ನವದೆಹಲಿ: ಭಾರತಕ್ಕೆ ಬಂದಿಳಿದ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಿಲಾಯಿತು. ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.
ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗುತ್ತಿದ್ದಂತೆ ಉಭಯ ನಾಯಕರು ಹಸ್ತಲಾಘವ ಮಾಡಿ ದರು. ಈ ಸಂದರ್ಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಕೂಡ ಉಪಸ್ಥಿತರಿದ್ದರು. ಫೆಬ್ರವರಿ 25-26 ರವರೆಗೆ ಓಲಾಫ್ ಸ್ಕೋಲ್ಜ್ ಭಾರತದ ಪ್ರವಾಸದಲ್ಲಿರಲಿದ್ದಾರೆ.
2011 ರಲ್ಲಿ ಉಭಯ ರಾಷ್ಟ್ರಗಳ ನಡುವಿನ ಅಂತರ-ಸರ್ಕಾರಿ ಸಮಾಲೋಚನೆ (ಐಜಿಸಿ) ಕಾರ್ಯವಿಧಾನವನ್ನು ಪ್ರಾರಂಭಿಸಿದ ನಂತರ ಸ್ಕೋಲ್ಜ್ ಅವರ ಭಾರತಕ್ಕೆ ಜರ್ಮನ್ ಚಾನ್ಸೆಲರ್ ನೀಡಿದ ಮೊದಲ ಸ್ವತಂತ್ರ ಭೇಟಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅವರು ಫೆಬ್ರವರಿ 26 ರಂದು ಬೆಂಗಳೂರಿಗೆ ಬರಲಿದ್ದಾರೆ. “ಭಾರತ-ಜರ್ಮನಿ ಕಾರ್ಯ ತಂತ್ರದ ಪಾಲುದಾರಿಕೆಯು ಹಂಚಿಕೆಯ ಮೌಲ್ಯಗಳು, ನಂಬಿಕೆ ಮತ್ತು ಪರಸ್ಪರ ತಿಳುವಳಿಕೆಯಿಂದ ಆಧಾರವಾಗಿದೆ. ದೃಢವಾದ ಹೂಡಿಕೆ ಮತ್ತು ವ್ಯಾಪಾರ ಸಂಪರ್ಕ ಗಳು, ಹಸಿರು ಮತ್ತು ಸುಸ್ಥಿರ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಬೆಳೆಯುತ್ತಿರುವ ಜನರ ಬಾಂಧವ್ಯಗಳು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದೆ.
ಎರಡೂ ರಾಷ್ಟ್ರಗಳು ಬಹುಪಕ್ಷೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಿಕಟವಾಗಿ ಕೆಲಸ ಮಾಡುತ್ತವೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗಳಿಗಾಗಿ ಶ್ರಮಿಸುತ್ತಿವೆ.