Saturday, 14th December 2024

500 ವರ್ಷ ಹಿಂದಿನ ಮೆಣಸು, ಶುಂಠಿ ಮತ್ತು ಕೇಸರಿ ಪತ್ತೆ..!

ಸ್ವೀಡನ್‌: ಸುಮಾರು 500 ವರ್ಷಗಳ ಹಿಂದೆ ಸ್ವೀಡನ್‌ನ ಬಾಲ್ಟಿಕ್ ಕರಾವಳಿಯಲ್ಲಿ ಮುಳುಗಿದ ರಾಯಲ್ ಹಡಗಿ ನಲ್ಲಿ ಮೆಣಸು ಮತ್ತು ಶುಂಠಿ, ಕೇಸರಿಗಳನ್ನು ಕಂಡುಹಿಡಿದಿದ್ದಾರೆ !

ಇವು ಸುಸ್ಥಿತಿಯಲ್ಲಿ ಇರುವುದು ಅಚ್ಚರಿಯನ್ನುಂಟು ಮಾಡಿದೆ. ಡೆನ್ಮಾರ್ಕ್ ಮತ್ತು ನಾರ್ವೆಯ ರಾಜ ಹ್ಯಾನ್ಸ್ ಒಡೆತನದ ಗ್ರಿಬ್‌ಶಂಡ್ ದೋಣಿ 1495 ರಿಂದ ರೊನ್ನೆಬಿ ಸಮುದ್ರದಲ್ಲಿ ಮುಳುಗಿ ಧ್ವಂಸವಾಗಿದೆ.

ರಾಜನು ಸ್ವೀಡನ್‌ನಲ್ಲಿ ರಾಜಕೀಯ ಸಭೆಗೆ ಹಾಜರಾಗಿದ್ದಾಗ ಹಡಗು ಬೆಂಕಿಗೆ ಆಹುತಿಯಾಗಿ ಮುಳುಗಿತು ಎಂದು ನಂಬಲಾಗಿದೆ.

1960 ರ ದಶಕದಲ್ಲಿ ಡೈವರ್‌ಗಳು ಈ ಅವಶೇಷವನ್ನು ಮರುಶೋಧಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಹಡಗಿನ ವಿರಳವಾದ ಉತ್ಖನನಗಳು ನಡೆದಿದ್ದು, ಆಗ ಮೆಣಸು ಮತ್ತು ಶುಂಠಿ ಸಿಕ್ಕಿವೆ. ಮಸಾಲೆಗಳು ಉನ್ನತ ಸ್ಥಾನಮಾನದ ಸಂಕೇತವಾಗಿದ್ದವು, ಏಕೆಂದರೆ ಶ್ರೀಮಂತರು ಮಾತ್ರ ಯುರೋಪ್ನ ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದ್ದರು ಎಂದು ಪುರಾತತ್ತ್ವಜ್ಞರು ಹೇಳಿದ್ದಾರೆ.