ಸಾಧನೆಯನ್ನು ಅಸಾಧಾರಣ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು ಎಂದು ಬಣ್ಣಿಸಿ ದ್ದಾರೆ. ‘ಅಸಾಧಾರಣ…. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವ ಪಡೆದ ಕೀರವಾಣಿ, ಚಂದ್ರಬೋಸ್ ಹಾಗೂ ಇಡೀ ತಂಡಕ್ಕೆ ಅಭಿನಂದ ನೆಗಳು. ಇಡೀ ಭಾರತ ಹೆಮ್ಮೆ ಪಟ್ಟುಕೊಳ್ಳುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಾಟು ನಾಟು ಪ್ರಶಸ್ತಿ ಬಾಚಿಕೊಂಡಿದೆ.
ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಈ ಹಿಂದೆ ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ ಚಾಯ್ಸ್ ಅವಾರ್ಡ್‌ಗೆ ಈ ಹಾಡು ಪಾತ್ರವಾಗಿತ್ತು.
ಚಂದ್ರಬೋಸ್ ಬರೆದಿರುವ ಈ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆಸ್ಕರ್ ಗೆದ್ದಿರುವ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ತಂಡಕ್ಕೂ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.
Read E-Paper click here