Friday, 22nd November 2024

ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಸುಳ್ಳು ಮಾಹಿತಿ ಹರಡುತ್ತಿದ್ದ ಯುಟ್ಯೂಬರ್ ಬಂಧನ

ಪಾಟ್ನಾ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗುತ್ತಿದೆ ಎಂದು ಬಿಂಬಿಸುವ ಸುಳ್ಳು ಮಾಹಿತಿಯನ್ನು ನಕಲಿ ವಿಡಿಯೋಗಳ ಮೂಲಕ ಹರಡಿ ಭಯದ ವಾತಾವರಣ ಸೃಷ್ಟಿಸಿದ್ದ ಯು ಟ್ಯೂಬರ್ ಬಿಹಾರದ ಪೊಲೀಸರ ಮುಂದೆ ಶರಣಾಗಿದ್ದಾನೆ.

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ದಕ್ಷಿಣ ರಾಜ್ಯಗಳನ್ನು ಬಿಟ್ಟು ತೊಲಗುವಂತೆ ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ ಎಂದು ವಿಡಿಯೋ ಮೂಲಕ ಸುಳ್ಳು ಸುದ್ದಿ ಬೀತ್ತರಿಸಿದ ಪ್ರಕರಣಕ್ಕೆ ಸಂಬಂಸಿದಂತೆ ಮಾ.6ರಂದು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ಬಿಹಾರದ ಪೊಲೀಸರು ಆರ್ಥಿಕ ಘಟಕದ ಅಧಿಕಾರಿಗಳನ್ನು ಒಳಗೊಂಡ ಆರು ತಂಡಗಳನ್ನು ರಚಿಸಿದ್ದರು.

ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡುವ ಜೊತೆಗೆ ಆರೋಪಿಗಳಿಗೆ ಸಂಬಂಧಿಸಿ ದಂತೆ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರು ಮುಂದಾಗಿದ್ದರು. ಇದರಿಂದ ಆತಂಕಗೊಂಡ ಆರೋಪಿ ಮನೀಶ್ ಕಶ್ಯಪ್ ಶನಿವಾರ ಪಶ್ಚಿಮ ಚಂಪಾರಣ್ ಜಿಲ್ಲೆಯ ಜಗದೀಶ್‍ಪುರ ಪೊಲೀಸ್ ಠಾಣೆಯಲ್ಲಿ ಕಾನೂನು ಜಾರಿಗಾರರ ಮುಂದೆ ಶರಣಾಗಿದ್ದಾರೆ.

ಆರೋಪಿಗಳು ತಮ್ಮ ಯು ಟ್ಯೂಬ್‍ನಲ್ಲಿ 30ಕ್ಕೂ ಹೆಚ್ಚು ನಕಲಿ ವಿಡಿಯೋಗಳನ್ನು ಪೋಸ್ಟ್ ಮಾಡಿ ಭೀತಿ ಹರಡುವ ಯತ್ನ ನಡೆಸಿದ್ದರು. ತಮಿಳು ನಾಡಿನಲ್ಲೂ ಪೆಪೋಲೀಸರು ಆರೋಪಿಗಳ ವಿರುದ್ಧ 13 ಪ್ರಕರಣಗಳನ್ನು ದಾಖಲಿಸಿದ್ದರು.