಿ ಒಂದು ನಿರ್ದಿಷ್ಟ ನೇಮಕಾತಿಯಲ್ಲಿ ಐಎಎಸ್ ಅಧಿಕಾರಿಯನ್ನು ಎಂಪ್ಯಾನೆಲ್ ಮಾಡಿದಾಗಲೆಲ್ಲಾ, ಇತರ ಎಲ್ಲಾ ‘ಗ್ರೂಪ್-ಎ’ ಸೇವಾ ಅಧಿಕಾರಿ ಗಳನ್ನು ಎಂಪ್ಯಾನೆಲ್‌ಮೆಂಟ್ ದಿನಾಂಕದಿಂದ ಎರಡು ವರ್ಷಗಳ ಅವಧಿಯ ನಂತರ ಕಾರ್ಯಕಾರಿಯಲ್ಲದ ಆಧಾರದ ಮೇಲೆ ಅದೇ ಮಟ್ಟಕ್ಕೆ ಅಪ್‌ಗ್ರೇಡ್ ಮಾಡಲಾಗುತ್ತದೆ ಎಂದು ಎನ್‌ಎಫ್ ಯು ಸೂಚಿಸುತ್ತದೆ, ಅವರು ನಿಜವಾಗಿಯೂ ಬಡ್ತಿ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ.
ಉದಾಹರಣೆಗೆ ೧೯೮೯ರ ಬ್ಯಾಚ್‌ನ ಐಎಎಸ್ ಅಧಿಕಾರಿಯೊಬ್ಬರು ಭಾರತ ಸರಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರೆ, ೧೯೮೭ರ ಬ್ಯಾಚ್‌ನ ಎಲ್ಲಾ ಸಂಘಟಿತ ‘ಗ್ರೂಪ್-ಎ’ ಅಧಿಕಾರಿಗಳನ್ನು ಸಹ ‘ಭಾರತ ಸರಕಾರದ ಹೆಚ್ಚುವರಿ ಕಾರ್ಯದರ್ಶಿ’ ವೇತನ ಶ್ರೇಣಿಯಲ್ಲಿ ಇರಿಸಲಾಗುತ್ತದೆ. ಇದರ ಪರಿಣಾಮವಾಗಿ, ಬಹುತೇಕ ಎಲ್ಲಾ ಸಂಘಟಿತ ‘ಗ್ರೂಪ್-ಎ’ ಐಎಎಸ್ ಅಧಿಕಾರಿಗಳು ವಾಸ್ತವವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಯಾತ್ಮಕ ಶ್ರೇಣಿಗಿಂತ ಹೆಚ್ಚಿನ ಶ್ರೇಣಿಗಳ ವೇತನ ಮತ್ತು
ಪಿಂಚಣಿಯೊಂದಿಗೆ ನಿವೃತ್ತರಾಗುತ್ತಿದ್ದಾರೆ.
ಪ್ರಪಂಚದಲ್ಲೆಲ್ಲಿಯೂ ಸರಕಾರಿ ಅಥವಾ ಕಾರ್ಪೊರೇಟ್ ವಲಯಗಳಲ್ಲಿ ಅಸ್ತಿತ್ವದಲ್ಲಿರದ ಒಂದು ಯೋಜನೆ ಇದಾಗಿದೆ. ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಸರಕಾರವು ಈ ಶಿ-ರಸುಗಳಿಗೆ ಅನುಮೋದನೆ ನೀಡಿತ್ತು.
ಏಳನೇ ವೇತನ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಮಾಥುರ್ ಅವರು ಸಶಸ್ತ್ರ ಪಡೆಗಳಿಗೆ ಮತ್ತು ಈ ಹಿಂದಿನ ಯೋಜನೆಯಲ್ಲಿ ಪರಿಗಣನೆಗೆ ಬಾರದಿದ್ದ ಇತರರಿಗೆ ಅದೇ ಪ್ರಯೋಜನಗಳನ್ನು ನೀಡಬೇಕೆಂದು ಶಿಫಾರಸು ಮಾಡಿದರು.
ಅಂತೆಯೇ ಆರನೇ ವೇತನ ಆಯೋಗದಲ್ಲಿ ಶಿಫಾರಸು ಮಾಡಿದ್ದ ಐಎಎಸ್ ಅಧಿಕಾರಿಗಳು ಮಾತ್ರ ಅನುಭವಿಸಿದ ಎರಡು
ವರ್ಷಗಳ ಹಿಮ್ಮುಖವಾಗಿ ಪರಿಣಾಮಕಾರಿಯಾದ (ಛಿಠ್ಟಿಟomಛ್ಚಿಠಿಜಿqಛ್ಝಿqs ಛ್ಛ್ಛಿಛ್ಚಿಠಿಜಿqಛಿ) ಪ್ರಯೋಜನವನ್ನೂ ತೆಗೆದು ಹಾಕಲು ಶಿಫಾರಸು ಮಾಡಿದರು. ಆಯೋಗದಲ್ಲಿದ್ದ ಐಎಎಸ್ ಅಧಿಕಾರಿಗಳ ಪ್ರತಿನಿಧಿಯು ಅಂಥ ಶಿಫಾರಸಿಗೆ ಆಕ್ಷೇಪಿಸುತ್ತಾರೆ
ಎಂಬುದು ಸಹಜ ನಿರೀಕ್ಷೆಯಾಗಿತ್ತು. ಆಶ್ಚರ್ಯಕರವಾಗಿ, ಐಎಎಸ್ ಪ್ರತಿನಿಧಿಯಾದ ವಿವೇಕ್ ರೇ ಅವರು ಈ ಶಿಫಾರಸಿಗೆ
ಆಕ್ಷೇಪಿಸಲಿಲ್ಲ, ಇದಕ್ಕೆ ವಿರುದ್ಧವಾಗಿ ಈ ಯೋಜನೆಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದರು.
ಇಂಥ ವೈವಿಧ್ಯಮಯ ಸೇವೆಗಳು ಮತ್ತು ಸಿಬ್ಬಂದಿಗಳಲ್ಲಿ ಏಕರೂಪದ ವೃತ್ತಿಜೀವನದ ಪ್ರಗತಿಗಾಗಿ ಪ್ರಯತ್ನಿಸುವುದು, ವ್ಯಾಪಕವಾಗಿ ವಿಭಿನ್ನವಾದ ಸಾಂಸ್ಥಿಕ ಜವಾಬ್ದಾರಿಗಳುಳ್ಳ ಹುದ್ದೆಗಳ ನಿರ್ವಹಣೆ ಮತ್ತು ಸಾಂಸ್ಥಿಕ ರಚನೆಗಳಿಗೆ ಸಂಬಂಽಸಿದ ಮೂಲಭೂತ ನಿರ್ವಹಣಾ ತತ್ತ್ವಗಳನ್ನು ಉಲ್ಲಂಘಿಸುತ್ತದೆ. ಐಎಎಸ್ ಹಂತದವರೆಗೆ ಸ್ವಯಂಚಾಲಿತ ವೃತ್ತಿಜೀವನದ ಪ್ರಗತಿ ನೀಡುವುದರಿಂದ ಅರ್ಹತೆಯನ್ನು ಆಧರಿಸಿ ನೀಡಲಾಗುವ ವೃತ್ತಿ ಪ್ರಗತಿಯ ಪರಿಕಲ್ಪನೆಯನ್ನು ಸಂಪೂರ್ಣವಾಗಿ
ಹೂತುಹಾಕಿದಂತಾಗುತ್ತದೆ. ಅಂತೆಯೇ ಅಧಿಕಾರಿಗಳಿಗೆ ಬಡ್ತಿ ನೀಡುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕಾದ ದಕ್ಷತೆ ಮತ್ತು ಹೊಣೆಗಾರಿಕೆಯ ಅಂಶಗಳನ್ನು ದುರ್ಬಲಗೊಳಿಸುತ್ತದೆ.
ನಿಸ್ಸಂದೇಹವಾಗಿ, ಯೋಜನೆಯ ವಿರುದ್ಧ ಮಾಥುರ್ ಮತ್ತು ವಿವೇಕ್ ರೇ ಅವರು ಮಾಡಿದ ವಾದಗಳು ಸಮಂಜಸ ಮತ್ತು ವಸ್ತುನಿಷ್ಠ ವಾದಗಳೇ. ಅವರ ಎಲ್ಲಾ ಶಿಫಾರಸುಗಳನ್ನೂ ನಿರ್ಲಕ್ಷಿಸಿ, ಯಥಾಸ್ಥಿತಿಯನ್ನು ಮುಂದುವರಿಸುವಂತೆ ನಿರ್ದೇಶಿಸಿದ ಸರಕಾರದ ನಿಲುವು ಸರಿಯಾದುದಲ್ಲ. ಸರಕಾರದ ಈ ನಿಲುವನ್ನು ವಿರೋಧಿಸಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ದೆಹಲಿ ಉಚ್ಚ ನ್ಯಾಯಾಲಯದ ಮೊರೆಹೋದರೆ, ರಕ್ಷಣಾ ಪಡೆಗಳಲ್ಲಿ ಸೇವೆಯಲ್ಲಿರುವ ಅಧಿಕಾರಿಗಳು ರಕ್ಷಣಾ ಪಡೆಗಳ ನ್ಯಾಯಾಧೀ ಕರಣದ ಮೊರೆ ಹೋದರು.
ನಿರೀಕ್ಷೆಯಂತೆಯೇ ದೆಹಲಿ ಉಚ್ಚ ನ್ಯಾಯಾಲಯ ಮತ್ತು ರಕ್ಷಣಾ ಪಡೆಗಳ ನ್ಯಾಯಾಧೀಕರಣಗಳೆರಡೂ ಅರ್ಜಿದಾರರ ಪರವಾಗಿಯೇ ತೀರ್ಪು ನೀಡಿದವು. ಸರಕಾರವು ತಕ್ಷಣವೇ ಈ ಆದೇಶಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ನಮ್ಮ ದೇಶದಲ್ಲಿ ಐಎಎಸ್ ಮತ್ತು ಇತರ ಪ್ರಥಮ ದರ್ಜೆ ಅಧಿಕಾರಿಗಳ ಸಂಖ್ಯೆಗೆ ಹೋಲಿಸಿದರೆ ರಕ್ಷಣಾ ಪಡೆಗಳು ಮತ್ತು ಪೊಲೀಸ್ ಪಡೆಗಳು, ಸಾವಿರದ ಅನುಪಾತದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುತ್ತಾರೆಂಬುದು ನಿಜ.
ಆದರೆ ಈ ಕಾರಣವನ್ನು ಮುಂದಿಟ್ಟುಕೊಂಡು ‘ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ’ ಎಂಬಂಥ ನೀತಿಯನ್ನು
ಅನುಸರಿಸುವುದು ಸರಕಾರದ ವರ್ಚಸ್ಸಿಗೆ ಶೋಭೆ ತರುವುದಿಲ್ಲ. ಐಎಎಸ್ ಮತ್ತು ಇತರ ಪ್ರಥಮ ದರ್ಜೆ ಅಧಿಕಾರಿಗಳು ಹೇಗೆ ದೇಶದ ಪ್ರಗತಿ ಮತ್ತು ಏಳಿಗೆಗಾಗಿ ಶ್ರಮಿಸುತ್ತಿರುವರೋ, ಹಾಗೆಯೇ ರಕ್ಷಣಾ ಮತ್ತು ಪೊಲೀಸ್ ಪಡೆಗಳೂ ನಮ್ಮ ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ಶ್ರಮಿಸುತ್ತಿವೆ. ಆದರೆ ಸರಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ಹೊರೆಯಾಗುತ್ತದೆಯೆಂಬ ಒಂದೇ ಕಾರಣ ದಿಂದ ಸರಕಾರವು ಈ ಯೋಜನೆಯನ್ನು ರಕ್ಷಣಾ ಮತ್ತು ಪೊಲೀಸ್ ಪಡೆಗಳಿಗೆ ನೀಡುವುದಿಲ್ಲವೆಂಬ ನಿರ್ಧಾರವನ್ನು ಕೈಗೊಳ್ಳುವುದೇ ಆದರೆ, ಐಎಎಸ್ ಮತ್ತು ಇತರ ಸರಕಾರಿ ಸೇವೆಗಳ ಪ್ರಥಮ ದರ್ಜೆ ಅಧಿಕಾರಿಗಳಿಗೆ ಮಾತ್ರ ಇಂಥ ಪ್ರಯೋಜನ ವನ್ನೇಕೆ ನೀಡಬೇಕು? ದೆಹಲಿ ಉಚ್ಚ ನ್ಯಾಯಾಲಯದ ತೀರ್ಪುಗಳು ಸಶಸ ಪಡೆಗಳಿಗೆ ಸಮಾನವಾಗಿ ಅನ್ವಯಿಸುತ್ತವೆ.
ವಿಶೇಷವಾಗಿ ಇದೇ ನ್ಯಾಯಾಲಯವು ಇತ್ತೀಚೆಗೆ ಮತ್ತೊಂದು ವಿಷಯದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸಮಾನವಾದ ಪಡೆಗಳು ಎಂಬ ತೀರ್ಪು ನೀಡಿದೆ. ಸಶಸ ಪಡೆಗಳು, ಸಿಎಪಿಎಫ್ ಮತ್ತು ಇತರ ‘ಗ್ರೂಪ್-ಎ’ ಸೇವೆಗಳ ನಡುವಿನ ಹಿಂದಿನ ಸಮಾನತೆಯನ್ನು ಈ ರೀತಿಯಲ್ಲಿ ನಾಶಪಡಿಸುವುದು ಮಾತ್ರವಲ್ಲದೆ, ಆರ್ಮಿ ಆಕ್ಟ್ ೧೯೫೦ರಲ್ಲಿ ನಿರ್ದಿಷ್ಟಪಡಿಸಲಾದಂತೆ ಜೂನಿಯರ್ ಕಮಿಷನ್ಡ್ ಆಫೀಸರ್‌ಗಳು ‘ಗ್ರೂಪ್-ಬಿ’ ಸಮಾನ ಗೆಜೆಟೆಡ್ ಅಧಿಕಾರಿಗಳೇ ಎಂಬುದನ್ನು ಒಪ್ಪಿಕೊಳ್ಳದೆ ಅವರ ಸ್ಥಾನಮಾನಗಳನ್ನು ಕೆಳದರ್ಜೆಗಿಳಿಸಲಾಗಿದೆ.
ಭೂಸೇನೆಯ ಮಾಜಿ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ. ಮಲಿಕ್ ಅವರು ಇತ್ತೀಚೆಗೆ ಟ್ವೀಟ್ ಮಾಡಿ, ‘ಸರಕಾರವು ಈಗ ತಮ್ಮದೇ ಆದ ಖಚಿತವಾದ ವೃತ್ತಿಪ್ರಗತಿ ಯೋಜನೆಯನ್ನು ಹೊಂದಿರುವ ರೈಲ್ವೆ ಅಧಿಕಾರಿಗಳಿಗೆ ಎನ್‌ಎಫ್ ಯು ನೀಡುತ್ತದೆ, ಆದರೆ ಸಶಸ ಪಡೆಗಳಿಗೆ ನಿರಾಕರಿಸುತ್ತದೆ. ದೆಹಲಿಯ ಎಎಫ್ ಟಿ ಬೆಂಚ್ ಆದೇಶದ ಹೊರತಾಗಿಯೂ ಸರ್ವೋಚ್ಚ ನ್ಯಾಯಾಲಯದಲ್ಲಿ ೧೮೯ ಎಸ್‌ಎಲ್‌ಪಿ ಫಿರ್ಯಾದುಗಳನ್ನು ಸಲ್ಲಿಸಲು ರಕ್ಷಣಾ ಬಜೆಟ್‌ನಿಂದ ಕೋಟಿಗಳನ್ನು ಪಾವತಿಸುವ ನಮ್ಮ ದೇಶಭಕ್ತ ರಕ್ಷಣಾ
ಸಚಿವಾಲಯ ಖಂಡಿತವಾಗಿಯೂ ಸೆಲ್ಯೂಟ್‌ಗೆ ಅರ್ಹವಾಗಿದೆ’ ಎಂದು ಹೇಳಿದ್ದಾರೆ.
ನಮ್ಮ ದೇಶದ ರಕ್ಷಣಾ ಪಡೆಗಳ ಉನ್ನತ ದರ್ಜೆಯ ಅಧಿಕಾರಿ ಬಳಗ ರಕ್ಷಣಾ ಪಡೆಗಳಿಗೆ ಎನ್‌ಎಫ್ ಯು ನೀಡುವುದನ್ನು ಈ ಹಿಂದೆ ಸತತವಾಗಿ ವಿರೋಧಿಸುತ್ತ ಬಂದಿದೆ ಎಂಬುದು ರಹಸ್ಯದ ವಿಷಯವಲ್ಲ. ರಕ್ಷಣಾ ಪಡೆಗಳನ್ನು ಹೊರಗಿಟ್ಟು, ಇತರ ಕೇಂದ್ರ ಸರಕಾರದ ಸೇವೆಗಳಿಗೆ ಮಾತ್ರ ಈ ಎನ್‌ಎಫ್ ಯುನ ಪ್ರಯೋಜನಗಳನ್ನು ನೀಡುವುದರ ಪರಿಣಾಮ ಏನಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಆದರೆ ಈಗ, ಮಾಜಿ ಸೇನಾ ಮುಖ್ಯಸ್ಥರು ತಮ್ಮ ನಿಲುವನ್ನು ಬದಲಾಯಿಸಿಕೊಂಡು ರಕ್ಷಣಾ ಪಡೆಗಳಿಗೆ ಬಂದೊದಗಿರುವ ಅವನತಿಯ ಪ್ರತಿಕೂಲ ಪರಿಣಾಮಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈ ಬೆಳವಣಿಗೆಯಿಂದ
ಹಿರಿಯ ರಕ್ಷಣಾ ಅಧಿಕಾರಿಗಳನ್ನು ಅಪ್ರಸ್ತುತಗೊಳಿಸಲಾಗಿದೆ ಮತ್ತು ನಿವೃತ್ತ ಸೇನಾಧಿಕಾರಿಗಳು ತಮ್ಮ ಸ್ವಾರ್ಥವನ್ನಷ್ಟೇ
ನೋಡುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಸರಕಾರದ ಈ ನಿರ್ಧಾರದಿಂದ ನಮ್ಮ ಸಶಸ್ತ್ರ ಪಡೆಗಳ ನೈತಿಕತೆ ಮತ್ತು ಪ್ರೇರಣೆಯ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮವಾಗಲಿದೆ ಎಂಬುದಂತೂ ನಿಜ.
ಇದಕ್ಕೆ ಸ್ಪಷ್ಟ ಪುರಾವೆಯನ್ನು ಲೇಹ್‌ನಲ್ಲಿ ಪ್ರಧಾನ ಮಂತ್ರಿಯವರಿಗೆ ಪೊಲೀಸ್ ಅಧಿಕಾರಿಗಳು ಇತ್ತೀಚೆಗೆ ನೀಡಿದ ಪ್ರಾತ್ಯಕ್ಷಿಕೆ ಯಿಂದ ಪಡೆಯಬಹುದು. ‘ತೀವ್ರವಾದ ಹವಾಮಾನ, ಕಷ್ಟಕರವಾದ ಭೂಪ್ರದೇಶ ಮತ್ತು ಅಲ್ಲಿನ ಭೂಪ್ರದೇಶದ ದುರವಸ್ಥೆ
ಯಿಂದಾಗಿ ಅಲ್ಲಿ ನಿಯೋಜಿಸಲಾದ ಸೈನಿಕರ ಮತ್ತು ಅಧಿಕಾರಿಗಳ ನೈತಿಕತೆ ಮತ್ತು ಪ್ರೇರಣೆಯ ಮೇಲೆ ಪ್ರತಿಕೂಲ ಪರಿಣಾಮ ವಾಗುತ್ತಿದೆ. ಹೀಗಾಗಿ, ನಿಯೋಜನೆಯಾದ ದಿನದಿಂದಲೇ ಮರಳಿ ಬಯಲು ಪ್ರದೇಶಕ್ಕೆ ಹಿಂದಿರುಗುವ ದಿನವನ್ನೇ ಎದುರು
ನೋಡುತ್ತ ಪ್ರತಿ ಘಟಕದ ಸೈನಿಕರು ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಮತ್ತು ಹಿಂದಿರುಗಲು ಬಯಸುತ್ತಿರುತ್ತಾರೆ.
ಜನರ ವಾಸವಿಲ್ಲ ದಿರುವಾಗ ಹಾಗೂ ಆರ್ಥಿಕ ಚಟುವಟಿಕೆಯನ್ನು ಆ ಪ್ರದೇಶದಲ್ಲಿ ದೀರ್ಘಾವಧಿಯವರೆಗೂ ನಡೆಸದಿರುವಾಗ, ಬಂಜರು ಭೂಮಿಯನ್ನು ರಕ್ಷಿಸುವ ಪ್ರಯೋಜನವನ್ನು ಅವರು ಕಾಣುತ್ತಿಲ್ಲ. ಒಬ್ಬ ಹಿರಿಯ ಅಧಿಕಾರಿಯೊಂದಿಗಿನ ಸಂವಾದದ
ಸಮಯದಲ್ಲಿ, ಅವರ ಘಟಕವು ಕಾವಲು ಕಾಯುತ್ತಿದ್ದ ಪ್ರದೇಶವನ್ನು ಆಧರಿಸಿ, ಕಾವಲು ಪಡೆಯು ೪೦೦ ಮೀಟರ್ ಹಿಂದಕ್ಕೆ ಸರಿದರೆ ಮುಂದಿನ ನಾಲ್ಕು ವರ್ಷಗಳ ಕಾಲ PLA ಯೊಂದಿಗೆ ಶಾಂತಿಯನ್ನು ಪಡೆಯಬಹುದು ಎಂದಾದರೆ, ನಾವು ಆ ೪೦೦ ಮೀಟರ್ ಹಿಂದೆ ಸರಿಯಲು ಬಯಸುತ್ತೇವೆ ಎಂದು ಅವರು ತಿಳಿಸಿದ್ದರು. ಅವರ ಆ ಹೇಳಿಕೆಯಲ್ಲಿರುವ ಸತ್ಯವನ್ನು ಮನಗಂಡು,
ನಮ್ಮ ರಾಷ್ಟ್ರೀಯ ಭದ್ರತೆಯ ಸ್ಥಿತಿಯ ಬಗ್ಗೆ ನಾವು ನಿಜವಾಗಲೂ ಚಿಂತಿತರಾಗಬೇಕು.
ಸ್ಪಷ್ಟವಾಗಿ ಗ್ರಹಿಸಲಾಗದ ಕೆಲವು ಕಾರಣಗಳಿಂದಾಗಿ ನಮ್ಮ ಸಶಸ್ತ್ರ ಪಡೆಗಳು ನಮ್ಮ ಕಣ್ಣುಗಳ ಮುಂದೆಯೇ ನಿಜವಾದ ನಾಶ ಕ್ಕೀಡಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ದೇಶದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿಯುಳ್ಳ ಎಲ್ಲ ನಾಗರಿಕರು ಈ ವಿಷಯವನ್ನು ಸರಕಾರದ ಮುಂದೆ ಪ್ರಸ್ತಾಪಿಸಿ, ನಮ್ಮ ರಕ್ಷಣಾ ಪಡೆಗಳಿಗೆ ಮತ್ತು ಅರೆಸೈನಿಕ ಪಡೆಗಳಿಗೆ ಸಲ್ಲಬೇಕಾದ ನ್ಯಾಯವು ಸಲ್ಲುವಂತೆ ಸರಕಾರವನ್ನು ಒತ್ತಾಯಿಸದೆ ಹೋದರೆ ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಒಂದು ಸದೃಢ ಮತ್ತು ಸಶಕ್ತ ಭಾರತ ದೇಶವನ್ನು ನೀಡಲಾರದೆ ಹೋಗಬಹುದು.