ಕಳೆದ ವಾರ ಅರ್ಜಿದಾರ ಕೇರಳ ಹೈಕೋರ್ಟ್‌ಗೆ ಮೊರೆ ಹೋದ ನಂತ ರವೇ ಈ ಪ್ರಕರಣದ ತೀರ್ಪಿನ ಪ್ರಕ್ರಿಯೆ ಚುರುಕು ಗೊಂಡಿದೆ.
ಸಿಪಿಐ(ಎಂ) ಮೃತ ಶಾಸಕರ ಕುಟುಂಬ, ಉನ್ನತ ರಾಜಕೀಯ ನಾಯಕರು ಸೇರಿದಂತೆ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತಟ್ಟಿದ್ದರು. ಇವರ ಕುಟುಂಬಕ್ಕೆ ಪರಿಹಾರ ನೀಡದೆ, ಪರಿಹಾರ ನೀಡಲಾಗಿದೆ ಎಂದು ಹೇಳಲಾಗಿತ್ತು. ಈ ಮೂಲಕ ಸಿಎಂಡಿಆರ್‌ಎಫ್‌ನಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂದು ಅರ್ಜಿದಾರ ದೂರಿನಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತದ ಉಭಯ ನ್ಯಾಯಮೂರ್ತಿಗಳ ಪೀಠ ಶುಕ್ರವಾರ ತೀರ್ಪು ನೀಡುವ ನೀರಿಕ್ಷೆ ಇದೆ.
ಸೆಪ್ಟೆಂಬರ್ 2018 ರಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂಬಂಧ ವಿಚಾರಣೆಯು ಮಾರ್ಚ್ 18, 2022 ರಂದು ಕೊನೆಗೊಂಡಿತ್ತು. ಅಂದಿನಿಂದ ತೀರ್ಪನ್ನು ಬಾಕಿ ಇರಿಸಲಾಗಿದೆ.