ಬೆಂಗಳೂರು: ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಮಹಿಳೆಯರು ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ.
ಪ್ರವೇಶ ಮಟ್ಟದ ಹುದ್ದೆಗಳಿಂದ ತೊಡಗಿ, ದಾಸ್ತಾನು ವ್ಯವಸ್ಥಾಪಕರು ಮತ್ತು ಗೋದಾಮಿನ ಮೇಲ್ವಿಚಾರಕರಂತಹ ತಾಂತ್ರಿಕ ಹುದ್ದೆಗಳವರೆಗೆ ಪ್ರತಿಯೊಂದು ಸಾಮರ್ಥ್ಯದಲ್ಲೂ ಮಹಿಳೆಯರು ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿ ಲಿಂಗವು ಅಡ್ಡಿಯಲ್ಲ ಎಂಬು ದನ್ನು ಸಾಬೀತುಪಡಿಸಿದ್ದಾರೆ.
ಎಲ್ಲರಿಗೂ ಸಮಾನವಾದ ಕಾರ್ಯಕ್ಷೇತ್ರವನ್ನು ರಚಿಸಲು ಮತ್ತು ಬದುಕಿನ ವಿವಿಧ ಹಂತಗಳಲ್ಲಿ ವ್ಯಕ್ತಿಗಳನ್ನು ಸಬಲೀಕರಣಗೊಳಿಸಲು ಅಮೆಜಾನ್ ನಿರಂತರವಾಗಿ ಶ್ರಮಿಸುತ್ತಿದೆ. ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷವಾಕ್ಯ ‘ಸಮಾನತೆಯನ್ನು ಸ್ವೀಕರಿಸಿ’ ಜೊತೆಗೆ, ಅಮೆಜಾನ್ ಇಂಡಿಯಾ ತನ್ನ ಎರಡನೇ ಆವೃತ್ತಿಯ ‘SheIsAmazon’ ಅಭಿಯಾನದಲ್ಲಿ ಗ್ರಾಹಕರಿಗೆ ಪ್ರೇರೇಪಿಸುವ, ಮುನ್ನಡೆಸುವ, ಆವಿಷ್ಕರಿಸುವ ಮತ್ತು ನಗುವನ್ನು ಹಂಚುವ ಮಹಿಳೆಯರನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ.
ಕರ್ನಾಟಕದ ಶಿವಮೊಗ್ಗ ಮೂಲದವರಾದ ಅಕ್ಷತಾ, ಸ್ಟೀರಿಯೋಟೈಪ್‌ಗಳನ್ನು ಧ್ವಂಸ ಮಾಡಿ ಬೆಂಗಳೂರಿನ ಅಮೆಜಾನ್ ಫುಲ್‌ಫಿಲ್‌ಮೆಂಟ್ ಸೆಂಟರ್‌ನಲ್ಲಿ ಫೋರ್ಕ್‌ಲಿಫ್ಟ್ ಚಾಲಕರಾಗಿ ತಮ್ಮ ಛಾಪು ಮೂಡಿಸಿ, ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಇಬ್ಬರು ಸಹೋದರರು ಮತ್ತು ಒಬ್ಬರು ಸಹೋದರಿ ಸಹಿತ ಅವರ ಕುಟುಂಬದಲ್ಲಿ ಆರು ಜನರಿದ್ದಾರೆ. ಆಕೆಯ ತಂದೆ ಮತ್ತು ಸಹೋದರರು ದಿನಗೂಲಿ ಕಾರ್ಮಿಕರು. ಆರ್ಥಿಕವಾಗಿ ಸ್ವತಂತ್ರ ರಾಗುವ ಆಸೆಯಿಂದ, ಅಕ್ಷತಾ ಈ ಹಿಂದೆ ಹಲವಾರು ಇ-ಕಾಮರ್ಸ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಜೊತೆಗೆ ತನ್ನ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಸೂಕ್ತ ಅವಕಾಶಕ್ಕಾಗಿ ಹುಡುಕುತ್ತಿದ್ದರು.
ಅಮೆಜಾನ್ ಸೇರಿದ ಅವರನ್ನು ಫುಲ್‌ಫಿಲ್ಮೆಂಟ್ ಸೆಂಟರ್‌ನ ಸಹವರ್ತಿಗಳು ಭಾರೀ ಯಂತ್ರದ ವಾಹನಗಳನ್ನು ಓಡಿಸಲು ಪ್ರೇರೇಪಿಸಿದರು. ಅಂತಹ ವಾಹನ ಓಡಿಸುವ ಕನಸನ್ನು ಅವರೂ ಕಂಡಿದ್ದರು. ಫೋರ್ಕ್‌ಲಿಫ್ಟ್ (ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳ ಭಾಗವಾಗಿ ವಸ್ತುಗಳನ್ನು ಕಡಿಮೆ ಅಂತರದಲ್ಲಿ ಎತ್ತುವ ಮತ್ತು ಸಾಗಿಸುವ ಕೈಗಾರಿಕಾ ವಾಹನ) ಓಡಿಸಲು ಪರವಾನಗಿ ಪಡೆಯುವುದಕ್ಕಾಗಿ ಒಂದು ತಿಂಗಳ ತರಬೇತಿಗೆ ಸೇರಿಕೊಂಡರು.
ತರಬೇತಿಯ ಉದ್ದಕ್ಕೂ ಅಕ್ಷತಾ ಅವರ ಉತ್ಸಾಹ ಮತ್ತು ಸಮರ್ಪಣಾ ಮನೋಭಾವವು ಸ್ಪಷ್ಟವಾಗಿತ್ತು. ಹೀಗಾಗಿ ಶೀಘ್ರದಲ್ಲೇ ಪರವಾನಗಿ ಪಡೆದ ಫೋರ್ಕ್‌ಲಿಫ್ಟ್ ಚಾಲಕರಾದರು. ಇಂದು, ಅವರು ಅನುಭವಿ ಫೋರ್ಕ್‌ಲಿಫ್ಟ್ ಚಾಲಕರು ಮಾತ್ರವಲ್ಲದೆ ಇತರ ಮಹಿಳಾ ಸಹವರ್ತಿಗಳೂ ಈ ಕೌಶಲವನ್ನು ಕಲಿಯಲು ಪ್ರೇರೇಪಿಸುತ್ತಿದ್ದಾರೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವು ಮಹಿಳೆಯರು ಬಯಸಿದ್ದನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂಬುದಕ್ಕೆ ಅವರ ಯಶೋಗಾಥೆ ಸಾಕ್ಷಿಯಾಗಿದೆ.
“ಪ್ರತಿಯೊಬ್ಬ ಮಹಿಳೆಯೂ ತಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಅವಕಾಶವನ್ನು ಹೊಂದಿರಬೇಕು ಎಂದು ನಾನು ಬಲವಾಗಿ ನಂಬುತ್ತೇನೆ. ನಾನು ಯಾವಾಗಲೂ ನನ್ನ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿದ್ದೇನೆ. ಫೋರ್ಕ್‌ಲಿಫ್ಟ್ ಅನ್ನು ಸುಲಭವಾಗಿ ನಿರ್ವಹಿಸಬಲ್ಲೆ ಎಂದು ನಾನು ತಿಳಿದಿದ್ದೆ. ನನ್ನ ಸಾಮರ್ಥ್ಯಗಳಲ್ಲಿ ನಂಬಿಕೆ ಇರಿಸಿ, ನಾನು ಪ್ರವರ್ಧಮಾನಕ್ಕೆ ಬರಲು ಸಹಾಯ ಮಾಡಿದ ಮತ್ತು ಅದಕ್ಕಾಗಿ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿದ ಅಮೆಜಾನ್‌ಗೆ ನಾನು ಕೃತಜ್ಞಳಾಗಿದ್ದೇನೆ. ನನ್ನ ಪಯಣದ ಉದ್ದಕ್ಕೂ ಕುಟುಂಬವು ಅದ್ಭುತ ರೀತಿಯಲ್ಲಿ ಬೆಂಬಲ ನೀಡಿದೆ. ಫೋರ್ಕ್‌ಲಿಫ್ಟ್ ಚಾಲಕರಾಗಲು ಆಸಕ್ತರಾದ ಇತರ ಮಹಿಳೆಯರಿಗೆ ಸ್ಫೂರ್ತಿ ಮತ್ತು ತರಬೇತಿ ನೀಡಲು ನಾನು ಉತ್ಸುಕಳಾಗಿದ್ದೇನೆ” ಎನ್ನುತ್ತಾರೆ ಅಕ್ಷತಾ.
ಅಮೆಜಾನ್ ಇಂಡಿಯಾದ ಕಸ್ಟಮರ್ ಫುಲ್‌ಫಿಲ್ಮೆಂಟ್, ಪೂರೈಕೆ ಸರಪಳಿ ಮತ್ತು ಸಾರಿಗೆ ಸೇವೆಗಳ ವಿಭಾಗದ ನಿರ್ದೇಶಕ ಅಭಿನವ್ ಸಿಂಗ್ ಮಾತನಾಡಿ, “ಅಮೆಜಾನ್ ಇಂಡಿಯಾದಲ್ಲಿ ವೈವಿಧ್ಯಮಯ, ಸಮಾನ ಮತ್ತು ಅಂತರ್ಗತ ಕಾರ್ಯಪಡೆಯನ್ನು ಬೆಳೆಸಲು ನಾವು ಸಮರ್ಪಿತರಾಗಿದ್ದೇವೆ. ಅಕ್ಷತಾ ಅವರಂತಹ ಸಾಧಕರು ಯಶಸ್ವಿಯಾಗಿ, ಇತರರಿಗೆ ಮಾದರಿಯಾಗುವುದನ್ನು ನೋಡುವುದು ಸಾಕಷ್ಟು ಸ್ಫೂರ್ತಿದಾಯಕವಾಗಿದೆ. ಅವರು ಇನ್ನಷ್ಟು ಉತ್ತಮ ಸಾಧನೆ ಮಾಡಿ, ಎಲ್ಲರಿಗೂ ಸ್ಫೂರ್ತಿ ತುಂಬುವುದರಲ್ಲಿ ನನಗೆ ಸಂದೇಹವೇ ಇಲ್ಲ” ಎಂದು ಮೆಚ್ಚು ನುಡಿಗಳನ್ನಾಡಿದರು.
ಮಹಿಳೆಯರಿಗೆ ಅಂತಹ ಅವಕಾಶಗಳನ್ನು ಒದಗಿಸುವುದು ಕಾರ್ಯಾಚರಣೆಯ ಕ್ಷೇತ್ರದಲ್ಲಿ ವೈವಿಧ್ಯಮಯ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತೊಂದು ಹೆಜ್ಜೆ ಎಂದು ಅಕ್ಷತಾ ನಂಬುತ್ತಾರೆ. ಹೆಚ್ಚು ವೈವಿಧ್ಯಮಯ ಮತ್ತು ಕೌಶಲಪೂರ್ಣ ಉದ್ಯೋಗಿಗಳನ್ನು ನಿರ್ಮಿಸುವಲ್ಲಿ ಅಮೆಜಾನ್ ಮುಂಚೂಣಿ ಯಲ್ಲಿದೆ. ಈ ಸಂಸ್ಥೆಯ ತಾಂತ್ರಿಕ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ. ಇಂದು, ನಮ್ಮ ಒಟ್ಟಾರೆ ವಿತರಣಾ ಅನುಭವ, ಅಮೆಜಾನ್ ಫ್ರೆಶ್, AWS ಪಬ್ಲಿಕ್ ಸೆಕ್ಟರ್ ಮುಂತಾದವುಗಳಲ್ಲಿ ಮಹಿಳೆಯರು ಅನೇಕ ದೊಡ್ಡ ಮತ್ತು ಪ್ರಮುಖ ವ್ಯವಹಾರಗಳನ್ನು ಮುನ್ನಡೆಸು ತ್ತಿದ್ದಾರೆ.