Friday, 22nd November 2024

ಮೂರನೇ ಅವಧಿಗೆ ಅಧ್ಯಕ್ಷರಾಗಿ ಕ್ಸಿ ಜಿನ್ ಪಿಂಗ್ ಆಯ್ಕೆ

ಶಾಂಘೈ: ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್ ಪಿಸಿ)ಯ 14ನೇ ಸಭೆಯಲ್ಲಿ ಕ್ಸಿ ಜಿನ್ ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಖಾತ್ರಿಯಾಗಲಿದ್ದು, ಇದು ಅವರ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ. ಶುಕ್ರವಾರ (ಮಾರ್ಚ್ 10) ಅವರು ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್, ಚೀನಾ ಸಂಸತ್ತು ತನ್ನ ವಾರ್ಷಿಕ ಸಭೆಯನ್ನು ಭಾನುವಾರ (ಮಾರ್ಚ್ 5) ಪ್ರಾರಂಭಿಸಿದೆ. ಈ ವರ್ಷ ಚೀನಾ ತನ್ನ ರಕ್ಷಣೆಗೆ 2023ರಲ್ಲಿ 18 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದು ಭಾರತದ ರಕ್ಷಣಾ ಬಜೆಟ್‌ಗಿಂತ ಸುಮಾರು 3 ಪಟ್ಟು ಹೆಚ್ಚು. ಅದೇ ಸಮಯದಲ್ಲಿ, 2023 ರ ಚೀನಾದ ಆರ್ಥಿಕ ಬೆಳವಣಿಗೆಯ ಗುರಿಯನ್ನು ಶೇಕಡಾ 5 ಕ್ಕೆ ಇರಿಸಲಾಗಿದೆ.

ವರದಿಗಳ ಪ್ರಕಾರ, ಈ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರಾವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಲಾಗು ವುದು. ಇದರಿಂದಾಗಿ ಚೀನಾದಲ್ಲಿ ಅವರ ಶಕ್ತಿ ಮತ್ತಷ್ಟು ಬಲಗೊಳ್ಳುತ್ತದೆ ಅಂತ ನಂಬಲಾಗಿದೆ.