ನವದೆಹಲಿ: ಕಳೆದ 18 ತಿಂಗಳಲ್ಲಿ (ಆಗಸ್ಟ್21ರಿಂದ ಜನವರಿ 23) ಆಪ್ತ ಸಮಾಲೋಚನೆಗಾಗಿ ತನ್ನನ್ನು ಸಂಪರ್ಕಿಸಿದವರ ಪೈಕಿ ಕನಿಷ್ಠ ಮೂರನೇ ಒಂದರಷ್ಟು ಜನರು ತಾವು ಆತಂಕ, ಖಿನ್ನತೆ, ಮತ್ತು ಆತ್ಮಹತ್ಯೆಯ ಯೋಚನೆಗಳಿಂದ ಬಳಲುತ್ತಿದ್ದು ಈ ಬಿಕ್ಕಟ್ಟನ್ನು ಎದುರಿಸಲು ಪ್ರಾಮಾಣಿಕ ಮಾನಸಿಕ ಬೆಂಬಲ ಅಗತ್ಯವೆಂದು ಕೋರಿದ್ದಾರೆ ಎಂಬುದಾಗಿ ಒಂದು ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ಮೂರು ತಿಂಗಳಲ್ಲಿ (ನವೆಂಬರ್22ರಿಂದ ಜನವರಿ 23) ಈ ರೀತಿ ಹೇಳುವವರ ಸಂಖ್ಯೆ ಸುಮಾರು 40 ಶೇಕಡಕ್ಕೆ ತಲುಪಿದೆ ಎಂದು ಉಚಿತ ಮಾನಸಿಕ ಆರೋಗ್ಯ ಆಪ್ತ ಸಮಾಲೋಚನೆ ಒದಗಿಸುವ ಸೈರಸ್‌ಮತ್ತು ಪ್ರಿಯಾ ವಂಡ್ರೆವಾಲಾ ಫೌಂಡೇಶನ್‌ಹೇಳಿದೆ.
ಮಾನಸಿಕ ಮತ್ತು ಭಾವನಾತ್ಮಕ ಕೌನ್ಸೆಲಿಂಗ್‌ಅಗತ್ಯವಿರುವವರಿಗೆ 14 ವರ್ಷಗಳಿಂದ ಬೆಂಬಲ ನೀಡುತ್ತಿರುವ ಈ ಫೌಂಡೇಶನ್, ಇಲ್ಲಿವರೆಗೆ 10 ಲಕ್ಷಕ್ಕೂ ಅಧಿಕ ಮಾನಸಿಕ ಮತ್ತು ಭಾವನಾತ್ಮಕ ಕೌನ್ಸೆಲಿಂಗ್‌ಮಾತುಕತೆಗಳನ್ನು ನಡೆಸಿದೆ. ಭಾರತದಲ್ಲಿ ವರ್ಷದ 365 ದಿನಗಳಲ್ಲೂ ಹಗಲಿರುಳೂ ವಾಟ್ಸ್ಯಾಪ್ ಮಾನಸಿಕ ಆರೋಗ್ಯ ಬೆಂಬಲ ನೀಡುವ ಏಕೈಕ ತುರ್ತು ಸೇವೆ ಆಗಿರುವ ವಂಡ್ರೆವಾಲಾ ಫೌಂಡೇಶನ್‌ನ ಹೆಲ್ಪ್‌ಲೈನ್‌ಇಂಗ್ಲಿಷ್‌ಮತ್ತು 10 ಭಾರತೀಯ ಭಾಷೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಖಿನ್ನತೆ, ಆಘಾತ, ಮನೋವ್ಯಾಕುಲತೆ (ಮೂಡ್‌ಡಿಸಾರ್ಡರ್), ದೀರ್ಘಕಾಲೀನ ಅನಾರೋಗ್ಯ ಮತ್ತಿತರ ಮಾನಸಿಕ ಆರೋಗ್ಯ ಸಮಸ್ಯೆಗಳಿರುವವರಲ್ಲಿ ಅಗತ್ಯವಿರುವವರಿಗೆ ಉಚಿತವಾಗಿ ಮನೋವೈಜ್ಞಾನಿಕ ಕೌನ್ಸೆಲಿಂಗ್‌ಮತ್ತು ಮಧ್ಯಸ್ಥಿಕೆ ಒದಗಿಸುವುದು ಇದರ ಉದ್ದೇಶ ವಾಗಿದೆ.
ʻʻಮಾನಸಿಕ ಅಸ್ವಸ್ಥತೆ, ಆತಂಕ, ಖಿನ್ನತೆ, ಮತ್ತು ಆತ್ಮಹತ್ಯಾ ಯೋಚನೆಗಳಿಂದ ಬಳಲುತ್ತಿರುವುದಾಗಿ ನಮ್ಮನ್ನು ಸಂಪರ್ಕಿಸಿದ ಮೂರನೇ ಒಂದರಷ್ಟು ಜನರು ಹೇಳಿದ್ದಾರೆ. ಭಾರತದಲ್ಲಿ 2022ರಲ್ಲಿ ಕೊಲೆಗಳು ಮತ್ತು ಕರೊನಾವೈರಸ್‌ನಿಂದ ಮೃತಪಟ್ಟವರಿಗಿಂತ ಹೆಚ್ಚು ಸಂಖ್ಯೆಯ ಜನರು ಆತ್ಮಹತ್ಯೆ ಯಿಂದ ಮರಣ ಹೊಂದಿದ್ದಾರೆ. ಇಂದು ದೇಶದ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿ ಮನೋರೋಗ ತಜ್ಞರಾದರೂ ಮಾನಸಿಕ ಆರೋಗ್ಯ ಬಿಕ್ಕಟ್ಟು ಪರಿಹರಿಸಲು ನಮ್ಮಲ್ಲಿ ಸಾಕಷ್ಟು ಜನರು ಇರುವುದಿಲ್ಲʼʼ ಎಂದು ಫೌಂಡೇಶನ್‌ಮುನ್ನಡೆಸುತ್ತಿರುವ ಪರೋಪಕಾರಿ ಪ್ರಿಯಾ ಹೀರಾನಂದಾನಿ-ವಂಡ್ರೆವಾಲಾ ಹೇಳಿದ್ದಾರೆ.
2022 ಅಕ್ಟೋಬರ್‌ನಲ್ಲಿ ನಿಮ್ಹಾನ್ಸ್‌ನಡೆಸಿದ ಅಧ್ಯಯನದ ಪ್ರಕಾರ 150 ಮಿಲಿಯ ಭಾರತೀಯರಿಗೆ ಮಾನಸಿಕ ಆರೈಕೆ ಸೇವೆಗಳ ಅಗತ್ಯವಿರಬಹುದು. 2021ರಲ್ಲಿ ಭಾರತದಲ್ಲಿ 1,64,033 ಜನರು ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆತ್ಮಹತ್ಯೆ ಸಾವುಗಳ ಕುರಿತ 2022ರ ರಾಷ್ಟ್ರೀಯ ಅಪರಾಧ ಬ್ಯೂರೋದ (ಎನ್‌ಸಿಆರ್‌ಬಿ) ದತ್ತಾಂಶ (ಡೇಟಾ) ತಿಳಿಸಿದೆ. ಇದು 2020ಕ್ಕೆ ಹೋಲಿಸಿದರೆ ಶೇಕಡ 7.2 ಏರಿಕೆಯಾಗಿದೆ.[1]
ಭಾರತದಲ್ಲಿ 2021ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 12 ಆತ್ಮಹತ್ಯೆಗಳು ದಾಖಲಾಗಿವೆ. ಮಹಾರಾಷ್ಟ್ರ, ತಮಿಳು ನಾಡು, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸಿವೆ. ಈ ರಾಜ್ಯಗಳ ಜನರಲ್ಲಿ ಮಾನಸಿಕ ಆರೋಗ್ಯದ ಬಿಕ್ಕಟ್ಟು ಇರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ ಹಾಗೂ ಈ ಸಮಸ್ಯೆಗೆ ವೈವಿಧ್ಯಮಯ ಕಾರಣಗಳಿರಬಹುದು.
ʻʻಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಆಪ್ತಸಮಾಲೋಚನೆ ಬಯಸಿ ಬರುವ 81% ಮಂದಿಯಲ್ಲಿ ಮಹಾರಾಷ್ಟ್ರದವರು 17.3%, ಉತ್ತರ ಪ್ರದೇಶ 9.5%, ಕರ್ನಾಟಕ 8.3%, ದೆಹಲಿ 8%, ತಮಿಳುನಾಡು 6.2%, ಗುಜರಾತ್5.8%, ಪಶ್ಚಿಮ ಬಂಗಾಳ 5.4, ಕೇರಳ 5.3%, ತೆಲಂಗಾಣ 4%, ಮಧ್ಯ ಪ್ರದೇಶ 3.8%, ರಾಜಸ್ಥಾನ 3.6%, ಮತ್ತು ಹರ್ಯಾಣದವರು 3.6% ಎಂದು ಫೌಂಡೇಶನ್‌ನ ಅಂಕಿಅಂಶ ತಿಳಿಸುತ್ತದೆ. ಇದು ಅರಿವು ಮೂಡಿಸುವಲ್ಲಿ ಈ ವಲಯಗಳಲ್ಲಿ ನಮ್ಮ ಉಚಿತ ಹೆಲ್ಪ್‌ಲೈನ್‌ನಡೆಸಿದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಕಡಿಮೆ ಜಾಗೃತಿಯ ರಾಜ್ಯಗಳಲ್ಲಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕೆಂದೂ ಈ ದತ್ತಾಂಶ ನಮಗೆ ಮಾರ್ಗದರ್ಶನ ಮಾಡುತ್ತದೆʼʼ ಎಂದು ಪ್ರಿಯಾ ಹೀರಾನಂದಾನಿ ವಂಡ್ರೆವಾಲಾ ಹೇಳಿದ್ದಾರೆ.
ವಯಸ್ಸು ಮತ್ತು ಲಿಂಗ ಬದಲಾದಂತೆ ಅವರು ಸಂವಹನಕ್ಕೆ ಆಯ್ಕೆ ಮಾಡಿಕೊಳ್ಳುವ ವಿಧಾನ ಕೂಡ ಬದಲಾಗುತ್ತದೆ ಎನ್ನುವುದು ಅಧ್ಯಯನ ಕಂಡುಕೊಂಡ ಇನ್ನೊಂದು ಮಹತ್ವದ ಅಂಶವಾಗಿದೆ. ಯುವಜನರಲ್ಲಿ ವಾಟ್ಸ್ಯಾಪ್‌ಬಳಕೆ ಹೆಚ್ಚಿದೆ. ಮಧ್ಯ ವಯಸ್ಸಿನವರು ಹಾಗೂ ಅದರ ಮೇಲಿನವರು ದೂರವಾಣಿ ಮೂಲಕ ಮಾತನಾಡಲು ಆದ್ಯತೆ ನೀಡುತ್ತಾರೆ. ವಾಟ್ಸ್ಯಾಪ್‌ಚಾಟ್‌ಮತ್ತು ದೂರವಾಣಿ ಸಂವಾದ ಇವೆರಡರ ಮೂಲಕವೂ 24×7/365 ದಿನಗಳಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಪ್ರವೇಶ ಅಗತ್ಯ ಎನ್ನುವುದನ್ನು ಈ ಡೇಟಾಗಳು ತೋರಿಸುತ್ತವೆ.
ವಾಟ್ಸ್ಯಾಪ್‌ಬಳಕೆ ಪ್ರಮಾಣ ಯುವ ಜನಾಂಗದಲ್ಲಿ ಹೆಚ್ಚುತ್ತಿದೆ. ತಮ್ಮ ಮಾನಸಿಕ ಆರೋಗ್ಯ ಸಂಬಂಧ ನೆರವು ಪಡೆಯಲು ಹೆಚ್ಚೆಚ್ಚು ಯುವಜನರು ವಾಟ್ಸ್ಯಾಪ್‌ಬಳಸುತ್ತಿರುವುದು ಕೊನೆಯ ಮೂರು ತಿಂಗಳ ದತ್ತಾಂಶ ತಿಳಿಸುತ್ತದೆ. 65% ಜನರು 18 ವರ್ಷದೊಳಗಿನವರು, 50% ಜನರು 18-35 ವರ್ಷದೊಳಗಿನವರು, 28.3% ಜನರು 35-60 ವಯೋಮಾನದವರು ಮತ್ತು 60 ವರ್ಷ ಮೇಲ್ಪಟ್ಟ 8 ಮಂದಿ ಇವರೆಲ್ಲರೂ ಈ ಉದ್ದೇಶಕ್ಕೆ ಫೋನ್‌ಕರೆಗೆ ಬದಲಾಗಿ ವಾಟ್ಸ್ಯಾಪ್‌ಬಳಸುತ್ತಾರೆ.
ಆಫ್‌ಲೈನ್‌ನಲ್ಲಿ ಬಹುಶಃ ಯಾವತ್ತೂ ಮಾನಸಿಕ ಆರೋಗ್ಯ ಬೆಂಬಲ ಕೋರಲು ಸಾಧ್ಯವಾಗದ ವಿಭಿನ್ನ ವಿಭಾಗದ ಜನರಿಗಾಗಿ ವಾಟ್ಸ್ಯಾಪ್‌ಒಂದು ಸಂವಹನವನ್ನು ಆರಂಭಿಸಿದೆ. ತಮ್ಮ ಕುಟುಂಬದವರು ಅಥವಾ ಹಿರಿಯರಿಗೆ ಗೊತ್ತಿಲ್ಲದೆ ಮಾನಸಿಕ ಆರೋಗ್ಯ ವಿಚಾರಗಳನ್ನು ಚರ್ಚಿಸ ಬಯಸುವ ಮಹಿಳೆಯರು, ಹುಡುಗಿಯರು, ಯುವಕರು ಈ ಪ್ರಬಲವಾದ ಡಿಜಿಟಲ್‌ವೇದಿಕೆ ಮೂಲಕ ಬೆಂಬಲ ಪಡೆಯುವ ಮಾಧ್ಯಮವನ್ನು ಗಳಿಸಿದ್ದಾರೆ.
ಬಹುತೇಕ 53% ಮಹಿಳೆಯರು ವಾಟ್ಸ್ಯಾಪ್‌ಚಾಟ್‌ಬಳಸಿ ಹೆಲ್ಪ್‌ಲೈನ್‌ಸಂಪರ್ಕಿಸಲು ಆದ್ಯತೆ ನೀಡುತ್ತಾರೆ ಹಾಗೂ 42% ಪುರುಷರು ವಾಟ್ಸ್ಯಾಪ್‌ಚಾಟ್‌ಬಳಕೆಗೆ ಆದ್ಯತೆ ನೀಡುತ್ತಾರೆ.
24x7x365 ಉಚಿತ ಹೆಲ್ಪ್‌ಲೈನ್(+91 9999666555) ಅನ್ನು ವಿಸ್ತರಿಸಿ ಇನ್ನೂ ಹೆಚ್ಚು ಜನರಿಗೆ ತಲುಪಿ ದೀರ್ಘಾವಧಿಯ ಚಿಕಿತ್ಸೆ ನೀಡಲು ಫೌಂಡೇಶನ್‌ಕಾತರವಾಗಿದೆ