ಜನವರಿ 5, 2022 ರಂದು, ಪಿಎಂ ಮೋದಿ ಅವರು ಪಂಜಾಬ್‌ನ ಹುಸೇನಿವಾಲಾಗೆ ಪ್ರಯಾಣಿಸು ತ್ತಿದ್ದಾಗ ಫಿರೋಝ್ ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಸುಮಾರು 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ಪ್ರಧಾನಿ ಮೋದಿ ಅವರ ಭದ್ರತೆ ಉಲ್ಲಂಘಿಸಲಾಗಿತ್ತು.
ಪಂಜಾಬ್‌ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ “ಪ್ರಮುಖ ಭದ್ರತಾ ಲೋಪ” ದ ನಂತರ, ಅವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುನ್ನ ಭದ್ರತಾ ಉಲ್ಲಂಘನೆಯು ಎಎಪಿ ನೇತೃತ್ವದ ಪಂಜಾಬ್ ಸರಕಾರ ಹಾಗೂ ಬಿಜೆಪಿ ನೇತೃತ್ವದ ಕೇಂದ್ರದ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.