Monday, 25th November 2024

ಬಾಲ್ಯದ ಪ್ರಭಾವವನ್ನೇ ಮೋದಿಯವರನ್ನು ರೂಪಿಸಿವೆ

ಈ ಪುಸ್ತಕದಲ್ಲಿ ಮೋದಿ ಬೇರೆ ಬೇರೆ ರೀತಿಯ ಅನುಭವ ಹಾಗೂ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಒಂದೆಡೆ ಗ್ರಹದ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ತಮ್ಮ ಕುರಿತು ತಾಯಿಗಿರುವ ಭಾವನೆಗಳ ಬಗ್ಗೆ ಹೇಳುತ್ತಾರೆ. ಪ್ರಕೃತಿಯ ಕುರಿತು ಹೇಳುವಾಗ ಅವರು ಪ್ರಕೃತಿಯನ್ನು ಎಷ್ಟು ವಿಸ್ತಾರವಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸುತ್ತಾರೆ ಅಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅವರ ಸೂಕ್ಷ್ಮ ಗ್ರಹಿಕೆಗಳನ್ನು ನೋಡಿ ಬೆರಗಾಗಿದ್ದೇನೆ. ಅವರ ಕಲ್ಪನಾಶಕ್ತಿ ಬಹಳ ವಿಸ್ತಾರ ವಾಗಿದೆ.

ಬಣ್ಣದ ಲೋಕದಲ್ಲಿ ನಾಲ್ಕು ದಶಕಗಳನ್ನೇ ಕಳೆದವರು ಭಾವನಾ ಸೋಮಾಯಾ. ಸಿನಿಮಾ ವಿಮರ್ಶಕಿಯಾಗಿ, ಜೀವನ  ಚರಿತ್ರೆ ಗಳ ಲೇಖಕಿಯಾಗಿ ಹಾಗೂ ಪತ್ರಕರ್ತೆ ಯಾಗಿ ಅವರದು ಚಿರಪರಿಚಿತ ಹೆಸರು. ಬಾಲಿವುಡ್‌ನ ಅನೇಕ ತಾರೆಯರ ಬದುಕನ್ನು ಅವರು ದಾಖಲಿಸಿದ್ದಾರೆ. ಈಗ ಎಲ್ಲೆೆಡೆ ಸುದ್ದಿಯಾಗಿರುವುದು ಅವರ ಹೊಸ ಪ್ರಾಜೆಕ್ಟ್‌ -‘ಲೆಟರ್ಸ್ ಟು ಮದರ್.’ ಗುಜರಾತಿ ಭಾಷೆಯ ‘ಸಾಕ್ಷಿ ಭಾವ’ದ ಅನುವಾದವಿದು.

ಮೂಲ ಲೇಖಕರು ಬೇರಾರೂ ಅಲ್ಲ, ಪ್ರಧಾನಿ ನರೇಂದ್ರ ಮೋದಿ. ಅವರು ಜಗತ್ ಜನನಿಗೆ ಬರೆದ ಪತ್ರಗಳ ಇಂಗ್ಲಿಷ್  ಸಂಕಲನ ವಿದು. ಇಂದು ಬಿಡುಗಡೆಯಾಗಿದೆ. ಮೋದಿ ತಮ್ಮ ಅಂತರಂಗದ ಆತಂಕಗಳು, ಯೋಚನೆಗಳು ಹಾಗೂ ಅಭಿಪ್ರಾಯಗಳನ್ನೆಲ್ಲ ಇದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ಪತ್ರಕರ್ತರು ತಾವು ಯಾರ ಬಗ್ಗೆ ಬರೆಯುತ್ತಾರೋ ಅಂತಹವರಲ್ಲಿ ಕೆಲವರ ಬಗ್ಗೆ ಬಹಳ ಸೆನ್ಸಿಟಿವ್ ಆಗಿರುತ್ತಾರೆ. ಒಮ್ಮೊಮ್ಮೆ ನಮಗೆ ಹೀಗೆ ಸೆನ್ಸಿಟಿವ್ ಆಗುವುದನ್ನು ನಿಲ್ಲಿಸಿ ಎಂಬ ಉಪದೇಶ ಬರುವುದುಂಟು. ಸೂಕ್ಷ್ಮವಾಗಿ ವರ್ತಿಸುವುದೇ ಅಪರಾಧ ಎಂಬಂತೆ ಹೀಗೆ ಹೇಳುತ್ತಾರೆ. ಆದರೆ, ಇಲ್ಲೊಬ್ಬ ಮನುಷ್ಯ ಇದ್ದಾರೆ. ಇವರು ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳಿಂದ ತುಂಬಿ ತುಳುಕು ತ್ತಿದ್ದಾರೆ. ಆದರೆ, ಬೇರೆಯವರು ತನ್ನನ್ನು ಹೇಗೆ ಜಡ್ಜ್‌ ಮಾಡುತ್ತಾರೆ ಎಂಬ ಬಗ್ಗೆ ಇವರಿಗೆ ಚಿಂತೆಯಿಲ್ಲ. ನಿಜ ಹೇಳ ಬೇಕೆಂದರೆ, ನಾನು ಈ ಪುಸ್ತಕವನ್ನು ಗುಜರಾತಿಯಲ್ಲಿ ಓದಿ ಮುಗಿಸಿದಾಗ ಇದು ಎಷ್ಟು ಗಂಭೀರವಾದ ಕೃತಿ ಎಂದು ಅಚ್ಚರಿಗೊಂಡಿದ್ದೆ. ಮೋದಿ ಈ ಕೃತಿಯಲ್ಲಿ ತಮ್ಮನ್ನು ತಾವು ಎಷ್ಟೊಂದು ಮುಕ್ತವಾಗಿ ತೆರೆದಿಟ್ಟಿದ್ದಾರೆ’ ಎನ್ನುತ್ತಾರೆ ಭಾವನಾ ಸೋಮಾಯಾ. ಮೋದಿಯವರ ಪುಸ್ತಕದ ಬಗ್ಗೆ ಇವರು ಕಾವೇರಿ ಬಾಮ್ಜೈ ಜೊತೆ ಇತ್ತೀಚಿನ ‘ಇಂಡಲ್ಜ್ ಟೈಂಪಾಸ್’ ಆವೃತ್ತಿಗಾಗಿ ನಡೆಸಿದ ಸಂವಾದ ಇಲ್ಲಿದೆ.  ಭಾವನಾ ಇಲ್ಲಿಯವರೆಗೆ 16 ಕೃತಿಗಳನ್ನು ರಚಿಸಿದ್ದಾರೆ. ಸಂವಾದದಲ್ಲಿ ಲೆಟರ್ಸ್ ಟು ಮದರ್ ಕೃತಿಯ ಜೊತೆಗೆ ಚಿತ್ರರಂಗದ ಇತ್ತೀಚಿನ ಆಗುಹೋಗುಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ಜವಾಬ್ದಾರಿಯುತ ಅನುವಾದ: ಮೋದಿ ಕೃತಿಯ ಅನುವಾದ ಮಾಡುವ ವೇಳೆ ಅಲ್ಲಲ್ಲಿ ಕೊಂಚ ವಿರಾಮ ಪಡೆದು ಟೀವಿ ಆನ್ ಮಾಡಿದರೆ ಅಲ್ಲಿ ಕಾಣಿಸುವ ವ್ಯಕ್ತಿಯೂ ನಾನು ಬರೆಯುತ್ತಿರುವ ವ್ಯಕ್ತಿಯೂ ಒಬ್ಬರೇನಾ ಎಂದು ಅಚ್ಚರಿಯಾಗುತ್ತಿತ್ತು. ಅಮಿತಾಭ್ ಬಚ್ಚನ್ ಕುರಿತು ಪುಸ್ತಕ ಬರೆಯುವಾಗಲೂ ಅವರನ್ನು ಭೇಟಿಯಾಗುವುದು ಅಥವಾ ಅವರ ಸಿನಿಮಾ ನೋಡುವುದು ನನ್ನ ಬರವಣಿಗೆಗೆ ಅಡ್ಡಿ ಯಾಗುತ್ತಿತ್ತು. ಮೂಲ ಬರವಣಿಗೆಗಿಂತ ಅನುವಾದವೇ ಬಹಳ ಕಷ್ಟ. ಏಕೆಂದರೆ, ಮೂಲ ಬರವಣಿಗೆ ಯಲ್ಲಿ ನಾನೇನು ಬರೆಯುತ್ತೇನೋ ಅದಕ್ಕೆ ನಾನೇ ಜವಾಬ್ದಾರಳು. ಆದರೆ, ಅನುವಾದವೆಂಬುದು ದುಪ್ಪಟ್ಟು ಜವಾಬ್ದಾರಿಯ ಕೆಲಸ. ಗುಜರಾತಿ ನನ್ನ ಮಾತೃಭಾಷೆಯಾಗಿದ್ದರೂ ನಾನು ಗುಜರಾತಿಯನ್ನು ಯಾವತ್ತೂ ಅಭ್ಯಾಸ ಮಾಡಿದವಳಲ್ಲ. ನನಗೆ ಈ ಭಾಷೆ ಚೆನ್ನಾಗಿ ಗೊತ್ತು ಅಷ್ಟೆ. ಇನ್ನು, ಮೋದಿಯವರ ಕೃತಿ ಅನುವಾದ ಮಾಡುವಾಗ ನಾನು ಮಹಿಳೆಯ ಭಾಷೆಯನ್ನು ಪುರುಷನ ಭಾಷೆಯ ಜೊತೆ ಸಿಂಕ್ ಮಾಡಬೇಕಿತ್ತು. ಒಟ್ಟಿನಲ್ಲಿ ಈ ಪುಸ್ತಕ ಅನುವಾದ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ!

ಇಂದು ಪುಸ್ತಕ ಬಿಡುಗಡೆಯಾಗಿದೆ. ಹೆಚ್ಚು ಜನರು ಇದನ್ನಿನ್ನೂ ಓದಿಲ್ಲ. ಓದಿದ ಮೇಲೆ ಜನರು ಏನಂದುಕೊಳ್ಳುತ್ತಾರೆ ಎಂಬ ಬಗ್ಗೆೆ ನನಗೆ ಯೋಚನೆಯಿಲ್ಲ. ಹಾಗೆ ನೋಡಿದರೆ ನಾನು ಯಾವತ್ತೂ ಫೀಡ್‌ಬ್ಯಾಕ್ ಕೇಳಿದವಳೇ ಅಲ್ಲ. ನಾನು ಯಾರ ಬಗ್ಗೆ ಬರೆಯುತ್ತೇನೋ ಅವರಿಂದಲೂ ಫೀಡ್‌ಬ್ಯಾಕ್ ಕೇಳಿಲ್ಲ. ನಾನು ರಾಜಕೀಯ ಪತ್ರಕರ್ತೆಯಲ್ಲ. ನಾನಿಲ್ಲಿ ಸಂಕಲಿಸಿರುವುದು ರಾಜಕೀಯ ಸಂದರ್ಶನಗಳೂ ಅಲ್ಲ. ನಾನೊಂದು ಪುಸ್ತಕವನ್ನು ಅನುವಾದ ಮಾಡಿದ್ದೇನೆ… ಅಷ್ಟೆೆ. ಅಲ್ಲಿಗೆ ಮುಗಿಯಿತು.
ಈ ಪುಸ್ತಕದಲ್ಲಿ ನನ್ನನ್ನು ವಿಚಲಿತಗೊಳಿಸಿದ ಅನೇಕ ಸಾಲುಗಳಿವೆ. ಕೆಲವೆಡೆ ಭಾಷೆ ಬಹಳ ಸಂಕೀರ್ಣವಾದಾಗ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸ್ನೇಹಿತರ ನೆರವು ಪಡೆದಿದ್ದೇನೆ. ಸಮುದ್ರ ಹಾಗೂ ನದಿಯನ್ನು ವರ್ಣಿಸಲು ಮೋದಿ ಒಂದು ಸಾಲು ಬಳಸುತ್ತಾರೆ. ಅದು ಬಹಳ ಸುಂದರವಾಗಿದೆ. ನಾನದರ ಅನುವಾದದಲ್ಲಿ ಕಳೆದೇಹೋಗಿದ್ದೇನೆ. ನನ್ನ ಪ್ರಕಾರ, ಒಬ್ಬ ಒಳ್ಳೆಯ ಗುಜರಾತಿ ನಟ ತನ್ನ ಅದ್ಭುತವಾದ ಕಂಠದಲ್ಲಿ ಆ ಸಾಲುಗಳನ್ನು ಸುಂದರವಾಗಿ ಓದಿದರೆ ಬಹಳ ಚೆನ್ನಾಗಿರುತ್ತದೆ. ಪ್ರಕೃತಿ ಮತ್ತು ರಾಜಕೀಯದ ಕುರಿತು: ಈ ಪುಸ್ತಕದಲ್ಲಿ ಮೋದಿ ಬೇರೆ ಬೇರೆ ರೀತಿಯ ಅನುಭವ ಹಾಗೂ ವಿಷಯಗಳನ್ನು ಹಂಚಿ ಕೊಳ್ಳುತ್ತಾರೆ. ಒಂದೆಡೆ ಗ್ರಹದ ಬಗ್ಗೆ ಮಾತನಾಡುತ್ತಾರೆ.

ಇನ್ನೊಂದೆಡೆ ತಮ್ಮ ಕುರಿತು ತಾಯಿಗಿರುವ ಭಾವನೆಗಳ ಬಗ್ಗೆೆ ಹೇಳುತ್ತಾರೆ. ಪ್ರಕೃತಿಯ ಕುರಿತು ಹೇಳುವಾಗ ಅವರು ಪ್ರಕೃತಿ ಯನ್ನು ಎಷ್ಟು ವಿಸ್ತಾರವಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸುತ್ತಾರೆ ಅಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅವರ ಸೂಕ್ಷ್ಮ ಗ್ರಹಿಕೆ ಗಳನ್ನು ನೋಡಿ ಬೆರಗಾಗಿದ್ದೇನೆ. ಅವರ ಕಲ್ಪನಾಶಕ್ತಿ ಬಹಳ ವಿಸ್ತಾರವಾಗಿದೆ. ತಮಗಿರುವ ಸೂಕ್ಷ್ಮತನವನ್ನು ಬಳಸಿ ದೊಡ್ಡ ದೊಡ್ಡ ವಿಷಯಗಳನ್ನು ಅವರು ಅದ್ಭುತವಾಗಿ ವಿಶ್ಲೇಷಿಸುತ್ತಾರೆ. ಮೋದಿಯವರಿಗೆ ನಾನೇನಾದರೂ ಒಂದು ಪ್ರಶ್ನೆ ಕೇಳಬೇಕು ಅಂದರೆ ‘ನಿಮ್ಮನ್ನು ಏಕೆ ಅಷ್ಟೊಂದು ಜನರು ಪ್ರೀತಿಸುತ್ತಾರೆ ಮತ್ತು ಏಕೆ ಅಷ್ಟೊಂದು ಜನ ದ್ವೇಷಿಸುತ್ತಾರೆ?’ ಎಂದು ಕೇಳುತ್ತೇನೆ! 1986, ರಾಜಕಾರಣ, ಅವರ ಬದುಕು, ಆರ್‌ಎಸ್‌ಎಸ್ ಹೀಗೆ ನನಗೆ ಸಾಕಷ್ಟು ಕುತೂಹಲಗಳಿವೆ.

ನನಗೆ ಯಶಸ್ಸು ಹಾಗೂ ಸೋಲಿನ ಭಾವನೆಗಳ ಪರಿಚಯ ಸಾಕಷ್ಟಿದೆ. ಅಗತ್ಯಬಿದ್ದಾಗ ಒಂದರಿಂದ ಇನ್ನೊಂದಕ್ಕೆ ನಾನು ಬೇಗ ಸ್ವಿಚ್ ಆಗುತ್ತೇನೆ. ಆದರೆ, ಈ ಪುಸ್ತಕ ನನಗೆ ಹೊಸತೇ ಆದ ಜಗತ್ತನ್ನು ತೋರಿಸಿದೆ. ಮೋದಿಯವರೊಳಗೊಂದು ನೋವಿನ ಅಲೆ
ನಿರಂತರವಾಗಿದೆ. ಅವರು ಅದನ್ನು ನಿವಾಳಿಸಿ ಎಸೆಯುತ್ತಿಲ್ಲ. ಬದಲಿಗೆ ಅದನ್ನು ಸಮಗ್ರವಾಗಿ, ಶಾಂತವಾಗಿ ಹಾಗೂ ಧ್ಯಾನದ ರೂಪದಲ್ಲಿ ಸ್ವೀಕರಿಸಿ, ಅತ್ಯಂತ ಉತ್ಪಾದಕ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದನ್ನೆಲ್ಲ ಇಲ್ಲಿ ಬರೆದಿದ್ದಾಾರೆ. ಹೆಚ್ಚು ಯೋಚನೆ ಮಾಡುವ ಎಲ್ಲರ ಕತೆಯೂ ಇದೇ. ಅವರಿಗೆ ಶಾಂತಿಯಿಲ್ಲ.

ಶಕ್ತಿ ಸಿಗುವ ಬಗೆ: ಮೋದಿಯವರ ಬಗ್ಗೆ ನಾನೂ ಸಾಕಷ್ಟು ಕತೆಗಳನ್ನು ಕೇಳಿದ್ದೇನೆ. ನವರಾತ್ರಿಯಲ್ಲಿ ಶಕ್ತಿದೇವತೆಯ ಆರಾಧನೆ ಗಾಗಿ ಅವರು ಕೈಗೊಳ್ಳುವ ಒಂಬತ್ತು ದಿನದ ಉಪವಾಸ ವ್ರತದ ಬಗ್ಗೆೆಯೂ ಕೇಳಿದ್ದೇನೆ. ನಮಗೆಲ್ಲರಿಗೂ ಒಬ್ಬೊಬ್ಬ ಇಷ್ಟದೇವತೆ ಇರುತ್ತಾರೆ. ಮೋದಿಯವರಿಗೆ ಜಗತ್ ಜನನಿಯೇ ಆ ದೇವತೆ. ಸಿನಿಮಾಗಳಲ್ಲಿ ದಿಲೀಪ್ ಕುಮಾರ್ ಹಾಗೂ ಅಮಿ ತಾಭ್ ಬಚ್ಚನ್ ಯಾವಾಗಲೂ ಶಿವನನ್ನು ಕರೆಯುತ್ತಾರೆ. ಮೀನಾಕುಮಾರಿ ಯಾವಾಗಲೂ ಕೃಷ್ಣನ ಮುಂದೆ ಅಳುತ್ತಾರೆ. ಸಾಮಾನ್ಯವಾಗಿ ಸ್ತ್ರೀ ಪಾತ್ರಗಳೆಲ್ಲ ಹೆಣ್ಣು ದೇವತೆಯೊಂದನ್ನು ಆರಾಧಿಸುತ್ತವೆ.

ಏಕೆಂದರೆ ಆಕೆ ಶಕ್ತಿ. ನನ್ನ ಪ್ರಕಾರ ಪ್ರಧಾನಿ ಮೋದಿಯವರನ್ನು ಬಾಲ್ಯಕಾಲದ ಅನುಭವಗಳೇ ಈಗಿನ ವ್ಯಕ್ತಿಯಾಗಿ ರೂಪಿಸಿವೆ. ಅವರಲ್ಲಿ ನೆಲೆಯಾಗಿರುವ ದೇವತೆಯ ಕಲ್ಪನೆ ನಮ್ಮಲ್ಲೂ ಅನೇಕರಲ್ಲಿ ನೆಲೆಯಾಗಿರುವ ಕಲ್ಪನೆಯಂತೆ ತಾಯಿಯಿಂದ ಹುಟ್ಟಿ ಕೊಂಡಿದೆ ಎಂದು ನನಗನ್ನಿಸುತ್ತದೆ.

ಇಂದಿನ ಬಾಲಿವುಡ್: ಈಗ ನಾನು ನೋಡುತ್ತಿರುವ ಬಾಲಿವುಡ್ ನನ್ನ 40 ವರ್ಷಗಳ ಅನುಭವದಲ್ಲಿ ಎಂದೂ ಹೀಗಿರಲಿಲ್ಲ. ಈಗ ಎಲ್ಲವೂ ಕೆಸರು ಕೆಸರು. ಈಗ ಮಾತನಾಡಿಕೊಳ್ಳುತ್ತಿರುವ ಮಾದಕ ಲೋಕ ಅಥವಾ ನಶೆಯ ಪಾರ್ಟಿಗಳನ್ನು ನಾನು ಯಾವತ್ತೂ ನೋಡಿಲ್ಲ. ಬಹುಶಃ ನಾನು ಬೇರೆಯದೇ ಜಗತ್ತಿನಲ್ಲಿ ಬದುಕಿದ್ದೆ. ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಆಡಿದ ಮಾತಿಗೆ ನಾನು ಭೇಷ್ ಹೇಳುತ್ತೇನೆ. ಆದರೆ, ಕೆಲವೇ ಕೊಳೆತ ಟೊಮೆಟೋಗಳಿಗಾಗಿ ನೀವು ಇಡೀ ಬುಟ್ಟಿಯನ್ನೇ ದೂಷಿಸಬಾರದು. ಅಪರಾಧ, ಆತ್ಮಹತ್ಯೆ ಯಂತಹ ಘಟನೆಗಳು ಎಲ್ಲೆಡೆ ನಡೆಯುತ್ತವೆ. ಅವು ಸಿನಿಮಾ ಜಗತ್ತಿಗಷ್ಟೇ ಸೀಮಿತವಲ್ಲ. ನಿಜವಾಗಲೂ ಬಾಲಿವುಡ್ ಎಂಬುದು ಪಾಪಿಗಳ ಲೋಕವೇ ಎಂದು ಕೆಲ ಸ್ನೇಹಿತರ ನನ್ನ ಬಳಿ ಕೇಳುತ್ತಾರೆ. ಅದೊಂದು ಉತ್ಪ್ರೇಕ್ಷೆಯಷ್ಟೆ.

ಯಾರಿದು ಭಾವನಾ?
ಮೂಲತಃ ಮುಂಬೈನವರಾದ ಭಾವನಾ ಸೋಮಾಯ ಅವರು ಚಿತ್ರ ವಿಮರ್ಶಕಿ ಹಾಗೂ ಪತ್ರಕರ್ತೆ. ಭಾರತೀಯ ಚಿತ್ರರಂಗ, ಅಮಿತಾಬ್ ಬಚ್ಚನ್ ಅವರ ಕುರಿತಾದ ಪುಸ್ತಕ ಸೇರಿದಂತೆ ಒಟ್ಟು 17 ಪುಸ್ತಕಗಳನ್ನು ಭಾವನಾ ಅವರು ಬರೆದಿದ್ದಾರೆ. ಇದರೊಂದಿ ಗೆ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಅಂಕಣಗಳನ್ನು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಿಗೆ ಬರೆದಿರುವ ಅವರು, 2017ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಅನುವಾದ ಎನ್ನುವುದು ಸ್ವಂತ ಕೃತಿ ರಚಿಸುವುದಕ್ಕಿಂತ ಕಷ್ಟದ ಕೆಲಸ. ಏಕೆಂದರೆ ನಾನು ಸ್ವಂತ ಲೇಖನ ಬರೆಯುವಾಗ ಕೇವಲ ನನ್ನ ಹೊಣೆಗಾರಿಕೆ ಇರುತ್ತದೆ. ಆದರೆ ಅನುದಾನದ ವೇಳೆ ನನ್ನೊಂದಿಗೆ, ಮೂಲ ಲೇಖಕರ ಹೊಣೆಗಾರಿಕೆಯೂ ನನ್ನ ಮೇಲಿರು ತ್ತದೆ. – ಭಾವನಾ ಸೋಮಾಯ