Thursday, 21st November 2024

ಅಗ್ನಿವೀರ್‌ಗೆ ರಾಜಕಾರಣಿಗಳ ವಿರೋಧವೇಕೆ ಗೊತ್ತೇ ?

ವೀಕೆಂಡ್ ವಿತ್ ಮೋಹನ್

1336hampiexpress1509@gmail.com

ತಮ್ಮ ಕುಟುಂಬ ಕುಡಿಗಳು ಸಿನಿಮಾದಲ್ಲಿ ರಾಜಕೀಯದಲ್ಲಿ ಹೀರೋಗಳನ್ನಾಗಿ ಮಾಡುವವರಿಗೆ ‘ಚುನಾವಣೆಗೆ ಬಿ ಫಾರಂ ಪಡೆಯಲು ಆತನ ಕುಟುಂಬದ ಒಬ್ಬರಾದರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರಲೇ ಬೇಕು’ ಎಂಬ ನಿಯಮವನ್ನು ಜಾರಿಗೆ ತಂದು ನೋಡಲಿ. ಆಗ ಇಂಥ ಅಯೋಗ್ಯರ ಹಾವಳಿಯಿಂದ ದೇಶ ಮುಕ್ತವಾಗುತ್ತದೆ.

ದೇಶದಲ್ಲಿ ಪ್ರಧಾನಿ ಮೋದಿಯವರು ಜಾರಿಗೆ ತರುತ್ತಿರುವ ಯೋಜನೆಗಳು ಪ್ರಜೆಗಳ ಭವಿಷ್ಯಕ್ಕೆ, ದೇಶದ ಭದ್ರತೆ ಹಾಗೂ ಅಭಿವೃದ್ಧಿಗೆ ಪೂರಕ ವಾಗಿದ್ದರೂ ಪ್ರತಿಪಕ್ಷಗಳಲ್ಲಿ ಆತಂಕ ಹೆಚ್ಚುತ್ತಿದೆ. ಕಾಶ್ಮೀರದ ೩೭೦ನೇ ವಿಧಿ ಕಿತ್ತೆಸೆದಾಗಲೇ ಭಯೋತ್ಪಾದಕ ಅವಲಂಬಿತ ಕೆಲ ರಾಜಕೀಯ ಪಕ್ಷಗಳು ಕಂಗಾಲಾಗಿದ್ದವು. ಇಂಥವರೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ವಿರುದ್ಧ ಇಲ್ಲಿನ ಮುಸಲ್ಮಾನರನ್ನು ದಾರಿತಪ್ಪಿಸಿ ಹಿಂಸಾತ್ಮಕ ಪ್ರತಿಭಟನೆಗೆ ಪರೋಕ್ಷ ಕಾರಣರಾದರು. ಕಳೆದ ವರ್ಷ ದೇಶ ಮತ್ತು ಯುವಶಕ್ತಿಯ ಭವಿಷ್ಯದ ಹಿತದೃಷ್ಟಿಯಲ್ಲಿ ಜಾರಿಗೆ ತಂದ ‘ಅಗ್ನಿಪಥ್’ ಯೋಜನೆಯ ‘ಅಗ್ನಿವೀರ್’ ಸೇನಾ ನೇಮಕವನ್ನೂ ಅವಲೋಕಿಸದೆ ವೋಟ್ ಬ್ಯಾಂಕ್ ರಾಜಕಾರಣವನ್ನು ಇಲ್ಲಿಗೂ ಎಳೆತಂದು ಮತ್ತದೇ ಹಿಂಸಾತ್ಮಕ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ್ದರು.

ಪರಿಣಾಮ ಅಗ್ನಿವೀರ್ ಯೋಜನೆ ಯನ್ನೂ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಲಾಯಿತು. ಇಂಥ ಅರ್ಜಿಗಳನ್ನು ಪರಿಶೀಲಿಸಿದ ದೆಹಲಿಯ ಹೈಕೋರ್ಟ್ ಮೊನ್ನೆ ಮೊನ್ನೆಯಷ್ಟೇ ‘ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯನ್ನು ದೇಶದ ಹಿತದೃಷ್ಟಿ ಮತ್ತು ಸಶಸ ಪಡೆಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ’ ಎನ್ನುವ ಮೂಲಕ ಯೋಜನೆಯನ್ನು ಎತ್ತಿಹಿಡಿದಿದೆ.

ಇಷ್ಟಕ್ಕೂ ಈ ಯೋಜನೆ ದೇಶದ ಕೆಲ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ಕಳವಳ ಹುಟ್ಟಿಸಿರುವುದು ಕುತೂಹಲಕಾರಿ. ಯೋಜನೆಯಿಂದ ದೇಶದ ಯುವ ಸಮೂಹದಲ್ಲಿ ಆಗಬಹುದಾದ ಬದಲಾವಣೆ, ಬೆಳವಣೆಗೆಗಳು ಗೊತ್ತಾಗಿಯೇ ಇವರಲ್ಲಿ ಆತಂಕ ಮೂಡಿದೆ. ಇಷ್ಟಕ್ಕೂ ನಮ್ಮ ಪ್ರಜಾ
ಪ್ರಭುತ್ವವನ್ನು ‘ಕೈವಶ’ಮಾಡಿಕೊಳ್ಳಬೇಕೆಂಬ ಹವಣಿಕೆಯಲ್ಲಿರುವ ಕೆಲ ರಾಜಕಾರಣಿಗಳಲ್ಲಿ ಇರುವುದು ‘ಯುವಕರು ಸೈನ್ಯಕ್ಕೆ ಸೇರುವುದೇ
ತಿನ್ನುವುದಕ್ಕೂ ಗತಿಯಿಲ್ಲದೆ ಹೊಟ್ಟೆಪಾಡಿಗಾಗಿ’ ಎಂಬರ್ಥದ ಜ್ಞಾನ ಮತ್ತು ಅಂಥದ್ದೇ ನಿಲುವು.

‘ನಮ್ಮ ಸೈನಿಕರು ಪಾಕಿಸ್ತಾನಿಗಳ ಹೆಣ ಉರುಳಿಸಿದಾಗ ಭಾರತೀಯರು ಸಂಭ್ರಮಿಸಿದರೆ ಇಲ್ಲಿನ ಮುಸಲ್ಮಾನರಿಗೆ ನೋವಾಗುತ್ತದೆ’ ಎಂಬ ಹರಾಮಿ
ಯೋಚನೆಗಳು ಇವರಲ್ಲಿದೆ ಎಂಬುದೇ ಆತಂಕಕಾರಿ. ಇನ್ನು ನಮ್ಮ ಯುವಕರ ಮುಂದೆ ಮೈಕ್ ಇಟ್ಟು ಪ್ರಶ್ನಿಸಿದರೆ ರಾಷ್ಟ್ರಪತಿಗಳ ಹೆಸರನ್ನೂ ಹೇಳಲಾಗದಷ್ಟು ಸಾಮಾನ್ಯ ಜ್ಞಾನರಹಿತರಾಗಿರುತ್ತಾರೆ. ಹೀಗಾದಲ್ಲಿ ದೇಶದ ಭವಿಷ್ಯದ ಗತಿಯೇನು? ಅಗ್ನಿವೀರ್ ನೇಮಕಕ್ಕೆ ನಿಗದಿಪಡಿಸಿರುವ
ವಯೋಮಿತಿ, ಹದಿನೇಳೂವರೆ ವರ್ಷದಿಂದ ಇಪ್ಪತ್ತೊಂದು ವರ್ಷ. ಇಂಥ ವಯಸ್ಸಿನಲ್ಲಿ ಕಾಲೇಜಿನತ್ತ ಹೊರಡುವ ವಿದ್ಯಾರ್ಥಿಗಳಿಗೆ ತಮ್ಮ ಮನೆತನ,
ಸಮಾಜ, ದೇಶ, ಇತಿಹಾಸ ಇವುಗಳಿಗೆ ಸಂಬಂಧಿಸಿದ ವಿಚಾರಗಳ ಸ್ಪಷ್ಟತೆಗಳು ಮನಸ್ಸಿನಲ್ಲಿ ದಾಖಲಾಗುವಂಥ, ಟಿಸಿಲೊಡೆಯುವಂಥ ಸಮಯ. ಇಂಥವರು ಕಾಂತಾರ ಮತ್ತು ಹೆಡ್‌ಬುಷ್‌ನಂಥ ಸಿನಿಮಾ ನೋಡಿದಾಗ ಆತನ ಚಿಂತನೆಗೆ ಯಾವುದು ಹೆಚ್ಚು ಪರಿಣಾಮಬೀರಿ ತಲೆಯಲ್ಲಿ ಸ್ಥಾಪಿತ ವಾಗುತ್ತದೆಂಬುದು ನಿರ್ಣಾಯಕ. ಕೆಲವರಿಗೆ ಆತನ ಮನೆತನ, ಸಂಸ್ಕೃತಿ, ಸಂಸ್ಕಾರ ಇವುಗಳ ಮೂಲಕ ಸಮಾಜ ದೆಡೆಗಿನ ದೃಷ್ಟಿಕೋನ ನಿರ್ಧಾರ ವಾಗುತ್ತದೆ.

ಆದರೆ ಬಹುತೇಕ ಕುಟುಂಬಗಳಲ್ಲಿ ಹೆತ್ತವರು ಸಮಾಜದ ಕುರಿತು ಮಕ್ಕಳಮೇಲೆ ಪರಿಣಾಮ ಬೀರದೇ ಇದ್ದಾಗ ಅಂಥ ಮಕ್ಕಳು ಸತ್ಯ-ನೈಜ-ವಾಸ್ತವ-ಭವಿಷ್ಯಗಳ ಮೇಲಿನ ಅರಿವಿನ ಹಿಡಿತವಿಲ್ಲದೇ ಹೋಗಿ ಅವರ ವ್ಯಕ್ತಿತ್ವ ಹೇಗಾದರೂ ರೂಪಿತವಾಗಬಹುದು. ಉದಾಹರಣೆಗೆ ಫೆಬ್ರವರಿ ೧೪ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಶೋಕ ದಿನವೋ ಅಥವಾ ವಾಟಾಳ್ ನಾಗರಾಜ್ ಬೆಂಬಲಿಸುವ ಪ್ರೇಮಿಗಳ ದಿನವೋ ಎಂದು ನಿರ್ಧರಿಸುವಲ್ಲಿ ಗೊಂದಲವಾಗಿ ಮತ್ತದೇ ಪೊದೆ-ಪಾರ್ಕು- ಪಬ್ ಗಳಿಗೆ ಎಡತಾಕುತ್ತಾರೆ.

ಇಂಥ ಯುವಸಮೂಹದಲ್ಲಿ ದೇಶಪ್ರೇಮವನ್ನು ಜಾಗೃತಿಗೊಳಿಸುವ ಪ್ರಯತ್ನ ಎಲ್ಲಿಂದ ಹೇಗೆ ಯಾರಿಂದ ಆಗಬೇಕು? ಭಾರತದಂಥ ಜನಸಂಖ್ಯಾ ಹೆಚ್ಚರುವ ದೇಶದಲ್ಲಿ zs U z ಪೋಷಕರು ಮಕ್ಕಳನ್ನು ಕನಿಷ್ಠ ಪಿಯುಸಿವರೆಗೆ ಸಾಲಮಾಡಿಯಾದರೂ ಓದಿಸುತ್ತಾರೆ. ಆ ನಂತರ ಮುಂದಿನ ಓದೂ ತಲೆಗೆ ಹತ್ತದೆ, ಸಹಜವಾಗಿ z ಡಿ ಂi v ಹೋಗುವುದೇ ಹೆಚ್ಚು. ಇನ್ನು ಸ್ಥಿತಿವಂತ P ಟ ಂ ಬ z g ಮಕ್ಕಳನ್ನು ಡಬಲ್ ಡಿಗ್ರಿ ಮಾಡಿಸುತ್ತಾರೆ. ಇಂಥವರ ಸಂಪಾದನೆಯ ಸ್ಕೇಲು ತಿಂಗಳಿಗೆ ಲಕ್ಷಾಂತರ ರು. ಗಳಿಗೆ ನಿಗದಿಯಾಗುತ್ತದೆ.

ಅದು ಸಿಗುವವರೆಗೂ ಮದುವೆಯಾಗುವಂತಿಲ್ಲ. ಮದುವೆಯಾದರೂ ಮತ್ತದೇ ಶ್ರೀಮಂತಿಕೆಯನ್ನು ಕಟ್ಟಿಕೊಳ್ಳುವುದರ ಮುಂದುವರಿಯುತ್ತಾರೆ.
ಇಂಥವರು ಚುನಾವಣೆಯ ದಿನ ರಜೆಹಾಕಿ ಮತದಾನ ಮಾಡದೇ ಊರು ಬಿಡುತ್ತಾರೆ. ಇತ್ತ ಕಾಲೇಜು ಓದಲಾಗದ ಮಕ್ಕಳು ಖಾಸಗಿ ಕಂಪನಿಗಳಲ್ಲಿ ಕಳೆದುಹೋಗುತ್ತಾರೆ. ಇನ್ನಷ್ಟು ಮಂದಿ ರಾಜಕೀಯ ಪುಡಿ ಪುಢಾರಿಗಳ ಬಳಗ ಸೇರಿಕೊಂಡು ತನ್ನ ಮನೆಯವರ ವೋಟುಗಳನ್ನೂ ಅಡವಿಟ್ಟು ದೇಶಾಭಿಮಾನ ಸ್ವಾಭಿಮಾನದ ವಿಚಾರದಲ್ಲೂ ದುರ್ಬಲರಾಗುತ್ತಾರೆ. ಮೇಲೆ ಹೇಳಲಾದ ಎರಡೂ ತರಹದ ಯುವ ಸಮೂಹ ಒಂದೋ ಮಹಮದ್ ನಲಪಾಡ್, ರಾಹುಲ್ ಗಾಂಧಿಯಂತೆ ‘ಕಂಗೊಳಿಸಬಹುದು’ ಅಥವಾ ಒಂದು ವರ್ಗದ ನಾಯಕರಿಗೆ ಹಿಂಬಾಲಕರಾಗಬಹುದಷ್ಟೇ !.

ಇನ್ನು ಯುವಕರಲ್ಲಿ ಸೇನೆಗೆ ಸೇರಲೇ ಬೇಕು, ದೇಶದ ಗಡಿಯಲ್ಲಿ ನಿಂತು ದೇವರಾಗಬೇಕೆಂದು ಬಯಸುವವರು ಯಾರು? ಮೊದಲಿನ ವರ್ಗದವ ರಂತೆ ಬಡ ಪೋಷಕರು, ಮಕ್ಕಳನ್ನು ಪದವಿ ಓದಿಸಲು ಅಸಹಾಯಕರಾದಾಗ ಅಂಥ ಹಳ್ಳಿಗಾಡಿನ ಮಕ್ಕಳು ಸಹಜವಾಗಿ ದುಡಿಮೆಯ ಪ್ರಥಮ
ಆದ್ಯತೆಯಾಗಿ ಸೇನೆಯತ್ತ ಅರ್ಜಿ ಹಾಕುತ್ತಾರೆ. ಇವರ ಹೊರತು ಎರಡನೇ ವರ್ಗದವರಂತೆ ಹೊಟ್ಟೆ ಮತ್ತು ಅಂಡು ಎರಡೂ ತುಂಬಿದ ಶ್ರೀಮಂತರ
ಮಕ್ಕಳು ಸೇನೆ ಸೇರಿಸುವುದು ಅಸಾಧ್ಯ! ಹೇಗೆ ಒಂದು ಕೆಳವರ್ಗದ, ದುಬಾರಿ ಶಿಕ್ಷಣದಿಂದ ವಂಚಿತರಾಗುವ ಯುವಕರು ಎಂಬತ್ತು ಮಂದಿಯಾದರೆ,
ಸಿಕ್ಕಸಿಕ್ಕ ಸುಖ-ಮಜಗಳನ್ನು ಅನುಭವಿಸಿ ಪದವಿಯನ್ನೂ ಪಡೆದು ಕೋಟ್ಯಂತರ ಹಣ ‘ಬಿಸಾಡಿ’ ಸರಕಾರಿ ಹುದ್ದೆಗಳನ್ನು ಗಿಟ್ಟಿಸಿ, ದೊಡ್ಡ ‘ವ್ಯವಹಾರವನ್ನು’ ಮಾಡಿ ಕೇವಲ ಇಪ್ಪತ್ತು ವಯಸ್ಸಿಗೇ ನೂರುಕೋಟಿ ಹಣಸಂಪಾದನೆಗಿಳಿಯುವ ಇಪ್ಪತ್ತು ಮಂದಿ ಹುಟ್ಟಿಕೊಳ್ಳುತ್ತಿದ್ದಾರೆ.

ಸ್ಥಿತಿವಂತ ಯುವಕರು, ಸ್ಥಿತ್ಯಂತರವಿಲ್ಲದ ಯುವಕರ ಅಸಮತೋಲನದ ಪರಿಣಾಮ ಪ್ರಜಾಪ್ರಭುತ್ವದಲ್ಲಿ ದೇಶಗೇಡಿ ರಾಜಕಾರಣಿಗಳನ್ನು ಕೊಬ್ಬಿಸುತ್ತಿವೆ. ಇಂಥ ಯುವಶಕ್ತಿಯಿಂದ ದೇಶ ಕಟ್ಟುವುದು ಅಷ್ಟು ಸುಲಭವಲ್ಲ. ಇಂಥ ‘ಅನ್‌ಬ್ಯಾಲೆನ್ಸಡ್’ ಪ್ರಜಾಪ್ರಭುತ್ವ ಮತ್ತು
ರಾಜಕಾರಣವು ಕಳೆದ ಏಳು ದಶಕಗಳಿಂದ ನಡೆದುಕೊಂಡು ಬಂದಿತ್ತು. ಇಂಥ ಸಾಮಾಜಿಕ-ರಾಷ್ಟ್ರ ಸಂವೇದನಹೀನ ಯುವಶಕ್ತಿಯನ್ನು ಮೊನಚುಗೊಳಿಸಿ ದೇಶ ಮತ್ತು ಪ್ರಜಾಪ್ರಭುತ್ವವನ್ನು ಸುಭದ್ರಗೊಳಿಸುವ ಒಂದು ಅಸವೇ ಈ ‘ಅಗ್ನಿವೀರ್’ ಎಂಬ ಬ್ರಹ್ಮಾಸ್ತ್ರ.

ಇಂದು ಎಲ್ಲ ಕ್ಷೇತ್ರಗಳೂ ಅಪವಿತ್ರಗೊಂಡಿರುವಾಗ ಭಾರತೀಯ ಸೇನೆ ಮಾತ್ರ ಹನುಮದೇವರಂತೆ ದೇಶವನ್ನು ಕಾಯುತ್ತಿದೆ. ದೇಶದೊಳಗೆ ದೇಶಪ್ರೇಮಿ ಯಾರೆಂದು ಹುಡುಕಿದರೆ ಅದರ ತಲೆ ಮತ್ತು ಬುಡ ಎರಡೂ ಸೇನೆಯದ್ದೇ ಆಗಿದೆ. ಸೇನೆ ಎಂಬುದು ದೇಶಪ್ರೇಮದ ತಾಯಿ ಇದ್ದಂತೆ. ಇಂಥ ಸೇನೆಗೆ ಸೇರುವ ಯಾವುದೇ ಯುವಕ ನಿರಭಿಮಾನಿ, ದೇಶದ್ರೋಹಿಯಾಗಲು ಸಾಧ್ಯವೇ ಇಲ್ಲ. ಇಂಥ ಸೇನೆಗೆ ಇದುವರೆಗೂ ಒಂದು ವರ್ಗದ, ಒಂದು ಭಾಗದ ಯುವಕರು ಮಾತ್ರ ಸೇರಿಕೊಳ್ಳುತ್ತಿದ್ದಾರೆ.

ಆದರೆ ಅಗ್ನಿಪಥ್ ಮೂಲಕ ಎಲ್ಲ ವರ್ಗದ ದೊಡ್ಡ ಯುವ ಸಮೂಹ ಸೇನೆ ಸೇರುವಂಥ ಬಾಗಿಲನ್ನು ಪ್ರಧಾನಿ ಮೋದಿಯವರು ತೆರೆದಿದ್ದಾರೆ. ಮೇಲೆ
ಹೇಳಲಾದ ಹೊಟ್ಟೆ ಮತ್ತು ಅಂಡು ತುಂಬಿದವರನ್ನು ಹೊರತುಪಡಿಸಿದರೆ ಶೇ.೮೦ರಷ್ಟು ಯುವಕ ಯುವತಿಯರೂ ಸೇನೆಯ ಸಮವಸ ತೊಟ್ಟು
ನಾಲ್ಕು ವರ್ಷ ತರಬೇತಿ-ಸೇವೆ ಸಲ್ಲಿಸಿ ಹೊರಬಂದರೆ ಅಂಥವರು ಏನಾಗುತ್ತಾರೆ ಹೇಳಿ. ಹದಿನೇಳರ ಯುವಕರ ನೈಜ ದೇಶಾಭಿಮಾನ
ಜಾಗೃತವಾಗಿಬಿಟ್ಟಿರುತ್ತದೆ. ಅಂಥ ಯುವಕರಲ್ಲಿ ದೇಶರಕ್ಷಣೆ ಸ್ವಾಭಿಮಾನ ರಾಷ್ಟ್ರೀಯತೆ ಸಿದ್ಧಾಂತ ನೆಲೆಸಿ ರಾಜಕಾರಣ ಮತ್ತು ದೇಶ ಇವರೆಡನ್ನೂ
ಸರಿಯಾಗಿ ಅರ್ಥಮಾಡಿಕೊಂಡು ದೇಶರಕ್ಷಣೆ ಯಾರಿಂದ, ಸ್ವಾರ್ಥ ಸಮಯಸಾಧಕ ಗುಲಾಮಗಿರಿಯ ದೇಶದ್ರೋಹಿ ರಾಜಕಾರಣ ಯಾರಿಂದ
ಎಂಬುದನ್ನು ಮನಗಾಣುತ್ತಾರೆ.

ಇಂಥ ಯುವಕರು ಚುನಾವಣೆಯಲ್ಲಿ ಯಾರಿಗೆ ಮತನೀಡಬೇಕೆಂಬುದನ್ನು ನಿರ್ಧರಿಸಿದಾಗ ದೇಶದ ದಿಕ್ಕೇ ಬದಲಾಗಿ ಬಿಡುತ್ತದೆ. ಆಗ ಈಗಿರುವ ದರಿದ್ರ ಪಕ್ಷಗಳ ಅಡ್ಡಕಸುಬಿ ಗುಲಾಮಗಿರಿ ರಾಜಕಾರಣಿಗಳು ಮುಂಡಮೋಚಿಕೊಂಡೋಗಬೇಕಷ್ಟೇ! ಇದನ್ನು ಗ್ರಹಿಸಿರುವ ಗುಳ್ಳೆನರಿಗಳಿಗೆ ಈಗಾಗಲೇ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಇಂಥ ‘ಅಗ್ನಿವೀರರನ್ನು’ ಆರೆಸ್ಸೆಸ್ ಈಗಾಗಲೇ ಮಕ್ಕಳಲ್ಲಿ ಎಳವೆಯಲ್ಲೇ ಸೃಷ್ಟಿಸುತ್ತಿರುವು ದರಿಂದಲೇ ಆ ಸಂಸ್ಥೆಯನ್ನು ಮನಬಂದಂತೆ ಬೈದು ದೂಷಿಸುತ್ತಿದ್ದಾರೆ.

ಇನ್ನು ಮುಂದಿನ ಹತ್ತುವರ್ಷಗಳಲ್ಲಿ ದೇಶದಲ್ಲಿ ಕಾರ್ಯನಿರತ- ನಿವೃತ್ತ ಅಗ್ನಿವೀರರು ಹೆಚ್ಚಾದರೆ ಬರಿಯ ಕಾಂಗ್ರೆಸ್ ಮುಕ್ತ ಭಾರತವಲ್ಲ,
ಭ್ರಷ್ಟಾಚಾರ ಮುಕ್ತ, ಅಪರಾಧ ಮುಕ್ತ, ಸೋಂಬೇರಿ ಮುಕ್ತ, ನಿರುದ್ಯೋಗ ಮುಕ್ತ, ದೇಶದ್ರೋಹ ಮುಕ್ತ ಭಾರತವಾಗುವ ದಿನ ದೂರವಿಲ್ಲ.
ಇಂದು ಡಿಗ್ರಿ ಮಾಡಿದ ಯುವಕರೇ ಖಾಸಗಿ ಕ್ಷೇತ್ರಗಳಲ್ಲಿ ತಿಂಗಳಿಗೆ ಹದಿನೈದು ಸಾವಿರಕ್ಕೆ ದುಡಿಯುತ್ತಿದ್ದಾರೆ. ಆದರೆ ಅಗ್ನಿವೀರ್ ಸೇವೆಯ
ಮೊದಲ ವರ್ಷ ತಿಂಗಳಿಗೆ ೩೦ ಸಾವಿರ, ಎರಡನೇ ವರ್ಷ ೩೩ ಸಾವಿರ, ಮೂರನೇ ವರ್ಷ ೩೬ ಸಾವಿರ, ನಾಲ್ಕನೇ ವರ್ಷ ೪೦ ಸಾವಿರ ಸಂಬಳವಿದ್ದು, ೪ ವರ್ಷಗಳ ಅವಧಿ ಪೂರ್ಣಗೊಂಡ ನಂತರ ಬರೋಬ್ಬರಿ ೧೧.೭೧ ಲಕ್ಷ ರುಪಾಯಿಗಳ ಒಂದು ಬಾರಿ ‘ಸೇವಾ ನಿಧಿ’ ಪ್ಯಾಕೇಜ್
ನೀಡಲಾಗುತ್ತದೆ.

ಹೀಗೆ ನಾಲ್ಕು ವರ್ಷಗಳ ಸೇವೆಗೆ ಆತ ಗಳಿಸುವ ಮೊತ್ತ ೨೮.೪೦ ಲಕ್ಷ ರುಪಾಯಿಗಳು. ಈ ಹಣದಿಂದ ಆತ ತನ್ನದೇ ಸಣ್ಣ ಉದ್ದಿಮೆ ವ್ಯಾಪಾರ ಆರಂಭಿಸಿ ಹೆಮ್ಮೆಯ ಗೌರವ ಆರೋಗ್ಯಕರ ಜೀವನ ಕಟ್ಟಿಕೊಳ್ಳಬಹುದು. ಸೇನೆಯ ಬಗ್ಗೆ ಗೌರವವಿರುವ ಯಾವನೂ ಕೂಡ ಅಗ್ನಿವೀರ
ಯೋಜನೆಯನ್ನು ವಿರೋಧಿಸಿ ರೈಲಿಗ ಬೆಂಕಿ ಹಚ್ಚುವುದಿಲ್ಲ. ಅಸಲಿಗೆ ಅಂಥ ಪುಂಡರು ಸೃಷ್ಟಿಯಾಗುವುದೇ ಮೇಲೆ ಹೇಳಲಾದ ದೇಶಗೇಡಿ ರಾಜಕಾರಣಿಗಳಿಂದ. ಪ್ರತಿಪಕ್ಷಗಳು ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಅಂಕಿ- ಅಂಶ ಸಮೇತ ಆಗ್ರಹಿಸುತ್ತವೆ. ಆದರೆ ೭೦ ಸಾವಿರದಷ್ಟು ಸೇನಾ ಹುದ್ದೆಗಳು ಖಾಲಿಯಾಗಿದ್ದರೂ ಅದನ್ನು ಭರ್ತಿಮಾಡಿ ಎಂದು ಯಾವ ರಾಜಕಾರಣಿಯೂ ಬಾಯ್ತೆರೆಯುವುದಿಲ್ಲ. ಏಕೆಂದರೆ ಬೇರೆಲ್ಲ ಹುದ್ದೆಗಳ ಪರವಾಗಿ ನಿಂತರೆ ವೋಟ್‌ಬ್ಯಾಂಕ್ ವೃದ್ಧಿಯಾಗುತ್ತದೆ.

ಆದರೆ ಸೇನೆಯ ಹುದ್ದೆಗಳನ್ನು ಸಮೃದ್ಧಿಗೊಳಿಸುವುದು ಯಾವ ಪುಟಗೋಸಿಗಳಿಗೂ ಬೇಕಿಲ್ಲ. ಇವರದ್ದೇನಿದರೂ ತಮ್ಮ ಕುಟುಂಬ ಕುಡಿಗಳು ಸಿನಿಮಾದಲ್ಲಿ ರಾಜಕೀಯದಲ್ಲಿ ಹೀರೋಗಳಾಗಬೇಕು, ಕಂಡವರ ಮನೆಮಕ್ಕಳು ಸೇನೆಗೆ ಸೇರಬೇಕು. ‘ಚುನಾವಣೆಗೆ ಬಿ ಫಾರಂ ಪಡೆಯಲು
ಆತನ ಕುಟುಂಬದ ಒಬ್ಬರಾದರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರಲೇ ಬೇಕು’ ಎಂಬ ನಿಯಮವನ್ನು ಜಾರಿಗೆ ತಂದು ನೋಡಲಿ. ಆಗ ಇಂಥ ಅಯೋಗ್ಯರ ಹಾವಳಿಯಿಂದ ದೇಶ ಮುಕ್ತವಾಗುತ್ತದೆ. ಈಗ ಆಗಬೇಕಿರುವ ಕೆಲಸವೆಂದರೆ ನಮ್ಮ ಸುದ್ದಿವಾಹಿನಿಗಳು, ಸಂಘ ಸಂಸ್ಥೆಗಳು ಸಾಧ್ಯವಾದಷ್ಟೂ ‘ಅಗ್ನಿವೀರ್’ ಕುರಿತು ಅರಿವು, ಜಾಹೀರಾತು, ಜಾಗೃತಿ ಮೂಡಿಸಿ ಅಗ್ನಿವೀರರಾಗಲು ಯುವಕರನ್ನು ಪ್ರಚೋದಿಸುವಂತಾಗಲಿ. ಮನೆಗೊಬ್ಬ ಅಗ್ನಿವೀರ ತಯಾರಾಗಿ ನಿಲ್ಲಲಿ. ದೇಶ ಸೇವೆ ಈಶ ಸೇವೆಯೆಂಬ ದೊಡ್ಡವರ ಮಾತು ಯುವಸಮೂಹದಲ್ಲಿ ಮೊದಲಾಗಲಿ.