Sunday, 15th December 2024

ಲರ್ನ್‌- ಅನ್‌ ಲರ್ನ್‌- ರೀಲರ್ನ್‌: ಪ್ರತಿಬಂಧಿನ ಮನಸ್ಸಿನ ಬಿಡುಗಡೆ

ಶ್ವೇತಪತ್ರ

shwethabc@gmail.com

ಇಪ್ಪತ್ತೊಂದನೆ ಶತಮಾನದಲ್ಲಿ ಓದು, ಬರಹ ಬರದಿರುವವರು ಅನಕ್ಷರಸ್ಥರಲ್ಲ. ಹೊಸದನ್ನು ಕಲಿಯದ, ಕಲಿತದ್ದನ್ನು ಮರೆಯದ, ಹೊಸತನದ ಪ್ರತಿ ಸ್ಪಂದನಗಳಿಗೆ ತೆರೆದುಕೊಳ್ಳದವರು ಅನಕ್ಷರಸ್ಥರು-ಹೀಗನ್ನುತ್ತಾನೆ ಅಮೆರಿಕದ ಬರಹಗಾರ ಆಲ್ ಟ್ಯಾಫ್ ಲರ್. ಆಸಕ್ತಿದಾಯಕ ವಿಷಯ, ವಿಚಾರ ಗಳನ್ನು ಕಲಿಯುವುದಿದೆಯಲ್ಲ ಅದೊಂದು ಖುಷಿಯ ಸಂಗತಿ. ಬೇರೆಲ್ಲ ಸಂಗತಿಗಳಿಗಿಂತ ಹೆಚ್ಚಿನ ಸಮಯ ಬೇಡುತ್ತದೆ ಕಲಿಕೆ(ಇಲ್ಲಿ ಕಲಿಕೆಗೂ ಪರಿಣಿತಿಗೂ ಗೊಂದಲ ಬೇಡ).

ಆದರೂ ಪ್ರತಿದಿನ ಏನಾದರೊಂದನ್ನು ನಾವು ಕಲಿಯುತ್ತಿರುತ್ತೇವೆ. ಅನ್‌ಲರ್ನ್ ಅಥವಾ ಹಿಂದೆ ಕಲಿತಿದ್ದನ್ನು ಬಿಡುವುದಿದೆಯಲ್ಲ ಇದು ಕೊಂಚ ಭಿನ್ನ. ವರ್ಷಗಳ ಹಿಂದೆ ಕ್ಲಾಸ್ ರೂಮಿನಲ್ಲಿ ಕಲಿತ ಜ್ಞಾನ ನಮ್ಮ ಸ್ಮೃತಿ ಪಟಲದಿಂದ ಎಂದೋ ಅಳಿಸಿ ಹೋಗಿದೆ, ಯೂನಿವರ್ಸಿಟಿಯ ಕ್ಯಾಂಪಸು ಗಳಲ್ಲಿನ ಸಂಗತಿಗಳಿಗೂ ಇಂದು ನಾವು ಮಾಡುತ್ತಿರುವ ಕೆಲಸಗಳಿಗೂ ಅಸಲಿಗೆ ಸಂಬಂಧವೇ ಇಲ್ಲದಂತಾಗಿದೆ. ಹಾಗಂತ ಇದು ಅನ್ ಲರ್ನ್ ಅಲ್ಲ!

ಕಲಿತದ್ದನ್ನು ನೆನಪಿನ ಪುಟಗಳಿಂದ ಬಿಡುಗಡೆಗೊಳಿಸುವುದಿದೆಯಲ್ಲ ಅದೊಂದು ಸವಾಲಿನ ಕೆಲಸ. ನಮ್ಮ ಆಲೋಚನೆಗಳಲ್ಲಿ ಕ್ರಿಯೆ- ಪ್ರಕ್ರಿಯೆಗಳಲ್ಲಿ ಹಾಸು ಹೊಕ್ಕಾಗಿರುವ ರೀತಿಯನ್ನು ಕೆಡಹು ವುದೇ ಅನ್ ಲರ್ನ್. ಈ ಅನ್ ಲರ್ನ್ ಪ್ರಕ್ರಿಯೆ ಅನೇಕ ರೂಪಕಗಳನ್ನು ತನ್ನಲ್ಲಿ ಒಳಗೊಂಡಿದೆ. ಇನ್ನೂ ಸರಳೀಕರಿಸಿ ಹೇಳುವುದಾದರೆ ಮನೆಗೆ ಹೊಸ ಬಣ್ಣ ಬಳಿಯುವ ಮುನ್ನ ಹಳೆಯ ಬಣ್ಣವನ್ನು ಕೆರೆದು ಹಾಕುವಂತೆ, ಹೊಸ ನಾಟಿ ಮಾಡುವ ಮುನ್ನ ಕಳೆ ಕೀಳುವಂತೆ ಮೇಲಿನ ಉದಾಹರಣೆ ಗಳನ್ನು ಕೂಡಿಸಿ ಅರ್ಥೈಸುವುದಾದರೆ ನಮ್ಮ ಪೂರ್ವ ಕಲ್ಪನೆ, ನಂಬಿಕೆ, ಊಹೆ ಇದೆ ಮುಂತಾದವುಗಳನ್ನು ಸಂಪೂರ್ಣವಾಗಿ ಮನಸ್ಸಿನಿಂದ-ಮೆದುಳಿನಿಂದ ತೆಗೆದುಹಾಕಿ ಹೊಸ ಆಶಯಗಳು ಅರಳುವಂತೆ ಮಾಡುವುದೇ ಅನ್ ಲರ್ನ್.

ಹಳತು ಅಳಿಸಿ ಹೊಸತಿಗೆ ನಾಂದಿ ಹಾಡುವ ಸೃಜನಶೀಲತೆ ಇದು. ಲರ್ನ್ (ಕಲಿಕೆ) ಅನ್ ಲರ್ನ್ (ಕಲಿತದ್ದನ್ನು ಮರೆಯುವುದು) ರೀ ಲರ್ನ್ (ಹೊಸದನ್ನು ಕಲಿಯುವುದು) ಇದೊಂದು ಚಕ್ರದಂತೆ. ಮನೋವಿಜ್ಞಾನ ದಲ್ಲಿ ಅಸಹಾಯಕ ನಂಬಿಕೆಗಳು ಹಾಗೂ ಋಣಾತ್ಮಕ ವರ್ತನೆಗಳನ್ನು ಬಂಧಮುಕ್ತಗೊಳಿಸುವುದಕ್ಕೆ ಅನ್ ಲರ್ನ್ ಎಂದು ಹೆಸರಿಡುತ್ತಾರೆ. ನ್ಯೂರೋ ತಜ್ಞರು ಇದಕ್ಕೆ ರಿವೈಯರಿಂಗ್ ಎನ್ನುತ್ತಾರೆ. ಹೆಸರುಗಳೇನೆ ಇರಲಿ,
ಒಂದಂತು ಸತ್ಯ. ಆಳದಲ್ಲಿ ಅವಿತಿರುವುದನ್ನು ಅಳಿಸಿ ಹಾಕಲು ಎಂತವರಿಗಾದರೂ ಸ್ವಲ್ಪ ಸಮಯಾವಕಾಶ ಬೇಕಿರುತ್ತದೆ. ಏಕೆಂದರೆ ಕೆಲವು ನಂಬಿಕೆ, ಮನೋಭಾವಗಳು ತೆಳುವಾಗಿರುತ್ತವೆ. ಅವುಗಳನ್ನು ಸುಲಭವಾಗಿ ಬದಲಿಸಿ ಬಿಡಬಹುದು.

ಆದರೆ ಕೆಲವು ಆಲೋಚನೆಗಳು, ನಂಬಿಕೆಗಳು ಮಂತ್ರದಂತೆ ನಾವು ನೋಡಿದ, ಕೇಳಿದ ಪ್ರತಿಯೊಂದರಿಂದಲೂ ಪ್ರೇರಿತವಾಗಿ ಗಟ್ಟಿಯಾಗಿರುತ್ತವೆ.
ನಮ್ಮ ಶಿಕ್ಷಕರನ್ನೇ ತೆಗೆದುಕೊಳ್ಳೋಣ-ಅವರು ಹೊಸ ಬಗೆಯ ಕಲಿಕೆಗೆ ಅವಕಾಶವಿರುವ ಪರಿಸರಕ್ಕೆ ತೆರೆದುಕೊಂಡರಷ್ಟೇ ಅವರಿಗೆ ಅನ್ ಲರ್ನ್ ಪ್ರಕ್ರಿಯೆ ಸಾಧ್ಯ. ಇದನ್ನು ಹಾವರ್ಡ್ ಗ್ರಾಜುಯೆಟ್ ಸ್ಕೂಲ್ ಆಫ್ ಎಜುಕೇಶನ್ ನ ಕ್ರಿಸ್ಡೇಡ್ ಬಹಳ ಪರಿಣಾಮಕಾರಿಯಾಗಿ ಹೀಗೆ ವಿವರಿಸುತ್ತಾರೆ- ಪರಿವರ್ತನೆ ಅಥವಾ ಬದಲಾವಣೆಯನ್ನುವುದು ದೊಡ್ಡ ಸವಾಲಿನ ಕೆಲಸ. ಏಕೆಂದರೆ ನಾವು ಹೊಸ ಕೌಶಲಗಳನ್ನು ಕಲಿಯುವುದು ಅಷ್ಟೇ ಅಲ್ಲ, ನಮ್ಮ
ಸುಪ್ತ-ಪ್ರಜ್ಞೆಯಲ್ಲಡಗಿರುವ ನಂಬಿಕೆ, ಊಹೆ, ಆಚರಣೆ ,ಮೌಲ್ಯ ಎಲ್ಲವುಗಳಿಂದ ಬಿಡುಗಡೆ ಹೊಂದಬೇಕಾಗುತ್ತದೆ.

ಬದುಕಲ್ಲಿ ಎಷ್ಟೋ ಸಂಗತಿಗಳನ್ನು ನಾವು ಹಾಗೆ ವಾಸ್ತವವೆನ್ನುವಂತೆ ಒಪ್ಪಿಕೊಂಡು ಬಿಟ್ಟಿದ್ದೇವೆ ಮತ್ತು ಅವು ನಮ್ಮೆಲ್ಲರ ಬದುಕಿನ ಭಾಗಗಳೇ ಆಗಿಬಿಟ್ಟಿವೆ. ಹೇಗೆಂದರೆ ಶಿಕ್ಷಕರು ಜ್ಞಾನವನ್ನು ಬೋಽಸುತ್ತಾರೆ ಮತ್ತು ವಿದ್ಯಾರ್ಥಿಗಳು ಅದನ್ನು ಕಲಿಯುತ್ತಾರೆ. ಪರೀಕ್ಷೆಗಳು ಎಲ್ಲರ ಸಾಮರ್ಥ್ಯವನ್ನು ಒಂದೇ ಆಧಾರದಲ್ಲಿ ಸಮೀಕರಿಸಿ ನೀವೆಷ್ಟು ಉತ್ತಮರು ಎಂಬುದನ್ನು ಹೇಳುತ್ತವೆ. ಆದರಿಲ್ಲಿ ನಾವು ಮರೆತಿರುವ ವಿಷಯವೆಂದರೆ ಹಿಂದೆ ನಾವು ಕುಳಿತ ಕುರ್ಚಿಯಲ್ಲಿ ಇಂದು ನಾವು ಕೂರಲು ಸಾಧ್ಯವಾಗುತ್ತಿಲ್ಲವೆಂಬುದು. ಈ ರೂಪಕವನ್ನು ನಾವು ಅನ್ ಲರ್ನ್ ಪ್ರಕ್ರಿಯೆಗೆ ಹೋಲಿಸಬಹುದು. ನಮಗೆ ಕೂರಲು ಸಾಧ್ಯವಾಗದ ಕುರ್ಚಿಯನ್ನು ತೆಗೆದುಬಿಡೋಣ, ಆಗ ಅಂದು ಖಾಲಿ ಜಾಗ ಆವರಿಸುತ್ತದೆ. ಹಾಗಾದರೆ ಆ ಜಾಗದಲ್ಲಿ ನಾವು ಮತ್ತೇನನ್ನು ತುಂಬಿಸಬಹುದು? ಇಂತಹ ಹೊತ್ತಲ್ಲಿ ನಮ್ಮ ಪ್ರಜ್ಞೆಗೆ ನಿಲುಕುವ ವಿಚಾರವೆಂದರೆ ಕುರ್ಚಿ ಇದ್ದ ರೂಮಿನಲ್ಲಿ ಇನ್ನೂ ಇರಬಹುದಾದ
ಮಿಕ್ಕೆಲ್ಲ ವಸ್ತುಗಳನ್ನು ಬದಲಿಸಬೇಕೆಂಬುದೇ ಈ ಪ್ರಜ್ಞೆ.

ಇದು ಮನಸಿನೊಳಗೊಂಡು ಕಿಡಿ ಹೊತ್ತಿಸುತ್ತದೆ, ವಿಮರ್ಶಾತ್ಮಕ ಚಿಂತನೆಗೆ ಸಾಣೆ ಹಿಡಿಯುತ್ತದೆ, ಪ್ರಶ್ನಿಸುವ, ವಿಚಾರಿಸುವ, ಕಲಿಯುವ ಪ್ರಮಾಣಿತ ಅಭ್ಯಾಸ ಆಗ ನಮ್ಮದಾಗುತ್ತದೆ. ವಿಷಯಗಳನ್ನು, ವಿಚಾರಗಳನ್ನು, ಸಂಗತಿಗಳನ್ನು ಕಲಿಯುವಾಗ ವ್ಯಕ್ತಿ ಹೊಸ ಅನ್ವೇಷಣೆಗಳನ್ನು, ಸಂವಹನವನ್ನು, ಸಾಧ್ಯತೆಗಳನ್ನು ಮನಗಾಣ ಬೇಕು. ಆಗ ಕಲಿಯುವ ಆಸಕ್ತಿ, ಖುಷಿ ನಮ್ಮದಾಗುತ್ತದೆ. ಸಂಪೂರ್ಣ ದೃಷ್ಟಿಕೋನವನ್ನೇ ಬದಲಾಯಿಸಿ ಬಿಡುತ್ತದೆ.
ಬೆಳಗ್ಗೆ ತಿಂಡಿ ತಿನ್ನುವ ಅಭ್ಯಾಸ ಇಟ್ಟುಕೊಂಡು ಬೆಳೆದ ನಾನು ಕಳೆದೆರಡು ವರ್ಷಗಳಿಂದ ಮಧ್ಯಂತರ ಉಪವಾಸ (ಇಂಟರ್ಮಿಟ್ಟೆಂಟ್ ಫಾಸ್ಟಿಂಗ್) ಆಹಾರದ ಅಭ್ಯಾಸಕ್ಕೆ ಬದಲಾದೆ. ಅಂದರೆ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದ ಊಟದ ಶೈಲಿಗೂ ಮಧ್ಯಂತರ ಉಪವಾಸದ ಶೈಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾನು ೧೬ ಗಂಟೆ ಉಪವಾಸವಿರುತ್ತಿದ್ದೆ, ೮ ಗಂಟೆ ಅವಽಯಲ್ಲಿ ಮಾತ್ರ ಆಹಾರ ಸೇವಿಸುತ್ತಿದ್ದೆ. ಮಧ್ಯಾಹ್ನ ೧೨:೩೦ ಗಂಟೆಗೆ ದಿನದ ಮೊದಲ ಊಟ ಮಾಡುತ್ತಿದ್ದೆ. ಸಂಜೆ ಆರು ಮೂವತ್ತರ ಹೊತ್ತಿಗೆ ನನ್ನ ಆ ದಿನದ ಕಡೆಯ ಊಟವಾಗಿರುತ್ತಿತ್ತು. ಮತ್ತು ನಾನು ಆಹಾರ ಸೇವಿಸುವುದು ಮಾರನೆಯ ದಿನ ಮಧ್ಯಾಹ್ನ ೧೨:೩೦ ಗಂಟೆಗೆ. ಹಳೆಯ ಪದ್ಧತಿಯನ್ನು ಅನ್ ಲರ್ನ್ ಮಾಡಿ ನಾನು ಅನುಸರಿಸುತ್ತಿರುವ ಈ ಹೊಸ ಅಭ್ಯಾಸಕ್ಕೆ ಹೊಂದಿಕೊಳ್ಳಬೇಕಾದರೆ ನನ್ನೊಳಗೆ ಹುಟ್ಟಿಕೊಂಡ ಪ್ರಶ್ನೆಗಳಿಗೆ ಲೆಕ್ಕವಿಲ್ಲ. ಅದಕ್ಕೆ ಇಲ್ಲಿ ಟಾ-ರ್‌ನ ಉಖ ಮುಖ್ಯವಾಗುತ್ತದೆ.

ಬೆಳೆದು ಬದಲಾಗುತ್ತಿರುವ ಜಗತ್ತಿನೊಡನೆ ಈ ಲರ್ನ್, ಅನ್ ಲರ್ನ್, ರೀಲರ್ನ್‌ನ ಪ್ರಕ್ರಿಯೆಗಳು ಚಕ್ರದಂತೆ ಸುತ್ತುತ್ತಲೇ ಇರಬೇಕು. ಇಲ್ಲವಾದರೆ ಬದುಕಿಗೆ ಜಡ. ಈ ಹೊತ್ತಿನ ಜಗತ್ತಿಗೆ ಪ್ರಶ್ನಿಸುವ ಮನಃಸ್ಥಿತಿ ನಮ್ಮದಾಗಬೇಕು, ಅಭಿಪ್ರಾಯಗಳನ್ನು ಸುಲಭವಾಗಿ ತೆಗೆದುಕೊಳ್ಳುವಂತಾಗ
ಬೇಕು, ಬದಲಾವಣೆಗೆ ತೆರೆದುಕೊಳ್ಳಬೇಕು, ನಮ್ಮಿಂದ ನಾವೇ ಕೆಲವೊಮ್ಮೆ ಬಿಡುಗಡೆಗೊಳ್ಳಬೇಕು. ಜತೆಗೆ ನಮ್ಮ ಕಲ್ಪನೆ, ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕು. ನೀರಿಗಿರುವ ಸ್ರಾವತೆ ನಮ್ಮದಾಗಬೇಕು. ಯಾವ ಪಾತ್ರೆಗೆ ಹಾಕಿದರೂ ಅದರ ಆಕಾರಕ್ಕೆ ತಕ್ಕಂತೆ ಹೊಂದಿಕೊಂಡು
ಹೋಗುವುದು ಅದರ ಸ್ವಭಾವ. ಈ ಹೊಂದಾಣಿಕೆಯೇ ಹೊಸತಿನ ಕಲಿಕೆಗೆ ಮುನ್ನುಡಿ.

ಇದನ್ನು ಹೇಳಿಕೊಡುವುದಕ್ಕೆ ಮತ್ತೆ ಡಾರ್ವಿನ್ ಬರಬೇಕಿಲ್ಲ, ಮನಸ್ಸು ಮಾಡಬೇಕಷ್ಟೆ. ಅನ್ ಲರ್ನ್ – ರೀ ಲರ್ನ್ ಪ್ರಕ್ರಿಯೆಗೆ ಬೇಕಿರುವುದು ಇಚ್ಛಾಶಕ್ತಿ ಹೊಸತಿನೆಡೆಗೆ ನಾವು ಮುಕ್ತವಾಗಿ ತೆರೆದುಕೊಳ್ಳದರ ಹೊರತು ಅನ್ ಲರ್ನ್ – ರೀ ಲರ್ನ್ ಎರಡೂ ಸಾಧ್ಯವಿಲ್ಲ. ಅವಶ್ಯಕತೆಯ ಸಮಯದಲ್ಲಿ ಹಳೆಯ ರೂಢಿಗಳನ್ನು ದಾಟಿ ಹೊಸದನ್ನು ಅಪ್ಪಿಕೊಳ್ಳಬೇಕು. ಇಂದು ನಾವೆಲ್ಲ ಬದುಕುತ್ತಿರುವುದು ಪರಿವರ್ತನೆಯ ಪ್ರಪಂಚದಲ್ಲಿ ನೆನ್ನೆ ಹೊಸದಾಗಿದ್ದು ಇಂದು ಹಳತಾಗಿರುತ್ತದೆ. ಅನ್ ಲರ್ನ್ ಇದೊಂದು ಪರಿಶ್ರಮ ಬೇಡುವ ಪ್ರಕ್ರಿಯೆ.

ನಮ್ಮ ಮನಸ್ಸಿನ ಶಕ್ತಿ ಹಾಗೂ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ನಮ್ಮೆಲ್ಲರಿಗೂ ಅನ್ ಲರ್ನ್ ಪ್ರಕ್ರಿಯೆಗೆ ಹೊಂದಿಕೊಳ್ಳುವ ಅರಿವು ಉಂಟಾಗ ಬೇಕು. ಪರಿಚಯವಿಲ್ಲದ ಕೆಲಸಗಳಿಗೆ ತೆರೆದುಕೊಳ್ಳಿ ನಾವೆಲ್ಲ ಮಾಡರ್ನ್ ಆಗಿ ಬಟ್ಟೆ ಹಾಕಿಕೊಳ್ಳುವುದು, ಮಾಡರ್ನ್ ಆಗಿ ಮನೆ ಕಟ್ಟಿಸುವುದು ಅಷ್ಟೇ ಏಕೆ? ಮಾಡರ್ನ್ ಶೈಲಿಯ ಬಾತ್‌ರೂಮ್ ಹಾಗೂ ಟಾಯ್ಲೆಟ್ ಡಿಸೈನ್ ಮಾಡಿಸಿಕೊಳ್ಳುತ್ತೇವೆ. ಆದರೆ, ಅಷ್ಟೇ ಪ್ರಗತಿ ದಾಯಕ ಆಲೋಚನೆಗಳನ್ನು ನಮ್ಮದಾಗಿಸಿಕೊಳ್ಳಲು ಹಿಂಜರಿಯುತ್ತೇವೆ. ಕೈಯಲ್ಲಿ ಸಾವಿರಾರು ಗಟ್ಟಲೆ ಸುರಿದು ತೆಗೆದುಕೊಂಡಿರುವ ಫೋನ್ ಇರುತ್ತದೆ.

ಅದರ ಒಳಗಿನ ತಂತ್ರಜ್ಞಾನವನ್ನು ಕಲಿಯುವುದಕ್ಕೆ ನಮಗೆ ಜಾಡ್ಯ. ‘ಅಯ್ಯೋ ಅವೆಲ್ಲ ನಮಗೆಲ್ಲಿ ಬರುತ್ತೆ, ಅವೆಲ್ಲ ನಮಗಾಗಲ್ಲ.’ ಹೀಗೆ ಎಷ್ಟೋ ವಿಷಯಗಳ ಹೊಸತಿಗೆ ನಾವು ಮುಖ ಮಾಡುವುದಿಲ್ಲ ಏಕೆಂದರೆ ನಮ್ಮೊಳಗಿನ ಹಳೆಯ ದನ್ನು ಬಿಡುಗಡೆಗೊಳಿಸಲು ನಾವು ತಯಾರಿರುವುದಿಲ್ಲ
ಹೊಸ ಕಲ್ಪನೆಗಳು ನಮ್ಮದಾಗಿಸಿಕೊಳ್ಳಲು ಪರಿಚಯವಿಲ್ಲದ್ದಕ್ಕೆ ಪದ ಹಾಡಬೇಕಾಗುತ್ತದೆ ನಮ್ಮೊಳಗಿನ ಕುತೂಹಲವನ್ನು ಸಲಹಬೇಕು. ಏನೇ ಇರಲಿ ಮಕ್ಕಳು ಬೇಗ ಕಲಿತುಬಿಡುತ್ತಾರಲ್ಲವೇ ಏಕೆ? ಅವರಲ್ಲಿ ಸಹಜ ಕುತೂಹಲ ಜಾಸ್ತಿ ಜತೆಯ ಅವರಲ್ಲಿರುವ ತುಂಬ ಅನ್ವೇಷಣೆಯ ಸ್ವಭಾವ. ಇದ್ಯಾಕೆ
ಹಿಂಗಾಗುತ್ತೆ? ಇದ್ಯಾಕೆ ಹಿಂಗಾಗಲ್ಲ? ಅವರ ಈ ಕುತೂಹಲವೇ ಅನೇಕ ಹೊಸ ಕಲಿಕೆಗೆ ಪ್ರೇರಣೆಯಾಗಿ ಬಿಟ್ಟಿರುತ್ತದೆ.

ಮತ್ತೊಂದು ಬಹಳ ಆಸಕ್ತಿದಾಯಕ ವಿಚಾರವೆಂದರೆ ಮಕ್ಕಳು ಯಾವುದೇ ಹಿಂಜರಿಕೆ ಇಲ್ಲದೆ ಕಲಿಕೆಗೆ ಮುಂದಾಗುತ್ತಾರೆ, ತೊಡಗಿಸಿಕೊಳ್ಳುತ್ತಾರೆ. ಆದರೆ, ನಾವು ದೊಡ್ಡವರು ನಮಗೆಲ್ಲ ನಮ್ಮವೇ ಹೊರೆಗಳು, ಭಯಗಳು. ಇವುಗಳನ್ನು ಮೀರದ ಹೊರತು ಅನ್ ಲರ್ನ್ ಸಾಧ್ಯವಿಲ್ಲ. ಅನ್ ಲರ್ನ್ – ರೀಲರ್ನ್ ಎರಡು ಮನಸ್ಸಿಗೆ ಸಂತೋಷ ತುಂಬುವ ಸಂಗತಿಗಳು. ಮೊದಲ ಸಲ ಕಲಿಯುವ ಖುಷಿ ಒಂದೆಡೆಯಾದರೆ ನಮ್ಮ ಜ್ಞಾನವನ್ನು ಪರೀಕ್ಷೆಗೆ ಒಡ್ಡುವುದು ಮತ್ತೊಂದೆಡೆ ಹೀಗೆ ಕಲಿಯುತ್ತ ಬಂಧ ಮುಕ್ತಗೊಳಿಸುತ್ತ ಸಾಗುವುದಿದೆಯಲ್ಲ, ಅದೇ ನಿಜ ಉತ್ಕೃಷ್ಟತೆಯ ಸಂಕೇತ.

ನಿಮ್ಮ ಬದುಕಿನ ಭಾಗವೇ ಆಗಿದ್ದ ಆಲೋಚನೆಗಳನ್ನು ಕೆಡವಿ ಮುನ್ನಡೆದಾಗ ಅವಶ್ಯಕವಾಗಿ ಮನದಾಳಕ್ಕಿಳಿದು ನಾವ್ಯಾರು? ನಮಗೇನು ಬೇಕು? ನಾವು ಹೇಗೆ ಯೋಚಿಸಬೇಕು? ಹೇಗೆ ಕಲಿಯಬೇಕು? ಎಂಬುದನ್ನು ಮೈಗೂಡಿಸಿಕೊಳ್ಳುತ್ತೇವೆ. ಎಕಾರ್ಟ್ ಟಾಲೆ ಹೇಳುವಂತೆ ಎರಡು ಅಭಿಪ್ರಾಯ ಗಳು ನಮ್ಮೊಳಗೆ ಹೊಯ್ದಾಡುತ್ತಿರುವಾಗ ನಾವು ಯಾರು ಅಲ್ಲ ಆ ಎರಡು ಅಭಿಪ್ರಾಯಗಳ ನಡುವಿನ ಜಾಗದಲ್ಲಿ ನಿಂತಿರುವ ಕೇಳುಗರ ಅಷ್ಟೇ!!!