Sunday, 24th November 2024

ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ಅಸಂವಿಧಾನಿಕ ಕ್ರಮ: ಛತ್ತೀಸ್‍ಗಢ ಹೈಕೋರ್ಟ್

ರಾಯಪುರ: ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡುವ ಕ್ರಮ ಅಸಂವಿಧಾನಿಕ ಎಂದು ಅಭಿಪ್ರಾಯ ಪಟ್ಟಿರುವ ಛತ್ತೀಸ್‍ಗಢ ಹೈಕೋರ್ಟ್, ಈ ಸಂಬಂಧ ರಾಜ್ಯ ಸರ್ಕಾರ ನೀಡಿದ ಜಾಹೀರಾತನ್ನು ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ಯಿ ಅರೂಪ್ ಕುಮಾರ್ ಗೋಸ್ವಾಮಿ ಮತ್ತು ನ್ಯಾಐಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಇದಕ್ಕೆ ಸಂಬಂಧಿಸಿದಂತೆ ಛತ್ತೀಸ್‍ಗಢ ಸರ್ಕಾರ ರೂಪಿಸಿದ್ದ ಕಾನೂ ನನ್ನು ಅನೂರ್ಜಿತಗೊಳಿಸಿದೆ.

ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಬೋಧಕರು (ಡೆಮಾಸ್ಟ್ರೇಟರ್ಸ್) ಪ್ರೊಫೆಸರ್ ಗಳು ಮತ್ತು ಪ್ರಾಚಾರ್ಯ ಹುದ್ದೆಗಳಿಗೆ ನೇರವಾಗಿ ನೇಮಕಗೊಳ್ಳಲು ಮಹಿಳಾ ಅಭ್ಯರ್ಥಿಗಳಷ್ಟೇ ಅರ್ಹರು ಎಂದು ರಾಜ್ಯ ಸರ್ಕಾರ ಪ್ರಕಟಿ ಸಿತ್ತು.

ಛತ್ತೀಸ್‍ಗಢ ಲೋಕಸೇವಾ ಆಯೋಗ 2021ರ ಡಿಸೆಂಬರ್ 8ರಂದು ನೀಡಿದ ಜಾಹೀರಾತಿನಲ್ಲಿ ಸಹಾಯಕ ಪ್ರೊಫೆ ಸರ್ (ನರ್ಸಿಂಗ್) ಮತ್ತು ವಿವಿಧ ವಿಷಯಗಳಿಗೆ ಬೋಧಕ ಹುದ್ದೆಗಳಿಗೆ ಕಾನೂನುಬದ್ಧವಾಗಿ ಮಹಿಳೆಯ ರಿಂದಷ್ಟೇ ಅರ್ಜಿ ಆಹ್ವಾನಿಸಲಾಗುತ್ತಿದೆ ಎಂದು ಪ್ರಕಟಿಸಿತ್ತು.