Friday, 22nd November 2024

ಅಸ್ಸಾಂನಲ್ಲಿ ಎರಡು ಲಘು ಭೂಕಂಪ

ಸ್ಸಾಂ : ಅಸ್ಸಾಂನಲ್ಲಿ ಶನಿವಾರ 3.6 ಮತ್ತು 2.8 ತೀವ್ರತೆಯ ಎರಡು ಲಘು ಭೂಕಂಪಗಳು ಸಂಭವಿಸಿದೆ. ಈ ಭೂಕಂಪಗಳಿಂದ ಯಾರಿಗೂ ಯಾವುದೇ ಗಾಯ ಅಥವಾ ಯಾವುದೇ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಮೊದಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ. ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯಲ್ಲಿರುವ ಜೋರ್ಹತ್ ಜಿಲ್ಲೆಯ ಟಿಟಾಬರ್ ಬಳಿ 50 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಕಂಡು ಬಂದಿದೆ.

ನೆರೆಯ ಶಿವಸಾಗರ, ಕರ್ಬಿ ಆಂಗ್ಲಾಂಗ್ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿಯೂ ಜನರು ಕಂಪನ ಅನುಭವಿಸಿದರು. ಬ್ರಹ್ಮಪುತ್ರದ ಉತ್ತರ ದಡದಲ್ಲಿರುವ ಲಖಿಂಪುರ ಕೂಡ ಕಂಪನವನ್ನು ಅನುಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಸಂಸ್ಥೆ ವರದಿ ಮಾಡಿದೆ.

ಎರಡನೇ ಕಂಪನವು ಬೆಳಿಗ್ಗೆ 11.02 ಕ್ಕೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.8 ರ ತೀವ್ರತೆ ದಾಖಲಾಗಿದೆ. ಬ್ರಹ್ಮಪುತ್ರದ ಉತ್ತರ ದಂಡೆಯ ದರಾಂಗ್ ಜಿಲ್ಲೆಯ ದಲ್ಗಾಂವ್ ಬಳಿ 9 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ತಿಳಿದು ಬಂದಿದೆ.