ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗೋಪಾಲ್, ‘ಸರ್ವೇ ಭವಂತು ಸುಖಿನಃ’ ಎನ್ನುವ ತತ್ವವನ್ನ ಭಾರತವು ಅನುಸರಿಸಬೇಕು. ನಮ್ಮ ನೆರೆಹೊರೆಯವರು ಸೇರಿದಂತೆ ಯಾರೂ ಹಸಿವಿನಿಂದ ಮಲಗಬಾರದು. ಭಾರತವು ಪಾಕಿಸ್ತಾನಕ್ಕೆ ಗೋಧಿಯನ್ನು ಕಳುಹಿಸುತ್ತಿದ್ದರೆ, ನೆರೆಯ ದೇಶವಾಗಿ ಅದು ಭಾರತದ ಮೇಲಿನ ದಾಳಿಯನ್ನು ಮುಂದು ವರಿಸಿದೆ’ ಎಂದರು.
‘ಎಲ್ಲರೂ ಸಂತೋಷವಾಗಿರಬೇಕು. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಮಲಗಬಾರದು. ಪಾಕಿಸ್ತಾನವು ಇಂದು ಸಂಕಷ್ಟದಲ್ಲಿದೆ. ಆದರೂ ಅದು ಭಾರತದ ಮೇಲಿನ ದಾಳಿಯನ್ನು ನಿಲ್ಲಿಸಿಲ್ಲ. ಒಂದು ವೇಳೆ ಪಾಕಿಸ್ತಾನವು ಭಾರತಕ್ಕೆ ನೆರವು ಕೇಳಿದರೆ, ನಾವು ಯಾವುದೇ ಪ್ರಶ್ನೆಗಳಿಲ್ಲದೇ ಅದರ ನೆರವಿಗೆ ಧಾವಿಸುತ್ತೇವೆ. ಇದು ಭಾರತದ ಸನಾತನ ಸಂಪ್ರದಾಯ. ಕೋವಿಡ್ ಸಂದರ್ಭದಲ್ಲಿ ಆ ದೇಶಕ್ಕೆ ತುರ್ತಾಗಿ ಬೇಕಾಗಿದ್ದ ಔಷಧಿಗಳು ಮತ್ತು ಲಸಿಕೆಗಳನ್ನು ನಾವು ತಲುಪಿಸಿದ್ದೆವು. ಅಂತೆಯೇ ಗೋಧಿಯನ್ನೂ ತಲುಪಿಸಿ ದ್ದೇವೆ. ಭಾರತವು ಹೆಚ್ಚುವರಿ ಪ್ರಮಾಣದಲ್ಲಿ ಗೋಧಿ ಹೊಂದಿದೆ. ಆದರೂ ಪಾಕಿಸ್ತಾನ ತನ್ನ ಮೊಂಡುತನ ಬಿಡಲು ಸಿದ್ಧವಿಲ್ಲ. ಅದು ಅವರ ಸಮಸ್ಯೆ’ ಎಂದು ಗೋಪಾಲ್ ಹೇಳಿದ್ದಾರೆ.
ನೆಮ್ಮದಿಯಿಂದ ಬದುಕುತ್ತಿದ್ದಾರೆ, ವಿಭಜನೆಯಾದಾಗ ಭಾರತದಲ್ಲಿ 3.5 ಕೋಟಿ ಮುಸ್ಲಿಮರಿದ್ದರೆ, ಈಗ 14 ಕೋಟಿಗೂ ಹೆಚ್ಚು ಜನರಿದ್ದಾರೆ. ಆದರೆ ಪಾಕಿಸ್ತಾನದಲ್ಲಿ, ಆಗ ಹಿಂದೂಗಳು ಶೇ 11ರಷ್ಟಿದ್ದರು. ಈಗ ಅವರ ಸಂಖ್ಯೆ ಶೇ 1ಕ್ಕಿಂತಲೂ ಕಡಿಮೆಯಾಗಿದೆ’ ಎಂದೂ ಗೋಪಾಲ್ ಹೇಳಿದ್ದಾರೆ.