ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ಬಿಜೆಪಿ ಭ್ರಷ್ಟಾಚಾರಿಗಳನ್ನು ಸಹಿಸುವುದಿಲ್ಲ’ ಎಂಬ ಸಂದೇಶವನ್ನು ಇಂಥ ಚುನಾವಣೆ ಸಮಯದಲ್ಲಿ ತೋರಬೇಕಿತ್ತು. ಆದರೆ ಅಧಿಕಾರಿಗಳನ್ನು ಬದಲಿಸಿರುವ ಉದ್ದೇಶ ಗಮನಿಸಿದರೆ ಇನ್ನೊಂದು ತಿಂಗಳಲ್ಲಿ ಮಾಡಾಳ್‌ಗೆ ‘ರೆಡಿಮೇಡ್ ಕ್ಲೀನ್‌ಚಿಟ್’ ನೀಡಿ, ‘ಕಮರ್ಷಿಯಲ್ ಬ್ರೇಕ್’ ನೀಡಿ ಒಂದಷ್ಟು ತಿಂಗಳು ಮಜಾ ಮಾಡಲು ಅವಕಾಶ ಕೊಡು ತ್ತಾರಷ್ಟೇ.
ಅತ್ಯುತ್ತಮ ನಟ ಅಂಬರೀಷ್ ಅವರಿಗೆ ‘ರೆಬಲ್‌ಸ್ಟಾರ್’ ಎಂಬ ಬಿರುದು ಬರಲು ಕಾರಣ ಅವರ ಚಿತ್ರಗಳಲ್ಲಿನ ಕಥೆಗಳು ಪಾತ್ರಗಳು. 1984ರ ‘ಗಜೇಂದ್ರ’ ಚಿತ್ರದಲ್ಲಿ ಅಂಬರೀಷ್ ಅಭಿನಯಿಸಿ ಜನಪ್ರಿಯಗೊಂಡರು. 1983ರಲ್ಲಿ ತೆರೆಕಂಡ ‘ಚಕ್ರವ್ಯೂಹ’ ಪಕ್ಕಾ ಪೊಲಿಟಿಕಲ್ ಸಿನಿಮಾ ಆಗಿತ್ತು. ರಾಜ್ಯದ ರಾಜಕಾರಣದ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸ ಲಾಗದೇ ರೋಸಿಹೋಗಿ, ಕೊನೆಗೆ ತಾನೇ ಚುನಾವಣೆಗೆ ನಿಂತು ವಿಧಾನಸಭೆ ಪ್ರವೇಶಿ ಅಲ್ಲಿಗೆ ಮಿಷನ್‌ಗನ್ ತಂದು ಭ್ರಷ್ಟ ರಾಜಕಾರಣಿಗಳನ್ನು ಉಡಾ ಯಿಸುವ ಚಿತ್ರದ ಲ್ಕೈಮ್ಯಾಕ್ಸ್ ಅಂದು ಭಾರತೀಯ ಚಿತ್ರರಂಗವನ್ನು ಬೆಚ್ಚಿಬೀಳಿಸಿತ್ತು.
ಮುಂದೆ ಒಂಟಿಧ್ವನಿ, ಗುರು-ಜಗದ್ಗುರು, ಅಂತಿಮ ತೀರ್ಪು, ಬ್ರಹ್ಮ ವಿಷ್ಣು ಮಹೇಶ್ವರ, ಆಪತ್ಭಾಂಧವ, ಪ್ರಜಾಪ್ರಭುತ್ವ, ನವಭಾರತ, ಇಂದ್ರಜಿತ್ ಹೀಗೆ ಸಮಾಜವನ್ನು ಸರಿಪಡಿಸುವ ಸಾಲುಸಾಲು ರೆಬಲ್ ಚಿತ್ರಗಳೇ ಆಗಿದ್ದವು. ಹಂಸಲೇಖ ಬರೆದ ‘ಈ ದೇಶದ್ ಕತೆ ಇಷ್ಟೇ ಕಣಮ್ಮೋ’, ‘ಕಳ್ಳರೋ ನಾವೆಲ್ಲರೂ’, ‘ನೀನೆಷ್ಟು ಕದ್ದೇ, ನೀನೆಷ್ಟು ಮೆದ್ದೆ’, ‘ಮಾಲು ಬಂತಾ, ಮಾಮೂಲು ಬಂತಾ’, ‘ಲಂಚಾ ತಿನ್ನೋನೆ ರಾಜಾ…’ ಹೀಗೆ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧವೇ ನೂರಾರು ಚಿತ್ರಗಳು ನಿರ್ಮಾಣಗೊಂಡವು.
ಬೆಂಕಿ ಉಗುಳುತಿದ್ದ ಮಾಸ್ಟರ್ ಹಿರಣಯ್ಯನವರು ಜನಪ್ರಿಯರಾದದ್ದೇ ರಾಜಕೀಯ ವಿಡಂಬನೆಯಿಂದ. ‘ಲಂಚಾವತಾರ’, ‘ಪಶ್ಚಾತಾಪ’, ‘ಮಕ್ಮಲ್‌ಟೋಪಿ’ ಇನ್ನಿತರ ನಾಟಕ ಗಳಲ್ಲಿ ರಾಜಕಾರಣಿಗಳಿಗೆ ‘ಸೂ… ಮಕ್ಳು, ಬೋ… ಮಕ್ಳು’ ಎಂದೆಲ್ಲ ಮುಲಾಜಿಲ್ಲದೇ ಜಾಡಿಸುತ್ತಿದ್ದರು. ಧೀರೇಂದ್ರ ಗೋಪಾಲ-ಶ್ರೀವತ್ಸ ರಂಗನಾಥ್ ಜೋಡಿಯ ನಾಟಕದ ಧ್ವನಿಸುರುಳಿಗಳು ಖ್ಯಾತಿಗೊಂಡಿದ್ದೇ ರಾಜಕೀಯ-ಭ್ರಷ್ಟಾಚಾರಕ್ಕೆ ಉಗಿದು ಉಪ್ಪು ಹಾಕುವ ವಿಡಂಬನೆಯಿಂದಲೇ. ಮೊನ್ನೆ ಚನ್ನಗಿರಿ ಶಾಸಕ (ಈತನಿಗೆ ವಿರೂಪಾಕ್ಷ ಪದ ಬಳಸಲು ಅಸಹ್ಯವಾಗುತ್ತದೆ) ಮಾಡಾಳ್ ಮತ್ತು ಮಗ ಪ್ರಶಾಂತ್ ಮಾಡಾಳ್‌ರ ಹುತ್ತವನ್ನು ಭೇದಿಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಪ್ರಾಥಮಿಕ ಹಂತದ ಸಿಕ್ಕ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಿಂದ ಕೆಎಸ್‌ಎಡಿಎಲ್ ವ್ಯವಹಾರಗಳು 60 ಪರ್ಸೆಂಟ್ ದೋಚುವುದರ ನಡೆಯುತಿತ್ತು ಎಂಬುದಾಗಿ ವರದಿಯಾಗಿದೆ.
ಇವರ ಕಮಿಷನ್ ಭೂತವನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ. ಶ್ರೇಯಸ್ ಕಶ್ಯಪ್ ಎಂಬ ಗುತ್ತಿಗೆದಾರನ ೨ ಕೋಟಿ 20 ಲಕ್ಷ ರೂಪಾಯಿಗಳ ಟೆಂಡರ್‌ನ
ಕಾರ್ಯಾದೇಶಕ್ಕೆ ಮಾಡಾಳ್ ಇಟ್ಟ ಕಮೀಶನ್ ಬೇಡಿಕೆಯೇ ೧ ಕೋಟಿ 20 ಲಕ್ಷ ರು.ಗಳು. ಇದರಿಂದ ದಿಕ್ಕೆಟ್ಟ ಶ್ರೇಯಸ್ ಅಂತಿಮವಾಗಿ 81 ಲಕ್ಷಕ್ಕೇ ಸೆಟಲ್ ಮಾಡಿಕೊಂಡು, ಇವರ ಕಮಿಷನ್ ಕೊಡ ತುಂಬಿತೆಂದು ತೀರ್ಮಾನಿಸಿ, ನಂತರದ ವ್ಯವಹಾರವನ್ನೆಲ್ಲ ಫೋನ್‌ಕಾಲ್ ರೆಕಾರ್ಡ ಮಾಡಿ, ದಾಖಲೆಗಳ ಸಮೇತ ಲೋಕಾಯುಕ್ತರಿಗೆ ಒಪ್ಪಿಸಿ ಬಲಿ ಹಾಕಿದ್ದಾನೆ.
ನೋಡಿ, 2.20 ಕೋಟಿ ಮೊತ್ತದಲ್ಲಿ 1.20 ಕೋಟಿಯನ್ನು ಮಾಡಾಳ್‌ಗೇ ಪಾಲು ಕೊಟ್ಟು, ಉಳಿದ ೧ ಕೋಟಿಯಲ್ಲಿ ಕನಿಷ್ಠ ಐವತ್ತು ಲಕ್ಷವನ್ನು ಗುತ್ತಿಗೆದಾರ ತನ್ನ ಲಾಭದ ಬಾಬ್ತು ಎಂದುಕೊಂಡರೆ ಉಳಿದ ಐವತ್ತು ಲಕ್ಷದಲ್ಲಿ ಅದಿನ್ನೆಷ್ಟು ಗುತ್ತಿಗೆ ಕೆಲಸ ಮಾಡಬಹುದು ಊಹಿಸಿ. ಸಫಾರಿ ಹೊಲಿಸುತ್ತೇನೆಂದು ಹೇಳಿ ಕಳಪೆ ಪುಟಗೋಸಿ ಕಟ್ಟಿದಂತೆ !.
ಇಂಥ ‘ಮನೆಹಾಳು’ ಕೆಲಸಕ್ಕೆ ಶಾಸಕಾಂಗಕ್ಕೊಬ್ಬ, ಕಾರ್ಯಾಂಗಕ್ಕೊಬ್ಬ; ತಂದೆಗೆ ತಕ್ಕ ಮಗ. ಇಬ್ಬರೂ ಸೇರಿಕೊಂಡು ‘ಕೆಜಿಎಫ್-೩’ ಸಿನಿಮಾ ಮಾಡಲು ಹೊರಟಿದಂತಿದೆ. ಇಬ್ಬರೂ ಈಗ ಸಾರ್ವಜನಿಕರ ಮುಂದೆ ಬೆತ್ತಲಾಗಿದ್ದರೂ ತೇಪೆ ಹಾಕಿಕೊಳ್ಳುವ ಕೆಲಸವನ್ನು ಮಾಡಲಾರಂಭಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕ ಮಾಹಿತಿ
ಪ್ರಕಾರ ಈ ಅಪ್ಪ-ಮಗನಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಯಲ್ಲಿ 232 ಎಕರೆ, ಹೊಸದುರ್ಗದಲ್ಲಿ ೧೮೦ ಎಕರೆ, ದಾವಣಗೆರೆಯಲ್ಲಿ ೬೪ ಎಕರೆ, ಶಿವಮೊಗ್ಗದಲ್ಲಿ ೬೨ ಎಕರೆ,
ಭದ್ರಾವತಿಯಲ್ಲಿ 60 ಎಕರೆ, ಹೊಸಪೇಟೆಯಲ್ಲಿ 52 ಎಕರೆ, ಹೊಳಲ್ಕೆರೆಯಲ್ಲಿ 52 ಎಕರೆ ಸೇರಿ ಬರೊಬ್ಬರಿ 702 ಎಕರೆ ಭೂಮಿ(ನೆನಪಿರಲಿ ಇದು ಅಧಿಕೃತ ಮಾತ್ರ)ಇದೆ. ಜ್ಞಾಪಿಸಿಕೊಳ್ಳಿ, ಒಂದು ಚದರದ ಮನೆಗಾಗಿ ಮತದಾರಳೊಬ್ಬಳು ಸಚಿವ ಸೋಮಣ್ಣನಿಂದ ಕಪಾಳ ಮೋಕ್ಷಕ್ಕೆ ಒಳಗಾಗಿದ್ದಳು.
ಆದರೆ ಇಂಥವರ ಮತಗಳನ್ನು ಪಡೆಯುವ ಶಾಸಕನೊಬ್ಬನಿಗೆ 702 ಎಕರೆ ಭೂಮಿ. ಅಲ್ಲಿನ್ನೆಷ್ಟು ಹೆಣಗಳನ್ನು ಹೂಳಬಹುದೇಳಿ ! ಇದಕ್ಕಿಂತ ದುರದೃಷ್ಟಕರವೆಂದರೆ ನಾಯಿ
ಹೊಲಸನ್ನು ತುಳಿದಿದ್ದರೂ ಅದು ಬೆಣ್ಣೆ ಎಂಬಂತೆ ವರ್ತಿಸುವುದು, ಎಂಥ ಸಮಾಜಗೇಡಿಯಾದರೂ ಆತ ಜೈಲಿನಿಂದ ಹೊರಬಂದಾಕ್ಷಣ ಸ್ವಜಾತಿ ಪ್ರೇಮದ ಹೆಸರಿನಲ್ಲಿ ಆಪಲ್ ಹಾರಹಾಕಿ ಮೆರವಣಿಗೆ ಮಾಡುವವರಿದ್ದಾರೆ ನಮ್ಮ ನಡುವೆ. ಶಾಸಕ ಮಾಡಾಳ್‌ನ ಖದರು ಅದೆಂಥದ್ದೊಂದರೆ ಲೋಕಾಯುಕ್ತರು ಎ೧ ಆರೋಪಿಯಾಗಿ ಪರಿಗಣಿಸಿದ್ದರೂ, ಜಾಮೀನು ಸಿಕ್ಕಿದ್ದಕ್ಕೆ ಆತನ ವಿಜಯೋತ್ಸವ ಮಾಡುತ್ತಾರಲ್ಲ, ಆಗಲೇ ನೋಡಿ ಪ್ರಜ್ಞಾವಂತ ಮತದಾರರಿಗೆ ಚಕ್ರವ್ಯೂಹದ ಚಿತ್ರದ ಅಮರ್ ಪಾತ್ರ ವಾಸ್ತವದಲ್ಲೂ ಬರಬೇಕೆನಿಸುವುದು.
ಮಗ ಸಿಕ್ಕಿಬಿದ್ದ ಕೂಡಲೇ ಅಜ್ಞಾತನಾದ ಶಾಸಕನನ್ನು ಲೋಕಾಯುಕ್ತರು ಅದ್ಯಾವ ಡಬ್ಬಾದೊಳಗೆ ಹುಡುಕಿದರೋ ಏನೋ, ಅಂತೂ ಆತ ಪತ್ತೆಯಾಗಲೇ ಇಲ್ಲ. ಇಡೀ ಸಮಾಜ
ನಾಚುವಂತೆ ನೇರ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದ ಮಾಡಾಳ್, ನ್ಯಾಯಾಂಗದ ಬಗೆಗೆ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ. ಈಗ ವಾದ ಪ್ರತಿವಾದಗಳು
ಶುರುವಾಗಿವೆ. ‘ಈ ಪ್ರಕರಣದಲ್ಲಿ ಅಪ್ಪ ಮಾಡಾಳ್ ವಿರುದ್ಧ ಸಾಕ್ಷ್ಯಾ ಧಾರಗಳಿಲ್ಲ, ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ದೂರಿನಲ್ಲಿ ಯಾವುದೇ ಉಲ್ಲೇಖವಿಲ್ಲ, ಕೆಎಸ್‌ಡಿಎಲ್
ಗುತ್ತಿಗೆಯ ಕಾರ್ಯಾದೇಶದ ಅಧಿಕಾರ ಅಪ್ಪ ಮಾಡಾಳ್‌ಗಿಲ್ಲ, ಈತ ಲಂಚಕ್ಕೆ ಬೇಡಿಕೆ ಇಟ್ಟಲ್ಲ ಮತ್ತು ಎಣಿಸಿಕೊಂಡೂ ಇಲ್ಲ, ಅಸಲಿಗೆ ಅವರಿಗೆ ೭೫ ವರ್ಷ ವಯಸ್ಸು,
ಅಯ್ಯೋ ಭಗವಂತಾ..ಆತನಿಗೆ ಹೃದಯ ಸಂಬಂಽತ ಸಮಸ್ಯೆ ಇದೆ..’ ಇನ್ನೇನು ಬೇಕು ಈ ಪ್ರಕರಣ ಮುಂಡಾಮೋಚಿಕೊಂಡು ಹೋಗುವುದಕ್ಕೆ? ನಂತರದ ಬೆಳವಣಿಗೆಯನ್ನು
ನೋಡಿ, ಇಂಥ ದೊಡ್ಡ ತಿಮಿಂಗಲವನ್ನು ಡ್ಹ್ಯಾಂಡ್ ಬಲಿಹಾಕಿದ ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್‌ಕುಮಾರ್, ಇನ್ಸ್‌ಪೆಕ್ಟರ್ ಕುಮಾರಸ್ವಾಮಿಯನ್ನು ದಿಢೀರ್ ಎತ್ತಂಗಡಿ
ಮಾಡುವುದರ ಮೂಲಕ ಸಾಕ್ಷಾತ್ ಬಿಜೆಪಿ ಸರಕಾರ ‘ರಾಮನಾಮ ನಂಬಿದಾಗ ಪಂಗನಾಮ ಹಾಕುತ್ತ ನೀ ಬಾಳುವೇ’ ಸಾಲಿಗೆ ದೃಷ್ಟಾಂತವಾಗಿದೆ.
ನಿಜಕ್ಕೂ ಭ್ರಷ್ಟಾಚಾರದ ಕಳಂಕವನ್ನು ಕಿತ್ತೆಸೆಯಲು ಈ ಸರಕಾರಕ್ಕೆ ಇಚ್ಛಾಶಕ್ತಿ ಇದ್ದದ್ದೇ ಆದರೆ, ಅದೇ ಅಧಿಕಾರಿಗಳನ್ನು ಹುರಿದುಂಬಿಸಿ ಇನ್ನಷ್ಟು ಹಳೆಯದನ್ನೆಲ್ಲ ಬಯಲು ಗೊಳಿಸಿ, ‘ಬಿಜೆಪಿ ಭ್ರಷ್ಟಾಚಾರಿಗಳನ್ನು ಸಹಿಸುವುದಿಲ್ಲ’ ಎಂಬ ಸಂದೇಶವನ್ನು ಇಂಥ ಚುನಾವಣೆ ಸಮಯದಲ್ಲಿ ತೋರಬೇಕಿತ್ತು. ಆದರೆ ಅಧಿಕಾರಿಗಳನ್ನು ಬದಲಿಸಿರುವ ಉದ್ದೇಶ ಗಮನಿಸಿದರೆ ಇನ್ನೊಂದು ತಿಂಗಳಲ್ಲಿ ಮಾಡಾಳ್‌ಗೆ ‘ರೆಡಿಮೇಡ್ ಕ್ಲೀನ್‌ಚಿಟ್’ ನೀಡಿ, ಚಿತ್ರಮಂದಿರದಲ್ಲಿ ಮೂತ್ರ ವಿಸರ್ಜನೆಗೆ ಎದ್ದು ಹೋಗಲೆಂದೇ ಒಂದು ಸಾಂಗು ಬರುವು ದಿಲ್ಲವೇ ಹಾಗೆ, ಮಗ ಮಾಡಾಳ್‌ಗೆ ಅಮಾನತು ಎಂಬ ‘ಕಮರ್ಷಿಯಲ್ ಬ್ರೇಕ್’ ನೀಡಿ ಒಂದಷ್ಟು ತಿಂಗಳು ಮಜಾ ಮಾಡಲು ಅವಕಾಶ ಕೊಡುತ್ತಾರಷ್ಟೇ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಗ ಮಾಡಾಳ್ ಮೂಲತಃ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ. ಅದು ಸಾಲದೆಂಬಂತೆ ಅನ್ಯ ಇಲಾಖೆಯಲ್ಲಿ ವಿಶೇಷ ಸೇವೆಗಾಗಿ
ಲೋಕೋಪಯೋಗಿ ಇಲಾಖೆಗೆ ಲೆಕ್ಕಾಧಿಕಾರಿಯಾಗಿ ವಕ್ಕರಿಸಿ ಕೆಲಸ ಮಾಡುತ್ತಿದ್ದಾನೆ. ಎಲ್ಲವೂ ಭರ್ಜರಿ ಬೇಟೆಗಳ ತಾಣಗಳೇ. ಈ ಪ್ರಕರಣವನ್ನು ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳಾದರೂ ಗಂಭೀರವಾಗಿ ಪರಿಗಣಿಸಿದರೆ ತಾರ್ಕಿಕ ಅಂತ್ಯ ಕಾಣಬಹುದೇನೋ. ಆದರೆ ಈಗ ಪ್ರಜೆಗಳಿಗೆ ಕಾಣುತ್ತಿರುವ ‘ಟೀಸರ್’ ಎಂದರೆ ಚುನಾವಣೆಗೆ ಇನ್ನೇನು ತಿಂಗಳಿದೆ, ಅಷ್ಟರಲ್ಲಿ ‘ಜಾತಿ- ರಾಜಕಾರಣದ ಅನಿವಾರ್ಯ-ಮಠ-ಸ್ವಾಮೀಜಿಗಳ’ ನ್ಯಾಯಾಲಯದಲ್ಲಿ ಪ್ರಕರಣ ರಣಗದಲ್ಲಿ ವಿಲೇವಾರಿಯಾಗಿ ಕ್ಲೀನ್‌ಚಿಟ್ ಎಂಬ
‘ಕಾಂಡೋಮ್’ ನೀಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಸಮಾಜದಲ್ಲಿ ಪೋಕ್ಸೋ ಪ್ರಕರಣದ ರೇಪ್ ಸ್ವಾಮೀಜಿಗಳಿಗಿಂತಲೂ ಇಂಥ ಭ್ರಷ್ಟಾಚಾರಿಗಳು ಬಲು ಅಪಾಯಕಾರಿ. ಅದರಲ್ಲೂ ಸಿಕ್ಕಿಬಿದ್ದು ಜನರ ಮುಂದೆ ಬೆತ್ತಲಾಗಿ ನ್ಯಾಯಾಲಗಳಲ್ಲಿ ಕೇವಲ ತಾಂತ್ರಿಕ ಸಾಕ್ಷಿಗಳಿಂದ ಹೊರಬಂದು ಮತ್ತದೇ ಮುಂದುವರಿಸುತ್ತಾರಲ್ಲ, ಅದು ಮತ್ತಷ್ಟು ಘೋರ ! 702 ಎಕರೆ ಭೂಮಿಯ ಒಡೆಯನಾಗುವು ದೆಂದರೆ ಅದಿನ್ನೆಷ್ಟು ಸಾರ್ವಕನಿಕರ ತೆರೆಗೆ ಹಣ ಒಂದೆಡೆ ಸತ್ತು ಸಮಾಧಿಯಾಗಿರಬಹುದೆಂದು ತನಿಖೆಯಾಗುವುದು ಸ್ವಚ್ಛ ಪ್ರಜಾಪ್ರಭುತ್ವದ ಲಕ್ಷಣ. ಕೇಂದ್ರದಲ್ಲಿ ಪ್ರಧಾನಿ
ಮೋದಿಯವರು ಇಡೀ ದೇಶವನ್ನು ಭ್ರಷ್ಟಾಚಾರ ಮುಕ್ತಿಗೊಳಿಸುವತ್ತ ಸಾಗುತ್ತಿದ್ದರೆ ಅಂಥ ಪಕ್ಷದ ಶಾಸಕನೊಬ್ಬ ಭ್ರಷ್ಟಾಚಾರದ ‘ತ್ರಿಬಲ್ ಎಕ್ಸೆಲ್’ ಸೈಜಿನಲ್ಲಿ ಸಿಕ್ಕಿಬಿದ್ದಿರುವುದು ದುರದೃಷ್ಟಕರ.
ತಮಾಷೆಯೆಂದರೆ ‘ಬೆತ್ತಲಾಗಿರುವವನು ಮತ್ತೊಬ್ಬನಿಗೆ ಪುಟಗೋಸಿ ಕಟ್ಟಿಕೋ’ ಎಂದು ಹೇಳುವಂತೆ ಪ್ರತಿಪಕ್ಷಗಳು ಈ ಪ್ರಕರಣವನ್ನು ಇಟ್ಟುಕೊಂಡು ಬೆತ್ತಲೆಯಾದವನ ಚಡ್ಡಿ ಹರಿದು ಲಂಗೋಟಿ ಕಟ್ಟಿಕೊಳ್ಳುವ ಕೆಲಸಕ್ಕಿಳಿದಿವೆ. ನಿಜಕ್ಕೂ ರಾಜ್ಯ ಬಿಜೆಪಿಗೆ ಮಾನ ಮರ್ಯಾದೆ ಇದ್ದದ್ದೇ ಆದರೆ ಈ ಪ್ರಕರಣದಲ್ಲಿ ‘ರೆಬಲ್ ಸ್ಟಾರ್’ ಬಿಜೆಪಿಯಾಗಿ ಕಚ್ಚೆಪಂಚೆ, ಚಡ್ಡಿಯನ್ನು ಭದ್ರವಾಗಿ ಕಟ್ಟಿಕೊಳ್ಳಲಿ. ಇಲ್ಲವಾದರೆ ಬೆತ್ತಲಾಗಿರುವವರು ಸದಾ ಎಳೆಯುತ್ತಲೇ ಇರುತ್ತಾರೆ. ಅಂದಹಾಗೆ ಲೇಖನದ ಮೇಲಿನ ವಾಕ್ಯವೃಂದಲ್ಲಿ ಉಲ್ಲೇಖಿಸಲಾದ ಭ್ರಷ್ಟಾಚಾರದ ಪರ್ವಕಾಲದಲ್ಲಿ ಮಾಸ್ಟರ್ ಹಿರಣ್ಣಯ್ಯ, ರೆಬಲ್‌ಸ್ಟಾರ್, ಧೀರೇಂದ್ರಗೋಪಾಲ, ಶ್ರೀವತ್ಸ ರಂಗನಾಥ್ ಅವರ ಕಾಲಮಾನದಲ್ಲಿ ಕೇಂದ್ರ ಮತ್ತು ಎಲ್ಲ ರಾಜ್ಯಗಳಲ್ಲಿ
ಅಽಕಾರದಲ್ಲಿದ್ದದ್ದು ಯಾವ ಪಕ್ಷಗಳು? ಯಾರು ಮುಖ್ಯಮಂತ್ರಿಗಳು? ಆಗ ಬಿಜೆಪಿ ಎಲ್ಲಿತ್ತು? ಬಿಜೆಪಿ ಯಾವ ಪಂಚಾಯಿತಿ ಮಟ್ಟದಲ್ಲಿ ಅಧಿಕಾರದಲ್ಲಿತ್ತು? ಅಂಬೇಡ್ಕರ್ ಅವರ ಕನಸುಗಳನ್ನು ನಾಶಮಾಡಿ ಭ್ರಷ್ಟಾಚಾರವನ್ನು ಹುಟ್ಟಿಸಿದ ಅಪ್ಪಂದಿರು ಪಿತಾಮಹರು ಯಾರು? ಅದೆಷ್ಟು ನಾಯಿಗಳು ಭ್ರಷ್ಟಾಚಾರದ ಹೊಲಸನ್ನು ತಿಂದು ಕೊಬ್ಬಿವೆ?
ಕಾಂಗ್ರೆಸನ್ನು ಕೇಳಬಹುದಲ್ಲವೇ?!