Thursday, 19th September 2024

ಮಾ.21, 22 ರಂದು ತಿರುಪತಿ ದರ್ಶನ ರದ್ದು

ತಿರುಮಲ: ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.21 ಮತ್ತು 22 ರಂದು ಎಲ್ಲಾ ಆರ್ಜಿತ ಸೇವೆಗಳು ಮತ್ತು ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಿರುವುದಾಗಿ ಟಿಟಿಡಿ ಆಡಳಿತ ಮಂಡಳಿ ಪ್ರಕಟಿಸಿದೆ.

ಮಾ.22 ರಂದು ಬುಧವಾರ ಚೈತ್ರ ಶುದ್ಧ ಪಾಡ್ಯಮಿ ಇರಲಿದೆ. ಆ ಶುಭ ದಿನದಂದು ತಿರುಮಲ ದೇವಸ್ಥಾನದಲ್ಲಿ ಯುಗಾದಿ ಆಸ್ಥಾನ ಸೇರಿದಂತೆ ಕೆಲವು ಧಾರ್ಮಿಕ ಕಾರ್ಯಗಳನ್ನು ಆಚರಿಸ ಲಾಗುವುದು.

ಮಾ.22 ರಂದು ಯುಗಾದಿ ಹಬ್ಬದ ನಿಮಿತ್ತ ಮಾ.21 ರಂದು ಸಾಂಪ್ರದಾಯಿಕ ದೇವಾ ಲಯದ ಶುದ್ಧೀಕರಣ ಉತ್ಸವ ಕೊಯಿಲ್ ಆಳ್ವಾರ್ ತಿರುಮಂಜನಂ ನೆರವೇರಿಸಲಾಗುತ್ತದೆ. ಕಾರಣ ಗಳಿಂದಾಗಿ ತಿರುಪತಿ ತಿಮ್ಮಪ್ಪನ ದೇವಾಲಯ ಮುಚ್ಚರಲಿದೆ.

ಕೋಯಿಲ್ ಆಳ್ವಾರ್ ತಿರುಮಂಜನಂ ಮತ್ತು ಯುಗಾದಿಯ ಹಬ್ಬದ ಕಾರಣ ಮಾರ್ಚ್ 21 ಮತ್ತು 22 ರಂದು ತಿಮ್ಮನ ಭಕ್ತರಿಗೆ ದರ್ಶನ ಇರುವುದಿಲ್ಲ. ಅದರಂತೆ ಮಾರ್ಚ್ 20 ಮತ್ತು 21ರಂದು ವಿಐಪಿ ದರ್ಶನಕ್ಕೂ ಅವಕಾಶ ಇಲ್ಲವೆಂದು ಟಿಟಿಡಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಒಂದು ವಿಐಪಿ ದರ್ಶನಕ್ಕೆ ಶಿಫಾರಸು ಬಂದರೂ ಆ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಭಕ್ತರು ಇದನ್ನು ಗಮನಿಸಿ ಸಹಕರಿಸಬೇಕು ಎಂದು ಟಿಟಿಡಿ ಪ್ರಕಟಣೆ ಮೂಲಕ ಮನವಿ ಮಾಡಿದೆ.