ಬೆಂಗಳೂರು: ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ರಾಷ್ಟ್ರೀಯ ಸಂಸ್ಥೆ (ನಿಮ್ಹಾನ್ಸ್) ಮತ್ತು ಜೀವ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ (ಎನ್ಸಿಬಿಎಸ್) ಗೆ ‘ಸೆಂಟರ್ ಫಾರ್ ಬ್ರೇನ್ ಆಂಡ್ ಮೈಂಡ್’ ಸ್ಥಾಪನೆ ಮಾಡುವುದಕ್ಕಾಗಿ ರೂ. 100 ಕೋಟಿ ಅನುದಾನವನ್ನು ರೋಹಿಣಿ ನೀಲೇಕಣಿ ಅನುದಾನವನ್ನು ಘೋಷಿಸಿದೆ. ಐದು ಪ್ರಮುಖ ಅನಾರೋಗ್ಯಗಳಾದ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್, ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್, ಡಿಮೆನ್ಷಿಯಾ ಮತ್ತು ಅಡಿಕ್ಷನ್ ಕಾರಣಗಳು, ಸಹಸಂಬಂಧಗಳು ಮತ್ತು ಕೋರ್ಸ್ ಅನ್ನು ಅರ್ಥ ಮಾಡಿಕೊಳ್ಳಲು ಸೆಂಟರ್ ಇನ್ನಷ್ಟು ಅತ್ಯಾಧುನಿಕ ಸಂಶೋಧನೆಯನ್ನು ಮಾಡಲಿದೆ ಮತ್ತು ಅವುಗಳಿಗೆ ಸಂಭಾವ್ಯ ಮಧ್ಯಪ್ರವೇಶ ಮತ್ತು ಚಿಕಿತ್ಸೆಗಳನ್ನು ಅನ್ವೇಷಿಸಲಿದೆ.
ಈ ಒಪ್ಪಂದದ ಅಡಿಯಲ್ಲಿ, ದಾನಿ ರೋಹಿಣಿ ನೀಲೇಕಣಿ ಸಂಸ್ಥಾಪಿಸಿದ ರೋಹಿಣಿ ನೀಲೇಕಣಿ ಫಿಲಾಂಥ್ರೊಪೀಸ್ ಫೌಂಡೇಶನ್ 2023 ಏಪ್ರಿಲ್ನಿಂದ ಆರಂಭಿಸಿ ಐದು ವರ್ಷಗಳಿಗೆ ‘ಸೆಂಟರ್ ಫಾರ್ ಬ್ರೇನ್ ಆಂಡ್ ಮೈಂಡ್’ (ಸಿಬಿಎಂ) ಚಟುವಟಿಕೆಗಳನ್ನು ಬೆಂಬಲಿಸಲಿದೆ. ಐದು ವರ್ಷಗಳಲ್ಲಿ ಸಿಬಿಎಂ ಎರಡು ಕಾರ್ಯಗಳನ್ನು ನಡೆಸಲಿದೆ. ದೀರ್ಘಕಾಲೀನ ಸಂಶೋಧನೆ ನಡೆಸಲಿದೆ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಪ್ರಾಕ್ಟೀಸ್ಗೆ ಸಾಮರ್ಥ್ಯ ನಿರ್ಮಾಣ ಮಾಡಲಿದೆ.
ಭಾರತದಲ್ಲಿ, ಅಂದಾಜು 193 ಮಿಲಿಯನ್ ಜನರು ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ ಮತ್ತು ಈ ಬಹುತೇಕ ಅನಾರೋಗ್ಯಗಳಿಗೆ ಪತ್ತೆ ಮತ್ತು ಚಿಕಿತ್ಸಾತ್ಮಕ ನಿರ್ವಹಣೆಯನ್ನು ಕಂಡುಕೊಳ್ಳುವ ಅಗತ್ಯವಿದೆ. ನಿಮ್ಹಾನ್ಸ್ ಮತ್ತು ಎನ್ಸಿಬಿಎಸ್ (ಇನ್ಸ್ಟೆಮ್ ಜೊತೆಗೆ) ಮಧ್ಯೆ ಈ ಬಹುಶಿಸ್ತಿನ, ಅಂತರ್ ಸಾಂಸ್ಥಿಕ ಪಾಲುದಾರಿಕೆಯು ಮಾನಸಿಕ ಆರೋಗ್ಯ ವಲಯಕ್ಕೆ ಅಪಾರ ಕೊಡುಗೆ ನೀಡಲಿದೆ.
ಈ ಅನುದಾನದ ಬಗ್ಗೆ ಮಾತನಾಡಿದ ರೋಹಿಣಿ ನೀಲೇಕಣಿ ಫಿಲಾಂಥ್ರಪೀಸ್ನ ಮುಖ್ಯಸ್ಥೆ ರೋಹಿಣಿ ನೀಲೇಕಣಿ: “ಮಾನಸಿಕ ಆರೋಗ್ಯ ವಲಯಕ್ಕೆ ಹೆಚ್ಚು ಗಮನ ಹರಿಸುವಿಕೆ ಮತ್ತು ಬೆಂಬಲ ಅಗತ್ಯವಿದೆ. ಇತ್ತೀಚಿನ ಸಾಂಕ್ರಾಮಿಕ ರೋಗದಿಂದಾಗಿ ಈ ನಿಟ್ಟಿನಲ್ಲಿ ಇನ್ನಷ್ಟು ಗಮನ ಹರಿಸುವ ಅಗತ್ಯ ಮೂಡಿದೆ. ಈ ಅನುದಾನದ ಮೂಲಕ, ಈ ದೇಶದ ಎರಡು ಸಂಸ್ಥೆಗಳ ಮಧ್ಯೆ ಸಹಭಾಗಿತ್ವವು ಜಾಗತಿಕವಾಗಿ, ಭಾರತ ಮತ್ತು ವಿಶ್ವದ ಕೋಟ್ಯಂತರ ಜನರಿಗೆ ಉತ್ತಮ ಚಿಕಿತ್ಸೆಗಾಗಿ ಸೂಕ್ತ ಒಳನೋಟಗಳು, ಸಾಕ್ಷಿ ಮತ್ತು ರಹದಾರಿಗಳನ್ನು ಒದಗಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಮಾನಸಿಕ ಆರೋಗ್ಯ ಪ್ರಾಕ್ಟೀಶನರ್ಗಳ ಸಮುದಾಯಕ್ಕೆ ಒಂದು ಪರಿಸರ ವ್ಯವಸ್ಥೆಯನ್ನು ಸೆಂಟರ್ ಫಾರ್ ಬ್ರೇನ್ ಆಂಡ್ ಮೈಡ್ ನಿರ್ಮಿಸುತ್ತದೆ ಎಂದು ನಾವು ಆಶಿಸಿದ್ದೇವೆ. ಐದು ಪ್ರಮುಖ ಅನಾರೋಗ್ಯಗಳ ಮೇಲೆ ನಡೆಸಲಾಗುವ ಸಂಶೋಧನೆಯು ಮಹತ್ವದ್ದಾಗಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ಇದು ಶೈಕ್ಷಣಿಕ ಮತ್ತು ಪ್ರಾಯೋಗಿಕ ವಲಯದಲ್ಲಿ ಇನ್ನಷ್ಟು ಅನ್ವೇಷಣೆಗೆ ಅನುವು ಮಾಡಲು ಓಪನ್ ಸೋರ್ಸ್ ಆಗಿರುತ್ತದೆ. ಈ ಕೇಂದ್ರಕ್ಕೆ ಎಲ್ಲ ಯಶಸ್ಸು ಸಿಗಲಿ ಎಂದು ನಾನು ಆಶಿಸುತ್ತೇನೆ ಮತ್ತು ಮುಂದಿನ ವರ್ಷಗಳಲ್ಲಿ ಜ್ಞಾನವನ್ನು ಹಂಚಿಕೊಳ್ಳಲು ಇದು ಜಾಗತಿಕ ಕೇಂದ್ರವಾಗುತ್ತದೆ ಎಂದು ನಾನು ಆಶಿಸುತ್ತೇನೆ.”
2016 ರಿಂದಲೂ, ಎನ್ಸಿಬಿಎಸ್ ಮತ್ತು ಇನ್ಸ್ಟೆಮ್ ಜೊತೆಗೆ ನಿಮ್ಹಾನ್ಸ್, ಮಾನಸಿಕ ಅನಾರೋಗ್ಯಕ್ಕೆ ಉತ್ತಮ ಪರಿಹಾರಗಳನ್ನು ಕಂಡುಕೊಳ್ಳಲು ಸಂಶೋಧನೆ ವೇದಿಕೆಯನ್ನು ನಿರ್ಮಾಣ ಮಾಡುವುದಕ್ಕೆ ಒಂದು ಪ್ರಾಜೆಕ್ಟ್ (ಆಗ ಇದಕ್ಕೆ ಬಯೋಟೆಕ್ನಾಲಜಿ ಇಲಾಖೆ ಮತ್ತು ಪ್ರತೀಕ್ಷಾ ಟ್ರಸ್ಟ್ ಬೆಂಬಲ ನೀಡಿದೆ) ನಡೆಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ಅನ್ವೇಷಣೆ ನಡೆಸಲು ಸಂಶೋಧನೆ ವೇದಿಕೆ ಈಗ ಸಿದ್ಧವಾಗಿದೆ ಮತ್ತು ಸೆಂಟರ್ ಫಾರ್ ಬ್ರೇನ್ ಆಂಡ್ ಮೈಂಡ್ನಲ್ಲಿ ಇರಲಿದೆ ಹಾಗೂ ಎನ್ಸಿಬಿಎಸ್ ಮತ್ತು ನಿಮ್ಹಾನ್ಸ್ನಲ್ಲೂ ಇದು ಇರಲಿದೆ.
ಈ ಅನುದಾನವು ಪ್ರಸ್ತುತ ಪ್ರಾಕ್ಟೀಸ್ಗಳಿಗೆ ಇನ್ನಷ್ಟು ಬೆಂಬಲ ನೀಡುತ್ತದೆ. ಡೇಟಾಬೇಸ್ ಮತ್ತು ರೆಪಾಸಿಟರಿ ಓಪನ್ ಸೋರ್ಸ್ ಆಗಲಿದೆ ಮತ್ತು ವಿಶ್ವದ ಎಲ್ಲ ಕಡೆಯ ವಿಜ್ಞಾನಿಗಳು ಇದನ್ನು ಬಳಸಿಕೊಳ್ಳಬಹುದಾಗಿದೆ. ಸಿಬಿಎಂಗಳ ಕೆಲಸದ ಸಾಮರ್ಥ್ಯ ನಿರ್ಮಾಣದಲ್ಲಿ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯ ಉತ್ತಮ ವಿಧಾನಗಳನ್ನು ಒಳಗೊಂಡಿರುತ್ತವೆ ಮತ್ತು ಕಳಂಕ ಮನೋಭಾವವನ್ನು ಕಡಿಮೆ ಮಾಡಲು ಮತ್ತು ಜಾಗೃತಿಯನ್ನು ಮೂಡಿಸಲು ಸಾರ್ವಜನಿಕರ ಜೊತೆಗೆ ಸಂವಹನವನ್ನೂ ಕೇಂದ್ರವು ನಡೆಸಲಿದೆ. ಮಾನಸಿಕ ಅಸ್ವಸ್ಥತೆಗೆ ಕಾರಣಗಳನ್ನು ಪರಿಹರಿಸಲು ಅಥವಾ ಅನಾರೋಗ್ಯ ಉಂಟಾದವರಲ್ಲಿ ರೋಗದ ಪ್ರಗತಿಯನ್ನು ಸುಧಾರಿಸಲು ಇದು ಕ್ರಮಗಳನ್ನು ರೂಪಿಸುತ್ತದೆ. ಕ್ಲಿನಿಷಿಯನ್ ಸಂಶೋಧಕರು ಮತ್ತು ನಿರ್ಣಾಯಕ ತಂತ್ರಜ್ಞಾನಗಳು ಮತ್ತು ನವೀನ ವಿಧಾನಗಳಲ್ಲಿ ನುರಿತ ಮೂಲ ವಿಜ್ಞಾನಿಗಳ ಗುಂಪನ್ನು ಅಭಿವೃದ್ಧಿಪಡಿಸುವ ಮೂಲಕ, ಈ ದೀರ್ಘಾ ಕಾಲೀನ ವಿಚಾರಣೆ ಮುಂದುವರಿಸಲು ಕಿರಿಯ ಸಂಶೋಧಕರ ತಂಡವನ್ನು ಕೇಂದ್ರವು ಸ್ಥಾಪಿಸುತ್ತದೆ.
ಈ ಅನುದಾನದ ಸಾಮರ್ಥ್ಯದ ಕುರಿತು ಮಾತನಾಡಿದ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ: “ತೀವ್ರವಾದ ಮಾನಸಿಕ ಕಾಯಿಲೆಗಳಿರುವ ರೋಗಿಗಳ ಹೆಚ್ಚಿನ ಸಂಖ್ಯೆಯ ಕುಟುಂಬಗಳನ್ನು ಅಧ್ಯಯನ ಮಾಡಲು ಮತ್ತು ಸಮೂಹವನ್ನು ರಚಿಸಲು ಎನ್ಸಿಬಿಎಸ್ ಮತ್ತು ಇನ್ಸ್ಟೆಮ್ನೊಂದಿಗೆ ನಿಮ್ಹಾನ್ಸ್ ಸಹಯೋಗವನ್ನು ಹೊಂದಿದೆ. ಈ ಸಮೂಹದ ಆಳವಾದ ಜೈವಿಕ ಮತ್ತು ಕ್ಲಿನಿಕಲ್ ಮೌಲ್ಯಮಾಪನವು ಪ್ರಗತಿಯ ಆವಿಷ್ಕಾರಗಳಿಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಮಾನಸಿಕ ಕಾಯಿಲೆಗಳಿರುವ ವ್ಯಕ್ತಿಗಳಿಗೆ ಉತ್ತಮ ಆರೈಕೆಯಾಗಿ ಬದಲಾಗುವ ಪರಿಣಾಮಗಳನ್ನು ಇದು ಹೊಂದಿದೆ. ನಿಮ್ಹಾನ್ಸ್ನಲ್ಲಿ ಸೆಂಟರ್ ಫಾರ್ ಬ್ರೇನ್ ಆಂಡ್ ಮೈಂಡ್ ಅನ್ನು ಸ್ಥಾಪಿಸಲು ನಾವು ಸಂತೋಷಪಡುತ್ತೇವೆ, ಇದು ಈ ಪ್ರಮುಖ ಸಂಶೋಧನೆಯನ್ನು ಮುಂದುವರಿಸಲು ಮತ್ತು ವಿಸ್ತರಿಸಲು ನಮಗೆ ಅನುವು ಮಾಡಿಕೊಡುತ್ತದೆ. ದೀರ್ಘಾವಧಿಯ ಮತ್ತು ದೂರದೃಷ್ಟಿಯ ಈ ಪ್ರಮುಖ ಉಪಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ನಾವು ರೋಹಿಣಿ ನೀಲೇಕಣಿ ಫಿಲಾಂಥ್ರಪೀಸ್ಗೆ ಕೃತಜ್ಞರಾಗಿರುತ್ತೇವೆ.”
ಎನ್ಸಿಬಿಎಸ್-ಟಿಐಎಫ್ಆರ್ನ ನಿರ್ದೇಶಕ ಪ್ರೊ.ಎಲ್ಎಸ್ ಶಶಿಧರ ಪ್ರತಿಕ್ರಿಯಿಸಿ, “ಎನ್ಸಿಬಿಎಸ್-ಟಿಐಎಫ್ಆರ್, ನಿಮ್ಹಾನ್ಸ್ ಮತ್ತು ಇನ್ಸ್ಟೆಮ್ ಜೊತೆಗೆ ಮಾನಸಿಕ ಅಸ್ವಸ್ಥತೆಗೆ ಉತ್ತಮ ಪರಿಹಾರಗಳನ್ನು ನೀಡುವ ಅನ್ವೇಷಣೆ ವಿಜ್ಞಾನವನ್ನು ಸುಲಭಗೊಳಿಸಲು ವೇದಿಕೆಯನ್ನು ನಿರ್ಮಿಸಿದೆ. ರೋಹಿಣಿ ನಿಲೇಕಣಿ ಫಿಲಾಂಥ್ರಪೀಸ್ ಆರ್ಥಿಕ ಬೆಂಬಲವು ರೋಗಿಗಳ ಮೇಲೆ ದೀರ್ಘಾವಧಿಯ ಸಂಶೋಧನೆಯನ್ನು ಮುಂದುವರಿಸಲು ನಮಗೆ ಅನುವು ಮಾಡಿಕೊಡುತ್ತದೆ. ಇದು ಮಾನಸಿಕ ಅಸ್ವಸ್ಥತೆ ಮತ್ತು ಅದು ಹೇಗೆ ಬೆಳವಣಿಗೆಯಾಗುತ್ತದೆ ಮತ್ತು ಮೆದುಳಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಒಳನೋಟಗಳನ್ನು ನೀಡುತ್ತದೆ. ಅಂತಹ ತಿಳುವಳಿಕೆಯು ನವೀನ ಔಷಧಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ. ನಮ್ಮ ಸಂಶೋಧನೆಯನ್ನು ಉತ್ತೇಜಿಸಲು ಉದಾರ ಅನುದಾನಕ್ಕಾಗಿ ರೋಹಿಣಿ ನಿಲೇಕಣಿ ಫಿಲಾಂಥ್ರಪೀಸ್ಗೆ ನಾವು ಕೃತಜ್ಞರಾಗಿರುತ್ತೇವೆ.”
ಮುಂದಿನ ಕೆಲವು ತಿಂಗಳುಗಳಲ್ಲಿ ಕೇಂದ್ರದ ಉದ್ಘಾಟನೆಯ ಉದ್ಘಾಟನಾ ಕಾರ್ಯಕ್ರಮವನ್ನು ಯೋಜಿಸಲಾಗಿದೆ.