Saturday, 23rd November 2024

ಫಾಲೋವರ್ಸ್‌ ಬರುತ್ತೆಂದು 55 ಸಾವಿರ ರೂ. ಕಳುಹಿಸಿ ವಂಚನೆಗೆ ಒಳಗಾದ ಯುವತಿ

ಮುಂಬೈ: ಇನ್ಸ್ಟಾಗ್ರಾಮ್‌ ಖಾತೆಗೆ ಅಧಿಕ ಫಾಲೋವರ್ಸ್‌ ಗಳು ಬರುತ್ತಾರೆ ಎಂದು ನಂಬಿ ಹಣ ವ್ಯಯಿಸಿದ ಯುವತಿಗೆ ವಂಚನೆ ಆಗಿದೆ.

ಮುಂಬೈಯ ಪೂರ್ವ ಗೋರೆಗಾಂವ್ ಮೂಲದ 16 ವರ್ಷದ ಯುವತಿ ತನ್ನ ತಂದೆಯ ಮೊಬೈಲ್‌ ನಲ್ಲಿ ಇನ್ಸ್ಟಾ ಗ್ರಾಮ್‌ ಖಾತೆ ತೆರೆದಿದ್ದು, ಅದರಲ್ಲಿ ಸೋನಲಿ ಸಿಂಗ್‌ ಎನ್ನುವ ಹೆಸರಿನ ಯುವತಿಯ ಫಾಲೋ ರಿಕ್ವೆಸ್ಟ್‌ ಬರುತ್ತದೆ.

ರಿಕ್ವೆಸ್ಟ್‌ ಒಪ್ಪಿದ ಬಳಿಕ ಸೋನಲಿಯೊಂದಿಗೆ ಚಾಟ್‌ ಮಾಡಲು ಆರಂಭಿಸಿ, ಅಧಿಕ ಫಾಲೋವರ್ಸ್‌ ಬೇಕಾದರೆ ನಾನು ಹೇಳಿದಾಗೆ ಮಾಡು ಎಂದಿದ್ದಾಳೆ. 50 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್‌ ಬೇಕಾದರೆ ಅದಕ್ಕೆ 6 ಸಾವಿರ ರೂ. ಖರ್ಚು ಆಗುತ್ತದೆ ಅದನ್ನು ಕೊಟ್ಟರೆ ಮಾಡಿಕೊಡುತ್ತೇನೆ ಎಂದು ಸೋನಲಿ ಹೇಳುತ್ತಾಳೆ.

ಯುವತಿ 600 ರೂ. ಅನ್ನು ಗೂಗಲ್‌ ಪೇ ಸ್ಕ್ಯಾನರ್‌ ಮೂಲಕ ಕಳುಹಿಸುತ್ತಾಳೆ. 600 ರೂ.ಗೆ 10 ಸಾವಿರ ಫಾಲೋ ವರ್ಸ್‌ ಬರುತ್ತಾರೆ ಎಂದು ಯುವತಿ, ಫಾಲೋವರ್ಸ್‌ ಬಾರದೇ ಇದದ್ದನ್ನು ನೋಡಿ ಅವರ ಹಣವನ್ನು ವಾಪಾಸ್‌ ಕೇಳುತ್ತಾರೆ.

ದಿನ ಕಳೆದಂತೆ ಫಾಲೋವರ್ಸ್‌ ಗಳ ಸಂಖ್ಯೆ ಹೆಚ್ಚಾಗಾದ ಕಾರಣ ಹಣವನ್ನು ವಾಪಾಸ್ ಕೇಳಿದಾಗ ಸೋನಲ್‌ ತನ್ನ ಖಾತೆ ಈಗ ಸಮಸ್ಯೆಯಾಗಿದೆ.‌ ಹಣ ಕಳಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ತಂದೆ ಬ್ಯಾಂಕ್‌ ಖಾತೆಯಿಂದ ಹಣ ನೋಡಿದಾಗ ಮಗಳ ಕೃತ್ಯ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗಿದ್ದೇನೆ ಎನ್ನುವುದು ಮನಗಂಡು ತಂದೆಯೊಂದಿಗೆ ಸೈಬರ್‌ ಠಾಣೆಗೆ ದೂರು ಕೊಟ್ಟಿದ್ದಾರೆ.