Sunday, 15th December 2024

ಮತದಾನದ ಹಕ್ಕನ್ನು ಪ್ರಾಮಾಣಿಕವಾಗಿ ಉಪಯೋಗಿಸಬೇಕು

ಇಂಡಿ: ಬರುವ ಚುನಾವಣೆಯಲ್ಲಿ ದಲಿತರು ಅಂಬೇಡ್ಕರ ಅವರು ನೀಡಿದ ಮತದಾನದ ಹಕ್ಕನ್ನು ಪ್ರಾಮಾಣಿಕ ವಾಗಿ ಉಪಯೋಗಿಸಬೇಕು. ಹಣ,ಹೆಂಡ ಆಮೀಷಕ್ಕೆ ಒಳಗಾಗಬಾರದು.ನಿಮ್ಮ ಮೇಲೆ ಕಳಕಳಿ ಇರುವ ವ್ಯಕ್ತಿ ಯಾವುದೇ ಪಕ್ಷದವನಿದ್ದರೂ ನಿಮಗೆ ಬೇಕಾದ ವ್ಯಕ್ತಿಗೆ ಮತನೀಡಬೇಕು ಎಂದು ಇಂಡಿ ಉಪ ವಿಭಾಗ ಮಟ್ಟದ ಎಸ್ಸಿ,ಎಸ್ಟಿ ಜಾಗ್ರತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಾನಂದ ಮೂರಮನ ಹೇಳಿದರು.

ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆ ಸಮೀಪ ಬಂದಾಗ ದಲಿತ ಮುಖಂಡರು ನಿಮ್ಮ ಕೆರಿ,ಓಣಿಗಳಿಗೆ ಬರುತ್ತಾರೆ.ನಿಮ್ಮೆನ್ನೆಲ್ಲ ಮುಂದಿಟ್ಟು ಕೊ0ಡು ಅವರು ದೊಡ್ಡವರಾಗುತ್ತಾರೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುವುದಿಲ್ಲ. ನೀವು ಮತ ಚಲಾಯಿಸುವ ಉದ್ದೇಶ ಹೊಂದಿದ ಯಾವುದೇ ಪಕ್ಷದ ಮುಖಂಡನಿಗೆ ನೀವೇ ನೇರವಾಗಿ ಭೇಟಿಯಾಗಿ ನಿಮ್ಮ ಸಮಸ್ಯೆ ಹೇಳಿ ಮತದಾನ ಮಾಡಬೇಕು.

ದಲಿತ ಮುಖಂಡರೆನಿಸಿಕೊಳ್ಳುವವರು ನನ್ನ ಹಿಂದೆ ದಲಿತರು ಇದ್ದಾರೆ ಎಂದು ನಿಮ್ಮನ್ನು ಮುಂದೆ ಇಟ್ಟುಕೊಂಡು ನಾಯಕರಾಗಿ ಸಮಾಜಕ್ಕೆ ಏನು ಕೋಡುಗೆ ನೀಡದೆ, ಗುತ್ತಿಗೆ ಕೆಲಸ,ಕಾರ್,ಬೊರ್ ಎಲ್ಲವೂ ತಾವೇ ಮಾಡಿಕೊಳ್ಳು ತ್ತಾರೆ. ಹೀಗಾಗಿ.ದಲಿತ ಸಮುದಾಯದ ಪ್ರತಿಯೊಬ್ಬರು ಸ್ವಾಭಿಮಾನದ ನಿಮ್ಮ ಮತದಾನದ ಹಕ್ಕನ್ನು ನೀವೇ ಸ್ವತ ತಿಳಿದುಕೊಂಡು ನಿಮ್ಮ ಬಗ್ಗೆ ಕಾಳಜಿ ಹೊಂದಿದ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.ಮುಂಬರುವ ದಿನದಲ್ಲಿ ತಾಲೂಕಿನ ೮೪ ಗ್ರಾಮಗಳ ದಲಿತರ ಓಣಿಗಳಿಗೆ ಭೇಟಿ ನೀಡಿ,ಮತದಾನದ ಮಹತ್ವ ಕುರಿತು ಮತದಾನ ಜಾಗ್ರತಿ ಸಭೆಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಪೀರಪ್ಪ ಕಟ್ಟಿಮನಿ,ಕುಮಾರ ನಿಂಬರಗಿ,ಸುನೀಲ ಬನಸೋಡೆ,ಕುಲಪ್ಪ ವಠಾರ,ಸಂತೋಷ ಮೇಲಿನಕೇರಿ,ಯೊಗೇಶ ಸೆರಖಾನೆ,ನಾಗು ತಳಕೇರಿ,ಜಿತೇಂದ್ರ ಕಟ್ಟಿಮನಿ,ರಾಜು ಕಾಲೇಬಾಗ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.