ಬಿಹಾರದ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ, “ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮ ವೊಂದಕ್ಕೆ ಸಸಾರಂಗೆ ಬರಬೇಕಿತ್ತು. ಬಿಹಾರ ಸರ್ಕಾರ ಸೆಕ್ಷನ್ 144 ವಿಧಿಸಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿದೆ. ಎಂದು ಹೇಳಿದ್ದಾರೆ.
ಎರಡು ಕೋಮುಗಳ ಗುಂಪುಗಳ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ನಳಂದಾದಲ್ಲಿ ಭಾರೀ ಭದ್ರತಾ ಸಿಬಂದಿ ಗಳನ್ನು ನಿಯೋಜನೆ ಮಾಡಲಾಗಿದೆ. ನಳಂದಾ ಮತ್ತು ರೋಹ್ತಾಸ್‌ನಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸ ಲಾಗಿದೆ ಮತ್ತು ಸಮಾಜ ವಿರೋಧಿ ಅಂಶಗಳನ್ನು ಗುರುತಿಸಿ ಕ್ರಮವಾಗಿ 27 ಮತ್ತು 18 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.