Thursday, 12th December 2024

ಪರ್ಷಿಯನ್ ಹೊಸ ವರ್ಷ ಆಚರಣೆ ಇಂದು

ನವದೆಹಲಿ: ಮಂಗಳವಾರ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ ಎಂದು ಆಚರಿಸ ಲಾಗುತ್ತದೆ.

ಇದನ್ನು ನೌರುಜ್ ಎಂದೂ ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗೂಗಲ್, ವಿಶಿಷ್ಟ ಡೂಡಲ್ ಮೂಲಕ ಪರ್ಷಿಯನ್ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ನೌರುಜ್ ಪರಿಕಲ್ಪನೆಯನ್ನು ಪ್ರತಿನಿಧಿಸುವ ಡೂಡಲ್ ಟುಲಿಪ್ಸ್, ಹೈಸಿಂತ್ಸ್, ಡ್ಯಾಫಡಿಲ್‌ಗಳು ಮತ್ತು ಬೀ ಆರ್ಕಿಡ್‌ಗಳಂಥ ವಸಂತ ಋತು ಕಾಲದ ಹೂವುಗಳನ್ನು ಒಳಗೊಂಡಿದೆ.

ಪರ್ಷಿಯನ್ ಹೊಸ ವರ್ಷವನ್ನು ದಿನಗಳು ದೀರ್ಘವಾಗಲು ಪ್ರಾರಂಭವಾಗುವ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ವಿದ್ಯಮಾನವನ್ನು ವಸಂತ ವಿಷುವತ್ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ, ಹಬ್ಬವು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್ 21ರ ಸುಮಾರಿಗೆ ಸಂಭವಿ ಸುತ್ತದೆ.

ಭಾರತದ ಪಾರ್ಸಿ ಸಮುದಾಯದಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತದೆ.