ಗುವಾಹಟಿಯಲ್ಲಿ ನಡೆಯುವ ಮೊದಲ ಐಪಿಎಲ್ ಪಂದ್ಯ. ಹೀಗಾಗಿ ಅಸ್ಸಾಂ ಕ್ರಿಕೆಟ್ ಮಂಡಳಿ ಪಂದ್ಯದ ಆರಂಭಕ್ಕೂ ಮುನ್ನ ಲೇಸರ್ ಶೋ, ಜಾನ ಪದ ನೃತ್ಯದೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಪಂಜಾಬ್ ಮಳೆಪೀಡಿತ ಆಟ ದಲ್ಲಿ ಕೋಲ್ಕತಾ ನೈಟ್ರೈಡರ್ ವಿರುದ್ಧ ಡಿ-ಎಲ್ ನಿಯಮದಂತೆ 7 ರನ್ನುಗ ಳಿಂದ ರೋಚಕವಾಗಿ ಜಯಿಸಿತ್ತು. ಇನ್ನೊಂದೆಡೆ ರಾಜಸ್ಥಾನ್ 72 ರನ್ನುಗ ಳಿಂದ ಹೈದರಾಬಾದ್ ತಂಡವನ್ನು ಬಗ್ಗುಬಡಿದಿತ್ತು.
ಚೊಚ್ಚಲ ಐಪಿಎಲ್ ಚಾಂಪಿಯನ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ಖ್ಯಾತಿಯ ರಾಜಸ್ಥಾನ್ ರಾಯಲ್ಸ್ ಒಂದು ಪರಿಪೂರ್ಣ ಕ್ರಿಕೆಟ್ ಪ್ಯಾಕೇಜ್ ಹೊಂದಿರುವ ತಂಡ. ಬ್ಯಾಟಿಂಗ್ ವಿಭಾ ಗದ ಬಲಿಷ್ಠರಾದ ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಹೈದರಾಬಾದ್ ವಿರುದ್ಧ ಭರ್ಜರಿ ಅರ್ಧ ಶತಕ ಸಿಡಿಸಿದ್ದರು. ಕೆಳ ಸರದಿಯ ಸಿಮ್ರನ್ ಹೆಟ್ಮೈರ್ ಅತ್ಯಂತ ಅಪಾಯಕಾರಿ ಬ್ಯಾಟರ್. ಮಧ್ಯಮ ಕ್ರಮಾಂಕದ ದೇವದತ್ತ ಪಡಿಕ್ಕಲ್, ರಿಯಾನ್ ಪರಾಗ್ ಕೂಡ ಉತ್ತಮ ಪ್ರದರ್ಶನ ನೀಡಬಲ್ಲರು.
ರಾಜಸ್ಥಾನ್ ಬೌಲಿಂಗ್ ವಿಭಾಗ ಕೂಡ ಘಾತಕ. ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ನವದೀಪ್ ಸೈನಿ, ಟೀಮ್ ಇಂಡಿಯಾದ ಸ್ಪಿನ್ದ್ವಯರಾದ ಆರ್. ಅಶ್ವಿನ್, ಯಜುವೇಂದ್ರ ಚಹಲ್ ಅವರನ್ನು ಒಳಗೊಂಡಿದೆ. ಚಹಲ್ 17ಕ್ಕೆ 4 ವಿಕೆಟ್ ಉಡಾಯಿಸಿ ಹೈದರಾಬಾದ್ ತಂಡವನ್ನು ಹೆದರಿಸಿದ್ದರು. ಬೌಲ್ಟ್ ಕೂಡ ಬೊಂಬಾಟ್ ಬೌಲಿಂಗ್ ನಡೆಸಿದ್ದರು. ಸಂದೀಪ್ ಶರ್ಮ, ಕುಲದೀಪ್ ಸೇನ್, ಆಯಡಂ ಝಂಪ, ಒಬೆಡ್ ಮೆಕಾಯ್ ಮೊದಲಾದವರು ರೇಸ್ನಲ್ಲಿದ್ದಾರೆ.