Sunday, 12th May 2024

ಕೇಂದ್ರ ತನಿಖಾ ದಳ ಸಂಸ್ಥಾಪನಾ ದಿನ ಉದ್ಘಾಟನೆ ನಾಳೆ

ವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ)ನ ಸಂಸ್ಥಾಪನಾ ದಿನವನ್ನು ಏ.೩ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

1963ರ ಏಪ್ರಿಲ್ 1ರಂದು ಆಗಿನ ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಅಡಿಯಲ್ಲಿ ಕೇಂದ್ರ ತನಿಖಾ ದಳವನ್ನು ಸ್ಥಾಪನೆ ಮಾಡಿತ್ತು. ಕೇಂದ್ರ ಸರ್ಕಾರ ನಾಳೆ ಸಿಬಿಐನ ವಜ್ರ ಮಹೋತ್ಸವವನ್ನು ಆಚರಣೆ ಮಾಡುತ್ತಿದೆ.

ಕಾರ್ಯಕ್ರಮದಲ್ಲಿ ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಅತ್ಯುತ್ತಮ ತನಿಖೆಗಾಗಿ ಚಿನ್ನದ ಪದಕ ಪಡೆದ ಸಿಬಿಐ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಿಳಿಸಿದೆ.

ಏಪ್ರಿಲ್ 3 ರಂದು ಮಧ್ಯಾಹ್ನ ವಿಜ್ಞಾನ ಭವನದಲ್ಲಿ ಸಿಬಿಐನ ವಜ್ರ ಮಹೋತ್ಸವ ಆಚರಣೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಶಿಲ್ಲಾಂಗ್, ಪುಣೆ ಮತ್ತು ನಾಗ್ಪುರದಲ್ಲಿ ಹೊಸದಾಗಿ ನಿರ್ಮಿಸಿರುವ ಸಿಬಿಐ ಕಚೇರಿ ಸಂಕೀರ್ಣಗಳನ್ನು ಇದೇ ವೇಳೆ ಉದ್ಘಾಟಿಸಲಿದ್ದಾರೆ.

ವಜ್ರ ಮಹೋತ್ಸವ ಆಚರಣೆ ವರ್ಷವನ್ನು ಗುರುತಿಸುವ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಇದೇ ವೇಳೆ ಬಿಡುಗಡೆ ಮಾಡಲಾಗುವುದು.

error: Content is protected !!