ತುಮಕೂರು: ನಗರ ಶಾಸಕ ಜ್ಯೋತಿಗಣೇಶ್ ವಿರುದ್ದ ಪೇ ಎಂಎಲ್ಎ ಪೋಸ್ಟರ್ ಅಂಟಿಸಿದ್ದ ಸಂಬಂಧ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿ ಮಾಹಿಳಾ ಪಿಎಸ್ಐ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಶಿಹುಲಿಕುಂಟೆ ನಗರದ ತಿಲಕ್ ಪಾರ್ಕ್ ಠಾಣೆಗೆ ನುಗ್ಗಿ ಪೇ ಎಂಎಲ್ಎ ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿಂತೆ ವಶಕ್ಕೆ ಪಡೆದಿದ್ದ ನಾಲ್ವರು ಆರೋಪಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಡ ಹಾಕಿದ್ದು ಹಾಗೂ ಆರೋಪಿಗಳನ್ನು ಬಿಡುಗಡೆ ಮಾಡಲು ಪಿಎಸ್ಐ ಒಪ್ಪದಿದ್ದಾಗ ಮೂರು ತಿಂಗಳ ನಂತರ ನಮ್ಮ ಸರಕಾರ ಬರುತ್ತದೆ. ಆಗ ನಿಮ್ಮನ್ನೆಲ್ಲಾ ನೋಡಿಕೊಳ್ಳುತ್ತೇನೆ ಎಂದು ದರ್ಪದಿಂದ ಮಾತ ನಾಡಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ಬಂಧನ ಮಾಡಲಾಗಿದೆ.
*
ಫೆ. ೨೫ ರಂದು ತುಮಕೂರಿನ ಗಾಂಧಿನಗರದ ಬಳಿ ನಾಲ್ವರು ಪೇ ಎಂಎಲ್ಎ ಎಂಬ ಪೋಸ್ಟರ್ಗಳನ್ನು ಅಂಟಿಸು ತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ನಾಲ್ವರನ್ನು ವಶಕ್ಕೆ ಪಡೆದ ಬಳಿಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಗಲಾಟೆ ಮಾಡಿದ್ದಾರೆ. ಅವರನ್ನು ಬಂಧನ ಮಾಡಿ ತುಮಕೂರು ೩ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ರಾಹುಲ್ಕುಮಾರ್ ಎಸ್ಪಿ, ತುಮಕೂರು.