ಚಿಕ್ಕಬಳ್ಳಾಪುರ:ಮಾತೃಭಾಷಾಭಿಮಾನ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಾಲೂಕು ಕಸಾಪ ಕಾರ್ಯದರ್ಶಿ ಸುಶೀಲ್ ಮಂಜುನಾಥ್ ತಿಳಿಸಿದರು.
ತಾಲ್ಲೂಕು ಕಸಾಪ ಮಂಗಳವಾರ ಜಿಲ್ಲಾ ನಂದಿ ರಂಗಮಂದಿರದ ಕಛೇರಿಯಲ್ಲಿ ಏರ್ಪಡಿ ಸಿದ್ದ ಮಾತೃಭಾಷಾ ದಿನಾಚರಣೆಯ ಅಂಗವಾಗಿ ಉಪನ್ಯಾಸ ನೀಡಿ ಮಾತನಾಡಿದರು.
ಮಾತೃಭಾಷೆಯೆಂದರೆ ತಾಯಿ ತನ್ನ ಮಗುವಿನೊಡನೆ ಮಾತನಾಡುವ ಮೊದಲ ಮಾತೇ ಮಾತೃಭಾಷೆ. ಮಾತೃಭಾಷೆಯ ಮಹತ್ವವನ್ನು ಅರಿತು, ಯನೆಸ್ಕೋ ಸಂಸ್ಥೆ ಯು 2000 ನೇ ಇಸವಿಯಿಂದ ಅಧಿಕೃತವಾಗಿ ಘೋಷಣೆ ಮಾಡಿ ಆಚರಿಸಿಕೊಂಡು ಬರಲಾಗುತ್ತಿದೆ.
ಮಾತೃಭಾಷೆಯ ಮಹತ್ವದ ಕುರಿತು ಕನ್ನಡದ ಕವಿ ಬಿ.ಎಂ.ಶ್ರೀ ರವರು ಹೇಳಿದಂತೆ, “ಮೊದಲ ತಾಯ ಹಾಲ ಕುಡಿದು ,ಲಲ್ಲೆಯಿಂದ ತೊದಲು ನುಡಿದು, ಗೆಳೆಯರೊಡನೆ ಕೂಡಿ ಬಂದ ಮಾತದಾವುದೋ ಎಂದಿದ್ದಾರೆ, ಎಂದು ಹೇಳಿದರು.
ಸಾಹಿತಿ ಸರಸಮ್ಮ ಮಾತಾಡಿ, ನೆಲ್ಸನ್ ಮಂಡೇಲಾರವರು ಹೇಳಿದ ಹಾಗೆ, ಅರ್ಥವಾಗುವ ಭಾಷೆಯಲ್ಲಿ ಮಾತಾಡಿದರೆ ತಲೆಗೆ ಮುಟ್ಟುತ್ತೆ, ಅವರ ಮಾತೃಭಾಷೆಯಲ್ಲಿ ಮಾತನಾಡಿದರೆ ಹೃದಯಕ್ಕೆ ಮುಟ್ಟುತ್ತೆ. ಮಾತೃಭಾಷೆಯನ್ನು ಎಲ್ಲರೂ ಗೌರವಿಸು ವಂತಾಗಲು ಭಾಷೆ ಯನ್ನು ಬಳಸಬೇಕು. ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿಸೊಣ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಸಮಿತಿ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ ,ಜಂಟಿ ಕಾರ್ಯದರ್ಶಿ ಡಿ.ಎಂ.ಶ್ರೀರಾಮ, ಸಹಕಾರ್ಯದರ್ಶಿ ಮಂಜುನಾಥ್, ಪ್ರತಿನಿಧಿ ನರಸಿಂಹರೆಡ್ಡಿ, ಸಾಂಸ್ಕೃತಿಕ ಕಾರ್ಯದರ್ಶಿ ಶಶಿಕಲಾ,ಮಹಿಳಾ ಪ್ರತಿನಿಧಿ ಕೆಂ.ಎಂ ಕಾವ್ಯ,ಗೀತಾ ಇತರರು ಭಾಗವಹಿಸಿದ್ದರು.