Sunday, 15th December 2024

ಯುವ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ಸಾವು

ತಿರುವನಂತಪುರಂ: ಲಯಾಳಂನ ಯುವ ನಿರ್ದೇಶಕ ಜೋಸೆಫ್(31) ಮನು ಜೇಮ್ಸ್ ತನ್ನ ಚೊಚ್ಚಲ ನಿರ್ದೇಶನದ ಸಿನಿಮಾ ರಿಲೀಸ್ಗೂ ಮುನ್ನವೇ ನಿಧನ ಹೊಂದಿದ್ದಾರೆ.
ಜೋಸೆಫ್ ಮನು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದರು. ನ್ಯುಮೋನಿಯಾ ಕಾರಣ ಕೇರಳದ ಎರ್ನಾಕು ಲಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜೋಸೆಫ್ ನಿರ್ದೇಶನದ ಮೊದಲ ಸಿನಿಮಾ ನ್ಯಾನ್ಸಿ ರಾಣಿ ಚಿತ್ರೀಕರಣ ಮುಗಿಸಿ ರಿಲೀಸ್ಗೆ ಎದುರು ನೋಡುತ್ತಿದ್ದರು.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ನ್ಯಾನ್ಸಿ ರಾಣಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಅಹಾನಾ ಕೃಷ್ಣ ಮತ್ತು ಅರ್ಜುನ್ ಅಶೋಕನ್ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ನಟಿ ಅಹಾನಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, “ರೆಸ್ಟ್ ಇನ್ ಪೀಸ್ ಮನು! ಇದು ನಿಮಗೆ ಸಂಭವಿಸಬಾರದಿತ್ತು!” ಎಂದು ಬರೆದುಕೊಂಡಿದ್ದಾರೆ. ಅಜು ವರ್ಗೀಸ್ ಅವರು ಸಂತಾಪ ಸೂಚಿಸಿ, “ತುಂಬಾ ಬೇಗ ಹೋದ ಸಹೋದರ” ಎಂದು ಬರೆದಿದ್ದಾರೆ.

ಜೋಸೆಫ್ ಮನು ಅವರು ಬಾಲನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು.