ಇಂಡಿ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ೪೦/ ಸರ್ಕಾರ ಭ್ರಷ್ಠಾಚಾರದಲ್ಲಿ ಮುಳುಗಿದೆ ಎಂದು ಆರೋಪ ಮಾಡುತ್ತಿದ್ದಾರೆ.ನಿಮ್ಮ ಕಾಂಗ್ರೆಸ್ ಸರ್ಕಾರದ ಸಮಾಜ ಕಲ್ಯಾಣ ಸಚಿವರಾದ ಆಂಜನಯ್ಯಾನವರ ಪತ್ನಿ ಮನೆಯಲ್ಲಿ ಹಣಪಡೆಯುತ್ತಿದ್ದಾಗ ಆಪ್ರೇಶೇನ್ ಸ್ಟೀಂಗ್ನಲ್ಲಿ ಸಿಗಲ್ಲಿಲ್ಲವೆ ? ಭ್ರಷ್ಟಾರದ ಕೂಪವೆ ಕಾಂಗ್ರೆಸ್ ಎಂದು ಕೊಡಗು, ಮೈಸೂರು ಜಿಲ್ಲೆಯ ಸಂಸದ ಪ್ರತಾಪಸಿಂಹ ಕಾಂಗ್ರೆಸ್ ನಾಯಕರುಗಳ ಮೇಲೆ ಹರಿ ಹಾಯ್ದರು.
ಪಟ್ಟಣದ ಕಾಸುಗೌಡ ಬಿರಾದಾರ ಮೈದಾನದಲ್ಲಿ ಎಸ್ಟಿ ಸಮಾವೇಶದಲ್ಲಿ ಎಸ್ಟೀ ಸಮುದಾಯದ ಅಭಿನಂಧನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ತಳವಾರ.ಪರಿವಾರ ಸಮುದಾಯ ಎಸ್ಟಿಗೆ ಸೇರಿಸಬೇಕು ಎಂಬ ಬಹುದಿನಗಳ ಬೇಡಿಕೆ ಇತ್ತು ಕೊಟ್ಟ ಮಾತಿನಂತೆ ನಡೆದುಕೊಂಡಿರುವೆ. ಯಾವುದೇ ಜಾತಿ ಸಮುದಾಯಗಳು ಒಂದೇ ಬೇಡಿಕೆ ಇಟ್ಟಾಗ ಇಡೇರಿಸಿದಾಗ ಇನ್ನೋಂದು ಬೇಡಿಕೆ ಇಡುತ್ತಾರೆ ಒಂದೇ ಬೇಡಿಕೆ ಇಡೇರಿಸಿದರೆ ಸಾಕು ತಳಸಮುದಾಯದ ಜನಾಂಗ ಸದಾ ಕೃತಜ್ಞತೆ , ಉಪಕಾರ ಖುಣ ತೀರಿಸುವ ಸಮುದಾಯ ಇದಾಗಿದೆ.
ಸಂಸದ ರಮೇಶ ಜಿಗಜಿಣಗಿ ಹಾಗೂ ಬಸವನಗೌಡ ಪಾಟೀಲ ಯತ್ನಾಳ ತಳವಾರ ಸಮುದಾಯ ಬಿಜೆಪಿ ಪಕ್ಷಕ್ಕೆ ಸದಾ ಕೈಹಿಡಿಯುತ್ತಾರೆ ಈ ಸಮು ದಾಯಕ್ಕೆ ನ್ಯಾಯ ನೀಡಬೇಕು ಎಂದು ಹೇಳಿದ್ದಾರೆ. ೨೦೧೯ರಲ್ಲಿ ಬಿಜೆಪಿಯ ಮೇಲೆ ವಿಶ್ವಾವಿಟ್ಟು ಮತ ಹಾಕಿದ್ದರೆ ಎಸ್ಟಿ ಮಿಸಲಾತಿ ಕೊಟ್ಟಿರುವುದು ಬಿಜೆಪಿ ಸರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಸಮಾಜದ ಎಸ್ಸಿ,ಎಸ್ಟಿ ಸಮುದಾಯಗಳಿಗೆ ಹೆಚ್ಚಿನ ಮಿಸಲಾತಿ ಒದಗಿಸಿದ ಬಿಜೆಪಿ ಸರಕಾರ ಕೆಳವರ್ಗದ ಪರವಾಗಿ ಕಾಳಜಿ ಇದೆ ಎಂದು ಸಾಬೀತು ಮಾಡಿದ ಬಿಜೆಪಿ ಮುಖ್ಯ ಮಂತ್ರಿ ಬೋಮ್ಮಾಯಿ ಸರಕಾರ ೨೦೨೩ರ ಚುನಾವಣೆಯಲ್ಲಿ ಇಂಡಿಯಿ0ದಲೆ ಭಾರತೀಯ ಜನತಾ ಪಕ್ಷದ ಕಮಲ ಅರಳಸಿಬೇಕು.
ಸಿದ್ದರಾಮಣ್ಣಾ ಕೇಂದ್ರ ಅನುಧಾನದ ಅಕ್ಕಿ ತಂದು ಕೇವಲ ೧ ರೂ ಹಾಕಿ ೧೦ ಕೆ.ಜಿ ಕೊಡುತ್ತೇವೆ . ಪ್ರತಿ ಮನೆಯ ಕುಟುಂಬಕ್ಕೆ ೨೦೦೦ ಸಾವಿರ ರೂತಿಂಗಳಿಗೆ , ೨೦೦ ಯೂನಿಟ ವಿದ್ಯುತ ಉಚಿತ ಎಂದು ಹೇಳಿ ಪೋಟೋ ಪೋಜ್ ಕೊಡುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ೨ ಬಾರಿ ಸ್ಪರ್ಧಿಸಿದ ಸಿದ್ದರಾಮಯ್ಯ ಈಗ ಕ್ಷೇತ್ರ ಬದಲಾಯಿಸುತ್ತಿರುವುದು ಏಕೆ ? ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣ ಮಾಡಿದ್ದಾರೆ ನಮ್ಮ ಸರಕಾರ ಬಂದ ಮೇಲೆ ಅಮೃತ ಯೋಜನೆ, ಜಲಧಾರೆ .ಜಲಜೀವನ ಮಶಿನ್ ಯೋಜನೆಗಳ ಅನುಷ್ಠಾನಕ್ಕೆ ತಂದು ಕುಡಿಯವ ನೀರಿನ ಸಮಸ್ಯ ಬಗೆ ಹರೆದಿದೆ.
ಕಾಂಗ್ರೆಸ್ ಅಭಿವೃದ್ದಿ ಶೂನ್ಯ ಶಾಲಾ ,ಕಾಲೇಜುಗಳಲ್ಲಿ ಕೂಡಾ ಜಾತಿ ರಾಜಕಾರಣ ಮಾಡಿದೆ ಆದರೆ ಇಂದು ಬಿಜೆಪಿ ಸರಕಾರ ಯಾವದೇ ಜಾತಿ ಜನಾಂಗ ನೋಡದೆ ಸರ್ವರೂ ಮಾನವ ಜಾತಿ ಹಿಂದೂ ಹಾಗೂ ಕನ್ನಡ ಮಕ್ಕಳುಎಂದು ಶಿಕ್ಷಣದಲ್ಲಿ ಸಮಾನ ಅವಕಾಶ ನೀಡಲಾಗಿದೆ.
ಅಂಬೇಡ್ಕರ ಭವನ, ಜಗಜೀವನರಾಮಭವನ, ನೀರಾವರಿ, ರಸ್ತೆಗಳು , ರಾಷ್ಟಿçÃಯ ಹೆದ್ದಾರಿ ನಮ್ಮ ಸರಕಾರದ ಕೊಡುಗೆ ನಮ್ಮ ಯೋಜನೆಗಳಿಗೆ ಹೆಸರುಪಡೆಯುತ್ತಿದ್ದಾರೆಎಂದು ಕಾಂಗ್ರೆಸ್ ವಿರುಧ್ಧ ಸಂಸದರುಹರಿಹಾಯ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್ ಪಾಟೀಲ ಕೊಚಬಾಳ,ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ,ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಕೀವುಡೆ, ಮಾಜಿ ಸಚಿವ ಎಸ್.ಕೆ ಬೆಳ್ಳಬ್ಬಿ, ಶಾಸಕ ರಮೇಶ ಬೂಸನೂರ, ಶಿವರದ್ರ ಬಾಗಲಕೋಟ, ಮಂಜುನಾಥ ಓಲೇಕಾರ, ನರಸಿಂಹ ನಾಯಕ, ಅನೀಲ ಜಮಾದಾರ,ಕಾಸುಗೌಡ ಬಿರಾದಾರ, ಶಂಕರಗೌಡ ಡೋಮನಾಳ, ಶೀಲವಂತ ಉಮರಾಣಿ,ವಿರಾಜ ಪಾಟೀಲ,ಶ್ರೀಶೈಲಗೌಡ ಬಿರಾದಾರ, ರವಿ ನಾಯಕೋಡಿ , ಸಿದ್ದಲಿಂಗ ಹಂಜಗಿ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.