ಆದಾಗ್ಯೂ, ಪ್ರಕರಣದ ಪರಿಣಾಮಕಾರಿ ವಿಚಾರಣೆಗಾಗಿ ದೆಹಲಿ ಉಪಮುಖ್ಯಮಂತ್ರಿಯ ಐದು ದಿನಗಳ ಕಸ್ಟಡಿ ಅಗತ್ಯವಿದೆ ಎಂದು ಸಿಬಿಐ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಎಂಟು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಫೆ.26 ರಂದು ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಮಧ್ಯೆ ಸಿಸೋಡಿಯಾ ವಿರುದ್ಧದ ತನಿಖೆಯನ್ನ ‘ರಾಜಕೀಯ ದುರುದ್ದೇಶದಿಂದ ನಡೆಸಲಾಗಿದೆ’ ಮತ್ತು ಸಿಬಿಐ ‘ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆ’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.