ನವದೆಹಲಿ : ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಅಕಾಲಿ ದಳದ ಸಂಸದೆ, ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ..
ಲೋಕಸಭೆಯಲ್ಲಿ ಅಂಗೀಕರಿಸಿದ ಕೃಷಿ ಸಂಬಂಧಿತ ಮಸೂದೆಗಳಿಗೆ ಬಾದಲ್ ಗುರುವಾರ ವಿರೋಧ ವ್ಯಕ್ತಪಡಿಸಿ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.
‘ರೈತ ವಿರೋಧಿ ಸುಗ್ರೀವಾಜ್ಞೆ ಮತ್ತು ಶಾಸನವನ್ನು ವಿರೋಧಿಸಿ ನಾನು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರ ಮಗಳು ಮತ್ತು ಸಹೋದರಿಯಂತೆ ನಿಲ್ಲಲು ಹೆಮ್ಮೆ ಪಡುತ್ತೇನೆ’ . ‘ರೈತರ ಆತಂಕಗಳನ್ನು ಪರಿಹರಿಸದೆ ಕೃಷಿ ಕ್ಷೇತ್ರದ ಮಸೂದೆಗಳನ್ನು ತಂದ ಸರ್ಕಾರದ ಭಾಗವಾಗಲು ನಾನು ಬಯಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಹರ್’ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ. ಸಚಿವ ನರೇಂದ್ರ ಸಿಂಗ್ ತೋಮಾರ್’ಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಹರ್’ಸಿಮ್ರತ್ ಕೌರ್ ಆಹಾರ ಸಂಸ್ಕರಣೆ ಖಾತೆ ಸಚಿವೆಯಾಗಿದ್ದರು.