Sunday, 15th December 2024

ಕ್ರೀಡೆ ಮನುಷ್ಯನ ದೇಹ ಮತ್ತು ಮನಸ್ಸನ್ನು ಸದಾ ಜಾಗೃತಗೊಳಿಸುತ್ತದೆ : ಲೋಕೇಶ್ವರ

ತಿಪಟೂರು:  ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಇಂಟರ್ ಕೋಲಿಗೇಟ್ ಸ್ಟೇಟ್‌ಲೆವೆಲ್ ಖೊ-ಖೊ ಪುರುಷರ ಪಂದ್ಯಾವಳಿಗಳನ್ನು ೨೪ ಮತ್ತು ೨೫ ನೇ ಮಾರ್ಚ್ನಲ್ಲಿ ಏರ್ಪಡಿಸಲಾಗಿತ್ತು.

ಈ ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ ಭಾರತದ ಖೋ-ಖೋ ತಂಡದ ಮಾಜಿ ಆಟಗಾರರು ಹಾಗು ಉಪಾ ಧ್ಯಕ್ಷರು ಖೋ-ಖೋ ಫೆಡರೇಶನ್ ಆಫ್ ಇಂಡಿಯಾ ಹಾಗು ಅಧ್ಯಕ್ಷರು ಕರ್ನಾಟಕ ಸ್ಟೇಟ್ ಖೋ-ಖೋ ಅಸೋಷಿ ಯಾಷನ್ ಮತ್ತು ಎ.ಸಿ.ಪಿ.ಯಾಗಿ ನಿವೃತ್ತಿ ಹೊಂದಿದ ಶ್ರೀ.ಲೋಕೇಶ್ವರವರು ಮತ್ತು ವಿಷೇಶ ಆಹ್ವಾನಿತರಾಗಿ ಅಂತರರಾಷ್ಟೀಯ ಖೋ-ಖೋ ಪಟು ಹಾಗು ಝಾನ್ಸಿ ರಾಣಿ ಲಕ್ಮೀಬಾಯಿ ಪ್ರಶಸಿ ವಿಜೇತೆ ವೀಣಾ.ಎಂ. ರವರು ಉದ್ಗಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಉದ್ಗಾಟನೆ ಮಾಡಿ ಲೋಕೇಶ್ವರರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಆಡುವ ಕ್ರೀಡಾಪಟುಗಳಿಗೆ ಸಿಗುವ ಸರ್ಕಾರೀ ಸವಲತ್ತುಗಳ ಬಗ್ಗೆ ಸವಿವರವಾಗಿ ವಿಸ್ತರಿಸಿದರು ಹಾಗು ಭಾರತದಲ್ಲಿ ಕ್ರೀಡಾಲೋಕವು ಬದಲಾಗಿದೆ, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಅತ್ಯತ್ತಮ ತರಬೇತಿಯನ್ನು ನೀಡಲಾಗುತ್ತಿದ್ದೆ, ಕ್ರೀಡೆ ಈಗ ಬರೀ ಮನರಂಜನೆಯಾಗಿ ಉಳಿಯದೇ ಅದೂ ಕೂಡ ಒಂದು ಉದ್ಯಮವಾಗಿ ಬೆಳೆಯುತ್ತಿದೆ ಹಾಗೆಯೇ ತಾವು ಖೋ-ಖೋ ಪಟುವಾಗಿ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರ ನೀಡಿದ ಕಲ್ಪತರು ವಿದ್ಯಾ ಸಂಸ್ಥೆಗೆ ಚಿರಋಣಿ ಎಂದರು. ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಶ್ರೀ ಟಿ.ಎಸ್.ಶಿವಪ್ರಸಾದ್ ರವರು ಕೂಡಾ ಪ್ರೀಡಾಪಟುವಾಗಿ ಕಲ್ಪತರು ವಿದ್ಯಾಸಂಸ್ಥೆಯ ಎಲ್ಲಾ ಪದಾದಿಕಾರಿಗಳು ಕ್ರೀಡೆಗೆ ಅಭೂತಪೂರ್ವ ಪ್ರೋತ್ಸಾಹ ನೀಡುತ್ತರುವುದು ಕಂಡು ತುಂಬಾ ಖುಷಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಸಾಧನೆಗೈದ ವೀಣಾ ಎಂ. ರವರು ಅಂತರ ರಾಷ್ಟಿçÃಯ ೧೨ನೇ ಸೌತ್ ಏಷಿಯನ್ ಖೋ-ಖೋ ನಲ್ಲಿ ೨೦೧೬ರ ಸಾಲಿನಲ್ಲಿ ಗೋಲ್ಡ್ ಮೆಡಲ್ ಪಡೆದವರು ಸುಮಾರು ೪೬ ಬಾರಿ ನ್ಯಾಷನಲ್ ಲೆವೆಲ್ ಖೋ-ಖೋ ಆಡಿದವರು ಇವರು ಎಲ್ಲಾ ಕ್ರೀಡಾಪಟು ಗಳಿಗೆ ಸ್ಪೂರ್ತಿಯಾಗಿದ್ದರು.

ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಶ್ರೀ ಟಿ.ಎಸ್.ಶಿವಪ್ರಸಾದ್ ರವರು ಮಾತನಾಡುತ್ತಾ ಕ್ರೀಡೆ ನಮ್ಮ ಜೀವನದ ಒಂದು ಮೂಖ್ಯ ಭಾಗ ವಾಗಿರಬೇಕು ಏಕೆಂದರೆ, ಕ್ರೀಡೆಯಿಂದ ನಮಗೆ ದೈಹಿಕವಾಗಿ ಮಾನಸಿಕವಾಗಿ ಕ್ರಿಯಾಶೀಲರನ್ನಾಗಿಸುತ್ತದೆ, ಆರೋಗ್ಯಕರ ದೇಹ ಮತ್ತು ಶಾಂತಿಯುತ ಮನಸಿದ್ದರೆ ನಾವು ಏನನ್ನಾದರು ಜೀವನದಲ್ಲಿ ಸಾಧಿಸಬಹುದು ಹಾಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಜೀವನದಲ್ಲಿ ಕ್ರೀಡೆಯಿಂದ ದೂರುಳಿಯ ಬಾರದು ಎಂದು ಕಿವಿಮಾತು ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆವಹಿಸಿದ ಶ್ರೀ ಬಾಗೆಪಲ್ಲಿ ನಟರಾಜ್ ರವರು ಕ್ರೀಡೆಎನ್ನುವುದು ನಮ್ಮ ಮನಸನ್ನು ಕೇಂದ್ರೀಕರಿಸುವ ಶಕ್ತಿಯನು ಹೆಚ್ಚಿಸುವ ಒಂದು ವ್ಯಾಯಾಮ. ಹಾಗಾಗಿ ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗಳಲ್ಲೂ ಭಾಗವಹಿಸುವುದರೊಂದಿಗೆ ತಮ್ಮ ವಿದ್ಯಾರ್ಥಿ ಜೀವನವನ್ನು ಸದಾ ಉತ್ಸಾಹದಿಂದ ಇರಬೇಕು ಎಂದು ತಿಳಿಸಿದರು ಹಾಗು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭಕೋರಿದರು.

ಪ್ರಾಂಶುಪಾಲರಾದ ಡಾ.ಜಿ.ಡಿ.ಗುರುಮೂರ್ತಿರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಮಕ್ಕಳ ಬಹುಮುಖ ಪ್ರತಿಬೆಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಿತ್ತಿದೆ, ವಿದ್ಯಾರ್ಥಿಗಳು ಖೋ-ಖೋ ಆಟವನ್ನು ಕ್ರೀಡಾಭಾವದಿಂದ ಆಡಭೇಕು ಎಂದು ತಿಳಿಸಿದರು.

ಇದರಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದ ತಂಡದವರು, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಬಿ.ಎಂ.ಎಸ್.ಸಿ.ಇ. ತಂಡದವರು ಹಾಗು ತೃತೀಯ ಸ್ಥಾನವನ್ನು ಬೆಂಗಳೂರಿನ ಎಂ.ವಿ.ಜೆ.ಐ.ಟಿ ತಂಡದವರು ಗಳಿಸಿರುತ್ತಾರೆ.

ವಿಜೇತ ತಂಡದವರಿಗೆ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ಮತ್ತು ಉಪಾಧ್ಯಕ್ಷರಾದ ಬಿ.ಎಸ್.ಉಮಾಶ್, ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್, ಕಾರ್ಯದರ್ಶಿಗಾಳಾದ ಟಿ.ಯು.ಜಗದೀಶ್‌ಮೂರ್ತಿ, ಲೋಕೇಶ್ವರವರು, ವೀಣಾ.ಎಂ.ರವರು, ಉಪಾಧ್ಯಕ್ಷರಾದ ಬಾಗೆಪಲ್ಲಿ ನಟರಾಜ್, ಕಾರ್ಯದರ್ಶಿ ಗಳಾದ ಸುಧಾಕರ್.ಹೆಚ್.ಜಿ. ಹಾಗು ಪ್ರಾಂಶುಪಾಲರಾದ ಡಾ.ಜಿ.ಡಿ.ಗುರುಮೂರ್ತಿ ಕೆ.ಐ.ಟಿ. ದೈಹಿಕ ಶಿಕ್ಷಣ ನಿರ್ದೇಶಕರಾದ ಜಯಂತ್.ಎA.ಎಸ್, ಕ್ರೀಡಾಆಯೋಜಕರು ಹಾಗು ಕ್ರೀಡಾಪಟುಗಳು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.