ದಂಪತಿಯ ಮಗಳು ಎನ್‌ಜಿ ಐ ಲೀ ಮಾತನಾಡಿ, ತನ್ನ ತಂದೆ ಸ್ಥಳೀಯ ಅಂಗಡಿಯಿಂದ ಪಫರ್ ಮೀನನ್ನು ಖರೀದಿಸಿದ್ದಾರೆ. ನನ್ನ ಪೋಷಕರು ಅನೇಕ ವರ್ಷಗಳಿಂದ ಅದೇ ಮೀನುಗಾರರಿಂದ ಮೀನುಗಳನ್ನು ಖರೀದಿಸು ತ್ತಿದ್ದಾರೆ.
ಪೋಷಕರಿಬ್ಬರೂ ಊಟದಲ್ಲಿ ಮೀನನ್ನು ತಿಂದ ತಕ್ಷಣ ತಾಯಿ ಲಿಮ್ ಸಿವ್ ಗುವಾನ್ ನಡುಗಲು ಪ್ರಾರಂಭಿಸಿದಳು ಮತ್ತು ಉಸಿರಾಟದ ತೊಂದರೆ ಗಳನ್ನು ಅನುಭವಿಸಿದರು. ಅವರ ಪತಿ ಕೂಡ ಅದೇ ರೋಗಲಕ್ಷಣಗಳು ಕಂಡು ಬಂತು. ನಂತರ ದಂಪತಿಯ ಮಗ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರ ತಾಯಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಇದೀಗ ತಂದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮಹಿಳೆಯ ಸಾವಿಗೆ ಪಫರ್ ಫಿಶ್ ಕಾರಣವಾಗಿದೆ. ಇದು ಹೃದಯದ ಡಿಸ್ರಿಥ್ಮಿಯಾದೊಂದಿಗೆ ಉಸಿರಾಟದ ವೈಫ ಲ್ಯಕ್ಕೆ ಕಾರಣವಾಗಬಹುದು ಎಂದು ಜೋಹೋರ್‌ನ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಹೇಳಿ ದ್ದಾರೆ.
ಜಪಾನೀ ಖಾದ್ಯ ಪಫರ್ ಮೀನುಗಳು ಮಾರಣಾಂತಿಕ ವಿಷಗಳಾದ ಟೆಟ್ರೊಡೋಟಾಕ್ಸಿನ್ ಮತ್ತು ಸ್ಯಾಕ್ಸಿಟಾಕ್ಸಿನ್ ಅನ್ನು ಒಳಗೊಂಡಿರಬಹುದು ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹೇಳಿದೆ.