Saturday, 23rd November 2024

ಭ್ರಷ್ಟಾಚಾರ ಪರಿವಾರ ವಿರುದ್ಧ ಹೋರಾಡಲು ಬಿಜೆಪಿ ಸಿದ್ಧವಿದೆ: ಪ್ರಧಾನಿ ಮೋದಿ

ವದೆಹಲಿ: ಭ್ರಷ್ಟಾಚಾರ ಪರಿವಾರ ವಿರುದ್ಧ ಹೋರಾಡಲು ಎಂಥಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವು ದಕ್ಕೂ ಬಿಜೆಪಿ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಕ್ಷದ ಕಛೇರಿಯಲ್ಲಿ ನಡೆದ ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಹನುಮ ಜಯಂತಿ.

ಇಂದು ಬಜರಂಗ ಬಲಿಯ ಹೆಸರು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಹನುಮಂತ ಅಪಾರ ಶಕ್ತಿಯನ್ನು ಹೊಂದಿದ್ದಾನೆ. ಹನುಮಂತ ಹೇಗೆ ರಾಕ್ಷಸರನ್ನು ಎದುರಿಸುತ್ತಿದ್ದನೋ ಹಾಗೆಯೇ ಬಿಜೆಪಿ ಕೂಡ ಕಾನೂನು ಸುವ್ಯವಸ್ಥೆ ಭಲ ವರ್ಧನೆಗೆ ಬದ್ಧವಾಗಿದೆ ಎಂದರು.

ಭಾರತ ಮಾತೆಯ ರಕ್ಷಣೆಗೆ ಬಿಜೆಪಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಭ್ರಷ್ಟಾಚಾರ ಮತ್ತು ಕೌಟುಂಬಿಕತೆಯ ವಿರುದ್ಧ ಹೋರಾಡಲು ಹನುಮಂತನಂತೆ ಗಟ್ಟಿಯಾಗಬೇಕು ಎಂದು ಹೇಳಿದರು.

ದೇಶದಾದ್ಯಂತ 10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಧಾನ ಮಂತ್ರಿಗಳ ಭಾಷಣವನ್ನು ನೇರ ಪ್ರಸಾರ ಮಾಡಲಾಯಿತು ಬಿಜೆಪಿ ಸಂಸ್ಥಾಪನಾ ದಿನ ಎಂದರೆ ಇಂದಿನಿಂದ ಬಿ.ಆರ್.ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14ರವರೆಗೆ ಏಳು ದಿನಗಳ ಕಾಲ ಪಕ್ಷವು ಸಾಮಾಜಿಕ ನ್ಯಾಯ ಸಪ್ತಾಹವನ್ನು ಆರಂಭಿಸಿದೆ.