ತಿಪಟೂರು : ತಾಲೂಕಿನ ಹೊನ್ನವಳ್ಳಿ ಹೋಬಳಿ ಮಣಕೀಕೆರೆ ಗ್ರಾಮದ ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಮಂಕಮ್ಮದೇವಿ ಯವರ ಜಾತ್ರಾ ಮಹೋತ್ಸವವು ಏ. ೨ರಿಂದ ಏ.೭ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಏ.೨ರಂದು ಮದವಣಗಿತ್ತಿ ಉತ್ಸವ, ಅಮ್ಮನವರಿಗೆ ಪುಷ್ಪಾಲಂಕಾರ, ಮದ್ದಿನ ಸೇವೆ. ಏ.೩ರಂದು ಮೊದಲೋತ್ಸವ, ಏ.೪ರಂದು ಆರತಿ ಬಾನ, ಶ್ರೀದೇವಿಯವರಿಗೆ ಭೂಕೈಲಾಸ ಉತ್ಸವ, ದೀಪಾಲಂಕಾರ, ಹೂವಿನ ಅಲಂಕಾರ ಏ.೫ರಂದು ಗಂಗಾಸ್ನಾನ, ಪಾರ್ಥಸಾರಥಿ ಅಲಂಕಾರದ ಉತ್ಸವ, ವೈಕುಂಠ ದರ್ಬಾರ್, ಪುಷ್ಪಾಲಂಕಾರ, ಕೀಲುಕುದುರೆ ನರ್ತನ, ಸಂಗೀತ ರಸಸಂಜೆ ಕಾರ್ಯಕ್ರಮ ಅಂದು ರಾತ್ರಿ ಅಮೋಘ ಬಾಣ ಬಿರುಸು ಮದ್ದಿನ ಪ್ರದರ್ಶನ, ತಮಟೆ ವಾದ್ಯ, ಮಹಿಳಾ ಡೊಳ್ಳು ಕುಣಿತ, ನಾಸಿಕ್ ಡೋಲ್, ನಗಾರಿ ವಾದ್ಯ, ಏ.೬ರಂದು ಶ್ರೀಅಮ್ಮನವರ ರಥೋತ್ಸವ ಮತ್ತು ಉಯ್ಯಾಲೋ ತ್ಸವ, ಏ.೭ರಂದು ಸಿಡಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಮಹಾಮಂಗಳಾರತಿ ನಡೆಯಲಿದೆ.
ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಧರ್ಮದರ್ಶಿಗಳು ತಿಳಿಸಿದ್ದಾರೆ.