Friday, 22nd November 2024

ವಿಷಕಾರಿ ಹೊಗೆಗೆ ಉಸಿರುಗಟ್ಟಿ ಮಗು ಸೇರಿ ಆರು ಜನರ ಸಾವು

ವದೆಹಲಿ: ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನ ಮನೆಯೊಂದರಲ್ಲಿ ಸೊಳ್ಳೆ ಬತ್ತಿಯ ಕಿಡಿಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಮಗು ಸೇರಿದಂತೆ ಆರು ಜನರು ಮೃತಪಟ್ಟಿ ದ್ದಾರೆ.

ಶಾಸ್ತ್ರಿ ಪಾರ್ಕ್‌ನ ಮಚ್ಚಿ ಮಾರುಕಟ್ಟೆಯ ಮಜರ್ ವಾಲಾ ರಸ್ತೆಯ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಜಾಯ್ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳುವ ಹೊತ್ತಿಗೆ 9 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ವರು ಪುರುಷರು, ಒಬ್ಬ ಮಹಿಳೆ, ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಗಾಯಗೊಂಡಿರುವ 15 ವರ್ಷದ ಬಾಲಕಿ, 45 ವರ್ಷದ ಮಹಿಳೆಗೆ ಚಿಕಿತ್ಸೆ ನಡೆಯುತ್ತಿದೆ.

ರಾತ್ರಿ ಸೊಳ್ಳೆ ಓಡಿಸಲು ಹಚ್ಚಿದ್ದ ಸೊಳ್ಳೆ ಬತ್ತಿ ಹಾಸಿಗೆಯ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ವಿಷಕಾರಿ ಹೊಗೆಯಿಂದಾಗಿ ಮನೆಯ ಸದಸ್ಯರು ಪ್ರಜ್ಞೆ ಕಳೆದುಕೊಂಡಿದ್ದಾರೆ.